ಕರ್ನಾಟಕ

karnataka

ETV Bharat / international

ರಷ್ಯಾದಲ್ಲಿ 15ಕ್ಕೂ ಹೆಚ್ಚು ಪೊಲೀಸರು, ಪಾದ್ರಿ ಹಲವು ನಾಗರಿಕರನ್ನು ಹತ್ಯೆ ಮಾಡಿದ ಬಂದೂಕುದಾರಿಗಳು - civilians killed by gunmen Russia

ಕ್ಯಾಸ್ಪಿಯನ್ ಸಮುದ್ರದಲ್ಲಿರುವ ಡರ್ಬೆಂಟ್ ನಗರದ ಸಿನಗಾಗ್ ಮತ್ತು ಚರ್ಚ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಗುಂಡು ಹಾರಿಸಿದೆ ಎಂದು ಡಾಗೆಸ್ತಾನ್ ಗೃಹ ಸಚಿವಾಲಯ ಮಾಹಿತಿ ನೀಡಿದೆ.

By PTI

Published : Jun 24, 2024, 6:57 AM IST

RUSSIA-DAGESTAN-LD ATTACKS
ರಷ್ಯಾದಲ್ಲಿ 15ಕ್ಕೂ ಹೆಚ್ಚು ಪೊಲೀಸರು, ಪಾದ್ರಿ ಹಲವು ನಾಗರಿಕರನ್ನು ಹತ್ಯೆ ಮಾಡಿದ ಬಂದೂಕುದಾರಿಗಳು (ETV Bharat)

ಮಾಸ್ಕೋ: ರಷ್ಯಾದ ದಕ್ಷಿಣ ಗಣರಾಜ್ಯವಾದ ಡಾಗೆಸ್ತಾನ್‌ನಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು 15 ಕ್ಕೂ ಹೆಚ್ಚು ಪೊಲೀಸರು ಮತ್ತು ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವಾರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಗವರ್ನರ್ ಸೆರ್ಗೆಯ್ ಮೆಲಿಕೋವ್ ಸೋಮವಾರ ಮುಂಜಾನೆ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಡು ನಗರಗಳಲ್ಲಿನ ಆರ್ಥೊಡಾಕ್ಸ್ ಚರ್ಚ್‌ಗಳು ಮತ್ತು ಪೊಲೀಸ್ ಪೋಸ್ಟ್​​ಗಳ ಮೇಲೆ ಅಪರಿಚಿತ ಬಂದೂಕುಧಾರಿಗಳು ಭಾನುವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿಯು ಸಶಸ್ತ್ರ ಉಗ್ರಗಾಮಿತ್ವದ ಇತಿಹಾಸ ಹೊಂದಿರುವರಿಂದ ಈ ದಾಳಿ ನಡೆದಿದೆ ಎಂದು ಹೇಳಿದೆ.

ಡಾಗೆಸ್ತಾನ್​ ಸರ್ಕಾರ ಸೋಮವಾರ, ಮಂಗಳವಾರ ಮತ್ತು ಬುಧವಾರದವರೆಗೆ ಶೋಕಾಚರಣೆ ಘೋಷಿಸಿ ಆದೇಶ ಮಾಡಿದೆ. ಶಸ್ತ್ರಸಜ್ಜಿತ ಉಗ್ರಗಾಮಿಗಳು ರಷ್ಯಾದ ದಕ್ಷಿಣ ಗಣರಾಜ್ಯವಾದ ಡಾಗೆಸ್ತಾನ್‌ನ ಎರಡು ನಗರಗಳಲ್ಲಿನ ಎರಡು ಆರ್ಥೊಡಾಕ್ಸ್ ಚರ್ಚ್‌ಗಳು, ಸಿನಗಾಗ್ ಮತ್ತು ಟ್ರಾಫಿಕ್ ಪೋಲಿಸ್ ಪೋಸ್ಟ್ ಮೇಲೆ ದಾಳಿ ನಡೆಸಿ ಪಾದ್ರಿ ಮತ್ತು ಕನಿಷ್ಠ ಆರು ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕ್ಯಾಸ್ಪಿಯನ್ ಸಮುದ್ರದಲ್ಲಿರುವ ಡರ್ಬೆಂಟ್ ನಗರದ ಸಿನಗಾಗ್ ಮತ್ತು ಚರ್ಚ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಗುಂಡು ಹಾರಿಸಿದೆ ಎಂದು ಡಾಗೆಸ್ತಾನ್ ಆಂತರಿಕ ಸಚಿವಾಲಯ ತಿಳಿಸಿದೆ. ಅಲ್ಲಿನ ಮಾಧ್ಯಮಗಳ ಪ್ರಕಾರ ಚರ್ಚ್ ಮತ್ತು ಸಿನಗಾಗ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದೆ. ಬಹುತೇಕ ಏಕಕಾಲದಲ್ಲಿ ಈ ದಾಳಿ ನಡೆಸಲಾಗಿದೆ. ಡಾಗೆಸ್ತಾನ್ ರಾಜಧಾನಿ ಮಖಚ್ಕಲಾದಲ್ಲಿ ಚರ್ಚ್ ಮತ್ತು ಟ್ರಾಫಿಕ್ ಪೊಲೀಸ್ ಪೋಸ್ಟ್ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಪಾದ್ರಿ ಮತ್ತು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಭಯೋತ್ಪಾದನಾ ವಿರೋಧಿ ಸಮಿತಿ ತಿಳಿಸಿದೆ. ಐವರು ಬಂದೂಕುಧಾರಿಗಳನ್ನು ಅಲ್ಲಿನ ರಕ್ಷಣಾ ಪಡೆಗಳು ಬೆನ್ನಟ್ಟಿ ಹೊಡೆದುರುಳಿಸಿವೆ ಎಂದು ವರದಿಯಾಗಿದೆ. ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆರು ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ RIA ನೊವೊಸ್ಟಿ ಪ್ರದೇಶದ ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ವರದಿ ಮಾಡಿದೆ. ಇತರ ವರದಿಗಳ ಪ್ರಕಾರ ಚರ್ಚ್ ಸಿಬ್ಬಂದಿ ಸಹ ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಗರಿಕರು ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮುಫ್ತಿಯೇಟ್ ಆಫ್ ಡಾಗೆಸ್ತಾನ್ ಏಳು ಪೊಲೀಸರು ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಹತ್ಯೆ ಮಾಡಲಾಗಿದೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ದಾಳಿಯ ಹೊಣೆಗಾರಿಕೆಯನ್ನು ತಕ್ಷಣಕ್ಕೆ ಯಾವುದೇ ಸಂಸ್ಥೆ ಒಪ್ಪಿಕೊಂಡಿಲ್ಲ. ಭಯೋತ್ಪಾದಕ ಕೃತ್ಯದ ಆರೋಪದ ಮೇಲೆ ಅಧಿಕಾರಿಗಳು ಕ್ರಿಮಿನಲ್ ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ:100 ಆನೆಗಳ ಬಲಕ್ಕಿಂತ ಮೇಘಗಳ ಭಾರವೇ ದೊಡ್ಡದು; ಈ ವಿಸ್ಮಯದ ಹಿಂದಿದೆ ಕಾರಣ - Interesting Facts

ABOUT THE AUTHOR

...view details