ETV Bharat / bharat

ಮಹಾಕುಂಭ ಮೇಳ: ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು - BUS FIRE INCIDENT

ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ ಬಸ್​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

BUS FIRE ONE PERSON DEATH  BUS CAUGHT FIRE IN MATHUR  FIRE BREAKS OUT IN TELANGANA BUS  MATHURA NEWS
50 ಜನರಿದ್ದ ಖಾಸಗಿ ಬಸ್​ಗೆ ಹೊತ್ತಿಕೊಂಡ ಬೆಂಕಿ (ETV Bharat)
author img

By ETV Bharat Karnataka Team

Published : Jan 15, 2025, 9:12 AM IST

ಮಥುರಾ (ಉತ್ತರಪ್ರದೇಶ): ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ ಹೊತ್ತಿ ಉರಿದಿದೆ. ಸುದ್ದಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಬಸ್​ಗೆ ಬೆಂಕಿ: ತೆಲಂಗಾಣದ 50 ಜನರಿದ್ದ ಖಾಸಗಿ ಬಸ್​ವೊಂದು ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ಮಂಗಳವಾರ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಸ್ನಾನ ಮಾಡಿದ ನಂತರ ತೆಲಂಗಾಣದ 50 ಪ್ರಯಾಣಿಕರ ಗುಂಪು ಖಾಸಗಿ ಬಸ್ ಹತ್ತಿ ಹೆದ್ದಾರಿಯಲ್ಲಿರುವ ಪ್ರವಾಸಿ ಸೌಲಭ್ಯ ಕೇಂದ್ರಕ್ಕೆ ತೆರಳುತ್ತಿದ್ದರು.

ಈ ವೇಳೆ ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಆವರಿಸಿ, ಬಸ್ ಸಂಪೂರ್ಣ ಸುಟ್ಟು ಹೋಯಿತು. ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಬಸ್​ನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದ್ರೆ ಬಸ್ಸಿನಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರು ಹೊರಬರಲು ಸಾಧ್ಯವಾಗದೇ ಒಳಗಡೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.

ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟೊತ್ತಿಗಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಬಸ್​ನಲ್ಲಿ ಮೃತ ಪ್ರಯಾಣಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಿಗರೇಟ್ ಸೇದಿದ್ದರಿಂದ ಹಠಾತ್ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ತಲುಪಿದ ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಮಾತನಾಡಿ, ತೆಲಂಗಾಣದಿಂದ ಬಂದ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ಆಹಾರ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.

ಓದಿ: ಮಕರಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು; 2 ತಿಂಗಳಲ್ಲಿ 40 ಲಕ್ಷ ಯಾತ್ರಾರ್ಥಿಗಳು ಶಬರಿಮಲೆಗೆ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.