ಮೈಸೂರು : ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಸಮಾರಂಭ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿಂದು ಅದ್ಧೂರಿಯಾಗಿ ನಡೆಯಿತು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.
ಸೆಲೆಬ್ರಿಟಿಗಳ ಶುಭಾಶಯಗಳು: ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ನಟ, ಶಾಸಕ ಸಾಧು ಕೋಕಿಲ, ಹಿರಿಯ ನಿರ್ದೇಶಕ ನಾಗಭರಣ, ಹಿರಿಯ ಕಲಾವಿದ ಮಂಡ್ಯ ರಮೇಶ್, ನಟ ಲೂಸ್ ಮಾದ, ನಟಿ ಸೋನು ಗೌಡ ಮತ್ತು ಸಿದ್ಲಿಂಗು ಪಾರ್ಟ್-2 ಚಿತ್ರತಂಡ, ತರುಣ್ ಸೋನಾಲ್, ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇ ಗೌಡ, ಶಾಸಕಿ ನಯನ ಮೋಟಮ್ಮ , ಸಚಿವ ಸತೀಶ್ ಜಾರಕಿಹೊಳಿ ಹಾಗೂ ಗಣ್ಯರು ಮತ್ತು ಅಭಿಮಾನಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿಗೆ ಶುಭಾಶಯ ಕೋರಿದರು.


ಡಾಲಿ ಧನಂಜಯ್ ಅವರ ಹುಟ್ಟೂರು ಅರಸೀಕೆರೆಯ ಕಾಳೇಹಳ್ಳಿಯಾದರೂ ವಿದ್ಯಾಭ್ಯಾಸ, ನಾಟಕ ಅಭ್ಯಾಸ, ಸಿನಿಮಾ ಜೀವನ ಪ್ರಾರಂಭವಾಗಿದ್ದು ಮೈಸೂರಿನಲ್ಲೇ. ಈಗ ಅವರು ತಮ್ಮ ದಾಂಪತ್ಯ ಜೀವನವನ್ನು ಮೈಸೂರಿನಿಂದಲೇ ಶುರು ಮಾಡಿರುವುದು ವಿಶೇಷ. ಧನಂಜಯ್ ಮಾರ್ಚ್‌ನಿಂದಲೇ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಟ ಡಾಲಿ ಧನಂಜಯ್ - ಧನ್ಯತಾ ಆರತಕ್ಷತೆ : ನವಜೋಡಿಗೆ ಶುಭ ಹಾರೈಸಿದ ಗಣ್ಯರು