ಢಾಕಾ : ಸಿಲ್ಹೆಟ್ ನಗರದಲ್ಲಿ ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆ ಪುನರಾರಂಭಗೊಂಡಿರುವುದರಿಂದ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಎಚ್ಚರಿಕೆ ವಹಿಸಬೇಕು ಎಂದು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ಸಲಹೆ ನೀಡಿದೆ. ಮೀಸಲಾತಿಯ ವಿರುದ್ಧ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ಮತ್ತೆ ಆರಂಭವಾಗಿದ್ದು, ಓರ್ವ ಪ್ರತಿಭಟನಾಕಾರನಿಗೆ ಒಬ್ಬರಿಗೆ ಗುಂಡು ತಗುಲಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ಸಿಲ್ಹೆಟ್ನ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ" ಎಂದು ಸಹಾಯಕ ಹೈಕಮಿಷನ್ ಆಫ್ ಇಂಡಿಯಾ (ಎಎಚ್ಸಿಐ) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ. ತುರ್ತು ಪರಿಸ್ಥಿತಿಗಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಸಹ ಶೇರ್ ಮಾಡಲಾಗಿದೆ.
ಎಎಚ್ಸಿಐ ಇದು ಸಿಲ್ಹೆಟ್ನಲ್ಲಿರುವ ಭಾರತ ಸರ್ಕಾರದ ಪ್ರತಿನಿಧಿ ಕಚೇರಿಯಾಗಿದೆ ಮತ್ತು ಅದರ ಕಾನ್ಸುಲರ್ ನ್ಯಾಯವ್ಯಾಪ್ತಿಯಲ್ಲಿ (ಸಿಲ್ಹೆಟ್, ಮೌಲ್ವಿಬಜಾರ್, ಸುನಮ್ ಗಂಜ್, ಹಬಿಗಂಜ್, ಕಿಶೋರ್ ಗಂಜ್ ಮತ್ತು ನೆಟೊರೊಕೋನ ಜಿಲ್ಲೆಗಳು), ದ್ವಿಪಕ್ಷೀಯ ವ್ಯಾಪಾರ, ಸಂಸ್ಕೃತಿ ಇತ್ಯಾದಿಗಳ ಉತ್ತೇಜನಕ್ಕಾಗಿ ವೀಸಾ ವಿತರಣೆ ಮತ್ತು ಭಾರತೀಯ ಪ್ರಜೆಗಳ ಕಲ್ಯಾಣಕ್ಕೆ ಜವಾಬ್ದಾರವಾಗಿದೆ. ಎಎಚ್ಸಿಐ ಢಾಕಾದ ಭಾರತೀಯ ಹೈಕಮಿಷನ್ನ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.