ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ - LIVE - INVEST KARNATAKA 2025
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/11-02-2025/640-480-23521364-thumbnail-16x9-news.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 11, 2025, 5:27 PM IST
|Updated : Feb 11, 2025, 8:21 PM IST
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮ ನೇರ ಪ್ರಸಾರ ಇಲ್ಲಿದೆ. ಇಂದಿನಿಂದ ಫೆ.14ರ ವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲಿರುವ ಉದ್ದಿಮೆ ದಿಗ್ಗಜರು, ಹೂಡಿಕೆದಾರರು, ನವೋದ್ಯಮಗಳ ಕನಸುಗಾರರು, ನೀತಿ ನಿರೂಪಣೆಯ ಚಿಂತಕರರು ಭಾಗಿಯಾಗಿದ್ದಾರೆ. ಫೆಬ್ರುವರಿ 12 ರಿಂದ 14ರ ವರೆಗೆ ಸಮಾವೇಶ ಸ್ಥಳದಲ್ಲಿ ವಿವಿಧ ವಿಚಾರಗೋಷ್ಠಿಗಳು, ಸಂವಾದ, ಸಮೂಹ ಚರ್ಚೆಗಳೂ ನಡೆಯಲಿವೆ.75ಕ್ಕೂ ಹೆಚ್ಚು ಗಣ್ಯ ಭಾಷಣಕಾರರು ಭಾಗವಹಿಸಲಿದ್ದಾರೆ. 25ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು, 10ಕ್ಕೂ ಹೆಚ್ಚು ದೇಶಗಳ ಜೊತೆಗಿನ ಸಭೆ ಮತ್ತು ಎಸ್‌ಎಂಇ ಕನೆಕ್ಟ್‌ಗೆ ಸಂಬಂಧಿಸಿದ ಸಮಾಲೋಚನೆಗಳಿಗೆ ಈ ಹೂಡಿಕೆ ಶೃಂಗಸಭೆಯು ಸಾಕ್ಷಿಯಾಗಲಿದೆ. ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಗತ್ಯವಾದ ಭೂಮಿಕೆಯನ್ನು ರಾಜ್ಯ ಸರ್ಕಾರವು ಹದಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹತ್ತಾರು ಪ್ರಥಮಗಳನ್ನು ತನ್ನ ಮುಡಿಗೆ ಏರಿಸಿಕೊಂಡಿರುವ ಕರ್ನಾಟಕವು, ಈ ಸಮಾವೇಶದ ನೆರವಿನಿಂದ ತನ್ನ ಕೈಗಾರಿಕಾ ಪ್ರಗತಿಯ ವೇಗ ಹೆಚ್ಚಿಸಲು ದೃಢ ನಿರ್ಧಾರ ಮಾಡಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.
Last Updated : Feb 11, 2025, 8:21 PM IST