ಬೈರುತ್(ಲೆಬನಾನ್): ಲೆಬನಾನ್‌ನ ಬೈರುತ್ ಮೇಲೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 30 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್‌ನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿರುವ ಕಟ್ಟಡದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 9ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ ತಿಂಗಳ ಕೊನೆಯಿಂದ ಲೆಬನಾನ್ ದೇಶದಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪುಗಳು ಪ್ರಬಲವಾಗಿ ಇರುವ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಬುಧವಾರ ಯಾವುದೇ ಎಚ್ಚರಿಕೆ ನೀಡದೇ ಇಸ್ರೇಲ್ ದಾಳಿ ನಡೆಸಿದ್ದು ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿದೆ. ಹಿಜ್ಬುಲ್ಲಾದ ನಾಗರಿಕ ರಕ್ಷಣಾ ಘಟಕದ ಏಳು ಸದಸ್ಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿರಂತರವಾಗಿ ಇಸ್ರೇಲ್ ಮತ್ತು ಹಿಜ್ಬುಲ್ಲಾಗಳ ನಡುವೆ ಲೆಬನಾನ್‌ನ ಗಡಿಯಾದ್ಯಂತ ಪ್ರತಿದಿನ ಯುದ್ಧ ನಡೆಯುತ್ತಿದೆ. ಅಕ್ಟೋಬರ್ 7, 2023 ರಂದು ಹಮಾಸ್‌ನ ಗಡಿಯಾಚೆಗೆ ನಡೆದ ದಾಳಿಯಲ್ಲಿ 1,200 ಇಸ್ರೇಲಿಗಳು ಮೃತಪಟ್ಟಿದ್ದರು. ಮತ್ತು 250 ಇತರರನ್ನು ಒತ್ತೆಯಾಳಾಗಿ ಹಿಜ್ಬುಲ್ಲಾ ತೆಗೆದುಕೊಂಡಿತ್ತು.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಗುಂಪಿನ ವಿರುದ್ಧ ಯುದ್ಧ ಘೋಷಿಸಿತ್ತು. ಈ ಪ್ರದೇಶದಲ್ಲಿ 41,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು. ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅರ್ಧಕ್ಕಿಂತ ಹೆಚ್ಚಿದ್ದರು.
ಇದನ್ನೂ ಓದಿ: ಸಿರಿಯಾ, ಲೆಬನಾನ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿ: ನಸ್ರುಲ್ಲಾ ಅಳಿಯನ ಹತ್ಯೆ - Nasrallahs son in law killed