ETV Bharat / international

ಚೀನಾ ಶಿಲ್ಪಿಯ ಕಣ್ಣಿಗೆ ಬುದ್ಧನಂತೆ ಶಾಂತಿದೂತನಾಗಿ ಕಂಡ ಡೊನಾಲ್ಡ್ ಟ್ರಂಪ್​ - BUDDHA LIKE TRUMP STATUES

ಚೀನಾ ಶಿಲ್ಪಿಯೊಬ್ಬರು ಬುದ್ಧನಂತೆ ಕಾಲು ಮಡಚಿ, ಅರ್ಧ ಕಣ್ಣು ಬಿಟ್ಟು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವ ಡೊನಾಲ್ಡ್‌ ಟ್ರಂಪ್​ ಪ್ರತಿಮೆ ನಿರ್ಮಿಸಿದ್ದಾರೆ.

buddha-like-trump-statues-selling-in-china-artist-explains-why-he-chose-us-president-elect
ಟ್ರಂಪ್ ಅವರ ಪ್ರತಿಮೆಯೊಂದಿಗೆ ಶಿಲ್ಪಿ ಹಾಂಗ್​ ಜಿನ್ಶಿ (AFP)
author img

By ETV Bharat Karnataka Team

Published : Jan 13, 2025, 12:22 PM IST

ಚೀನಾ: ಬುದ್ಧ ಎಂದರೆ ಶಾಂತಿ ಮತ್ತು ತ್ಯಾಗದ ಸಂಕೇತ. ಅಮೆರಿಕದ ನಿಯೋಜಿತ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಅವರಿಗೆ ಈ ಎರಡು ಗುಣಗಳಿವೆಯೇ? ಇದು ಚರ್ಚೆಯ ವಿಷಯ. ಆದರೆ, ಚೀನಾದ ಶಿಲ್ಪಿಯೊಬ್ಬರು ಟ್ರಂಪ್‌ ಅವರಲ್ಲಿ ಬುದ್ಧನನ್ನು ಕಂಡಿದ್ದಾರೆ. ಚೀನಾದ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳ ಕಾರ್ಯಾಗಾರದಲ್ಲಿ ಟ್ರಂಪ್‌ ಅವರೊಳಗಿನ ಬುದ್ಧನ ದರ್ಶನವಾಗಿದೆ. ಎರಡನೇ ಬಾರಿ ಅಮೆರಿಕದ ಅಧ್ಯಕ್ಷ ಪದವಿಗೇರಲು ಸಜ್ಜಾಗಿರುವ ಟ್ರಂಪ್​, ಶಿಲ್ಪಿಯ ಕಣ್ಣಿಗೆ ದೈವಿಕ ವ್ಯಕ್ತಿಯಾಗಿ ಕಂಡಿದ್ದಾರೆ.

ಬುದ್ಧನಂತೆ ಕಾಲು ಮಡಚಿ, ಅರ್ಧ ಕಣ್ಣಿನಲ್ಲಿ ಧ್ಯಾನಸ್ಥರಾಗಿರುವಂತೆ ಶಿಲ್ಪಿಯೊಬ್ಬರು ಟ್ರಂಪ್​ ಅವರ ಪ್ರತಿಮೆ ನಿರ್ಮಿಸಿದ್ದಾರೆ. ಹಾಂಗ್ ಜಿನ್ಶಿ ಈ ಪ್ರತಿಮೆ ನಿರ್ಮಾಣದ ಹಿಂದಿನ ರೂವಾರಿ.

ಶಿಲ್ಪಿ ಹಾಂಗ್ ಮಾತನಾಡಿ​​, "ಟ್ರಂಪ್ ಅವರು​ ಚುನಾವಣೆ ಗೆದ್ದಾಗ ನನಗೆ ಸಾಕಷ್ಟು ಆಸಕ್ತಿ ಮೂಡಿತು. ಆರಂಭದಲ್ಲಿ ನಾನು ಇದನ್ನು ವಿನೋದಕ್ಕೆಂದು ಇದನ್ನು ರೂಪಿಸಿದೆ. ರಾಜಕೀಯ ಎಂಬುದು ಬೇಸರದ ಸಂಗತಿ. ಆದರೆ, ಟ್ರಂಪ್​ ಆನ್​ಲೈನ್‌ನಲ್ಲಿ ಭಾರಿ ಮೆಚ್ಚುಗೆ ಗಳಿಸಿದ ವ್ಯಕ್ತಿಯೂ ಆಗಿದ್ದಾರೆ ಎಂಬುದನ್ನು ಕಂಡೆ" ಎಂದರು.

47 ವರ್ಷದ ಹಾಂಗ್​​ ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಅನೇಕ ಸೆರಾಮಿಕ್​ ಸೃಷ್ಟಿಯನ್ನು ಮಾಡಿದ್ದಾರೆ. ಇದೀಗ ಟ್ರಂಪ್​ ಶಾಂತಿದೂತನಾಗಿ ಕಾಣಿಸಿಕೊಂಡಿರುವುದು ಅನೇಕ ಗ್ರಾಹಕರಲ್ಲಿ ನಗು ಮೂಡಿಸಿದೆ. ಪ್ರತಿಮೆಯ ಅನೇಕ ನಕಲುಗಳನ್ನು ಅಮೆಜಾನ್​ ಮತ್ತು ಚೀನಿ ಮಾಲೀಕತ್ವದ ಟೆಮು ಜಾಲತಾಣದಲ್ಲಿ 45 ಡಾಲರ್​ಗೆ ಮಾರಾಟ ಮಾಡಲಾಗುತ್ತಿದೆ.

ನನಗಿದು ಮೋಜಿನ ಕೆಲಸ: ಜನಪ್ರಿಯ ವ್ಯಕ್ತಿಗಳನ್ನು ಮತ್ತು ಅಧಿಕಾರದಲ್ಲಿರುವ ವ್ಯಕ್ತಿಗಳನ್ನು ಈ ರೀತಿ ಹಾಸ್ಯಭರಿತವಾಗಿ ರಚಿಸುವುದು ನನಗೆ ಮೋಜಿನ ವಿಷಯ ಎನ್ನುತ್ತಾರೆ ಹಾಂಗ್​​. ಇದೀಗ ಇದೇ ರೀತಿಯ ಮತ್ತೊಬ್ಬ ವ್ಯಕ್ತಿಯ ಪ್ರತಿಮೆ ನಿರ್ಮಿಸಲು ಸಜ್ಜಾಗಿರುವುದಾಗಿಯೂ ಹಾಂಗ್​ ತಿಳಿಸಿದ್ದಾರೆ. ಆ ವ್ಯಕ್ತಿ ಬೇರಾರೂ ಅಲ್ಲ. ಟ್ರಂಪ್​ ಗೆಲುವಿಗೆ ಶ್ರಮವಹಿಸಿದ ಎಲಾನ್​ ಮಸ್ಕ್. ಆದರೆ, ಮಸ್ಕ್​ ಅವರನ್ನು ಐರಾನ್​ ಮಾನ್​, ಸೂಪರ್​ ಹೀರೋ ಆಗಿ ಲೋಹದ ಸೂಟ್​ನಲ್ಲಿ ರೂಪಿಸುತ್ತೇನೆ ಎಂದಿದ್ದಾರೆ. (ಎಎಫ್‌ಪಿ)

ಇದನ್ನೂ ಓದಿ: ನಾನು ಟ್ರಂಪ್ ಸೋಲಿಸುತ್ತಿದ್ದೆ: ಅಧ್ಯಕ್ಷ ಜೋ ಬೈಡನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.