ಮಹಾಕುಂಭ ನಗರ(ಉತ್ತರ ಪ್ರದೇಶ): ವಿವಿಧ ಅಖಾಡಾಗಳ ಸಂತರು ಮತ್ತು ನಾಗಾ ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನದಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದ 'ಅಮೃತ ಸ್ನಾನ' ಮಾಡಿ ಪುನೀತರಾಗಿದ್ದಾರೆ.
ಮಂಗಳವಾರ ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ ಸದಸ್ಯರು ಮೊದಲು 'ಅಮೃತ ಸ್ನಾನ' ಮಾಡಿದರು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಹಾಕುಂಭ ಮೇಳದ ಮೊದಲ ಅಮೃತ ಸ್ನಾನಕ್ಕಾಗಿ ನಿರಂಜನಿ ಅಖಾಡದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.
#WATCH | Prayagraj, Uttar Pradesh | Anand Akhada Acharya Mandleswar Balkanand ji Maharaj leads the processions for the first Amrit Snan of #MahaKumbhMela2025🕉️on the auspicious occasion of Makar Sankranti.
— ANI (@ANI) January 14, 2025
Sadhus of the 13 akhadas of Sanatan Dharm will take holy dip at Triveni… pic.twitter.com/fptLFfKOhI
ಸೋಮವಾರ 'ಪುಷ್ಯ ಪೂರ್ಣಿಮಾ' ದಿನದಂದು ಮೊದಲ 'ಸ್ನಾನ' ನಡೆದಿತ್ತು. ಮಹಾಕುಂಭ ಮೇಳದಲ್ಲಿ ವಿವಿಧ ಪಂಗಡಗಳ 13 ಅಖಾಡಗಳು ಭಾಗವಹಿಸುತ್ತವೆ. ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಒತ್ತು ನೀಡುವ ಮೂಲಕ ಹೆಸರುವಾಸಿಯಾಗಿರುವ ನಿರಂಜನಿ ಅಖಾಡಾ ಈ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಪ್ರಮುಖ ಅಖಾಡಾಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮ ಬಗ್ಗೆ ಒಲವು ಹೊಂದಿರುವವರಿಗೆ ಮಾರ್ಗದರ್ಶನ ನೀಡುತ್ತದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ಮೊದಲ ಅಮೃತ ಸ್ನಾನದ ದಿನದಂದು 3.50 ಕೋಟಿಗೂ ಹೆಚ್ಚು ಭಕ್ತರು, ಸಂತರು ಮತ್ತು ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೊದಲು ಅಮೃತ ಸ್ನಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸನಾತನ ಧರ್ಮ, ಮಹಾಕುಂಭಮೇಳದ ಆಡಳಿತ ಮಂಡಳಿ, ಸ್ಥಳೀಯ ಆಡಳಿತ, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು, ಅಂಬಿಗರು ಮತ್ತು ಎಲ್ಲಾ ಅಖಾಡಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು" ತಿಳಿಸಿದ್ದಾರೆ.
#WATCH | Prayagraj | Naga sadhus of Niranjani and Anand Akharas proceed for 'Amrit Snan' at #MahaKumbhMela2025 pic.twitter.com/oXZ5NJiNsl
— ANI (@ANI) January 14, 2025
"ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ರಾಜ್ಯದ ಜನತೆಗೆ ಅಭಿನಂದನೆಗಳು. ಪುಣ್ಯ ಫಲ ನೀಡಲಿ, ಮಹಾಕುಂಭ ನಡೆಯಲಿ. ಈ ಪವಿತ್ರ ಕಾರ್ಯಕ್ರಮವು ಭಾರತದ ಸನಾತನ ಸಂಸ್ಕೃತಿ ಮತ್ತು ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ" ಎಂದಿದ್ದಾರೆ.
ತ್ರಿವೇಣಿ ಸಂಗಮದಲ್ಲಿ 'ಹರ ಹರ ಮಹಾದೇವ್', 'ಜೈ ಶ್ರೀ ರಾಮ್' ಮತ್ತು 'ಜೈ ಗಂಗಾ ಮಾತೆ' ಘೋಷಣೆಗಳು ಎಲ್ಲೆಡೆ ಮೊಳಗಿದವು. ಚಳಿಯ ನಡುವೆ ಭಕ್ತರು ಗುಂಪು ಗುಂಪಾಗಿ ಪವಿತ್ರ ಸ್ನಾನ ಮಾಡಿದರು. ಸನಾತನ ಧರ್ಮದ 13 ಅಖಾಡಾಗಳ ಸಾಧುಗಳು ಮಂಗಳವಾರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸೇರುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
आस्था, समता और एकता के महासमागम 'महाकुम्भ-2025, प्रयागराज' में पावन 'मकर संक्रांति' के शुभ अवसर पर पवित्र संगम में आस्था की पवित्र डुबकी लगाने वाले सभी पूज्य संतगणों, कल्पवासियों व श्रद्धालुओं का हार्दिक अभिनंदन!
— Yogi Adityanath (@myogiadityanath) January 14, 2025
प्रथम अमृत स्नान पर्व पर आज 3.50 करोड़ से अधिक पूज्य संतों/श्र… pic.twitter.com/awRyDY5OkH
13 ಅಖಾಡಾಗಳನ್ನು ಸನ್ಯಾಸಿ (ಶೈವ), ಬೈರಾಗಿ (ವೈಷ್ಣವ) ಮತ್ತು ಉದಾಸೀನ್ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಶೈವ ಅಖಾಡಾಗಳಲ್ಲಿ ಶ್ರೀ ಪಂಚ ದಶನಮ್ ಜುನಾ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ನಿರಂಜನಿ, ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ಮಹಾನಿರ್ವಾಣಿ, ಶ್ರೀ ಶಂಭು ಪಂಚಾಗ್ನಿ ಅಖಾಡಾ, ಶ್ರೀ ಪಂಚದಶನಂ ಆವಾಹನ ಅಖಾಡಾ ಮತ್ತು ತಪೋನಿಧಿ ಪಂಚಾ ಅಖಾಡಾ ಪ್ರಮುಖ ಅಖಾಡಾಗಳಾಗಿವೆ.
ಇದನ್ನೂ ಓದಿ: ಮಕರಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು; 2 ತಿಂಗಳಲ್ಲಿ 40 ಲಕ್ಷ ಯಾತ್ರಾರ್ಥಿಗಳು ಶಬರಿಮಲೆಗೆ ಭೇಟಿ
ಇದನ್ನೂ ಓದಿ: ಮಹಾಕುಂಭ ಮೇಳ, 2ನೇ ದಿನ: ಮಕರ ಸಂಕ್ರಾಂತಿ ಪ್ರಯುಕ್ತ 1.38 ಕೋಟಿ ಭಕ್ತರಿಂದ 'ಅಮೃತ ಸ್ನಾನ'