PAK vs NZ: ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲು ಕಂಡಿದೆ. ಕರಾಚಿಯ ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್ 60 ರನ್ಗಳಿಂದ ಸೋಲನುಭವಿಸಿತು.
ನ್ಯೂಜಿಲೆಂಡ್ ನೀಡಿದ್ದ 320 ರನ್ಗಳ ಗುರಿ ಬೆನ್ನತ್ತಿದ್ದ ಪಾಕ್ ಮೊದಲಿನಿಂದಲೇ ವಿಕೆಟ್ಗಳನ್ನು ಕೈಚೆಲ್ಲುತ್ತಾ ಬಂತು. 69 ರನ್ಗಳಲ್ಲಿ ಅಗ್ರ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಸೌದ್ ಶಕೀಲ್ (6), ಮೊಹಮ್ಮದ್ ರಿಜ್ವಾನ್ (3), ಫಕರ್ ಜಮಾನ್ (24) ಬಹುಬೇಗ ತಮ್ಮ ಇನ್ನಿಂಗ್ಸ್ ಮುಗಿಸಿ ಕ್ರೀಸ್ ತೊರೆದರು.
Clinical New Zealand down Pakistan in #ChampionsTrophy 2025 opener 👏#PAKvNZ 📝: https://t.co/E5MS83KLLA pic.twitter.com/JpcqY5664Q
— ICC (@ICC) February 19, 2025
ಆದರೆ, ಬಾಬರ್ ಅಜಾಮ್ ನಿಧಾನಗತಿಯ ಬ್ಯಾಟಿಂಗ್ ಮೂಲಕ 64 ರನ್ ಕಲೆಹಾಕಿ ಔಟಾದರು. ಈ ವೇಳೆಗಾಗಲೇ ತಂಡ ಒತ್ತಡಕ್ಕೆ ಸಿಲುಕಿತ್ತು. ಬಳಿಕ ಬಂದ ಅಘಾ ಸಲ್ಮಾನ್ (42) ಕೊನೆಯಲ್ಲಿ ಖುಷ್ದಿಲ್ (69) ಹೋರಾಡಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ. ಅಂತಿಮವಾಗಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕಿವೀಸ್ಗೆ ಶರಣಾಯಿತು.
ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್, ಓ ರೂರ್ಕಿ ತಲಾ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 2, ಬ್ರೇಸ್ವೆಲ್, ನಥನ್ ಸ್ಮಿತ್ ತಲಾ ಒಂದು ವಿಕೆಟ್ ಉರುಳಿಸಿದರು.
ಕಿವೀಸ್ ಭರ್ಜರಿ ಬ್ಯಾಟಿಂಗ್: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ್ದ ಕಿವೀಸ್ ಪಡೆ 320 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಬಳಿಕ ಚೇತರಿಸಿಕೊಂಡ ನ್ಯೂಜಿಲೆಂಡ್ ಉತ್ತಮ ಸ್ಕೋರ್ ಗಳಿಸಿತು. ಆರಂಭದಲ್ಲಿ 73 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಓಪನರ್ ಕಾನ್ವೆ (10), ಕೇನ್ ವಿಲಿಯಮ್ಸನ್ (1), ಡ್ಯಾರಿಲ್ ಮಿಚೆಲ್ (10) ವಿಕೆಟ್ ಬೀಳುತ್ತಿದ್ದಂತೆ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು.
ಆದರೆ ಆರಂಭಿಕ ಬ್ಯಾಟರ್ ವಿಲ್ ಯಂಗ್ (107), ಟಾಮ್ ಲ್ಯಾಥಮ್ (118) ಸಮಯೋಚಿತ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದರೇ, ಗ್ಲೆನ್ ಫಿಲಿಫ್ (61) ಅರ್ಧಶತಕ ಸಿಡಿಸಿ ತಂಡದ ಸ್ಕೋರ್ ಬೋರ್ಡ್ ಬದಲಾಯಿಸುವಲ್ಲಿ ಯಶಸ್ವಿಯಾದರು.
New Zealand win the opening match of ICC Champions Trophy 2025#PAKvNZ | #ChampionsTrophy | #WeHaveWeWill pic.twitter.com/MvD3upTSoZ
— Pakistan Cricket (@TheRealPCB) February 19, 2025
12 ದಿನಗಳಲ್ಲಿ 3 ಬಾರಿ ಸೋಲು: ಪಾಕಿಸ್ತಾನ 12 ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಒಟ್ಟು 3 ಬಾರಿ ಸೋಲನುಭವಿಸಿದೆ. ಇದಕ್ಕೂ ಮುನ್ನ ನಡೆದಿದ್ದ ತ್ರಿಕೋನ ಸರಣಿಯಲ್ಲಿ 2 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದ ಪಾಕ್ ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೋಲು ಕಂಡಿದೆ. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ನಾಲ್ಕನೇ ಸೋಲಾಗಿದೆ. ಈ ಹಿಂದೆ ನಡೆದಿದ್ದ ಇದೇ ಟೂರ್ನಿಯಲ್ಲಿ ಪಾಕ್ ಮೂರು ಬಾರಿ ಸೋಲು ಕಂಡಿತ್ತು.
ಇದನ್ನೂ ಓದಿ: ನಾಳೆ ಭಾರತ-ಬಾಂಗ್ಲಾ ಕದನ: ಕನ್ನಡಿಗನಿಗೆ ತಂಡದಲ್ಲಿ ಮಹತ್ವದ ಜವಾಬ್ದಾರಿ!