ETV Bharat / entertainment

ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹಣೆಯಲ್ಲಿ ತಿಲಕ : ಮಹಾಕುಂಭಮೇಳದಲ್ಲಿ ವಿಜಯ್ ದೇವರಕೊಂಡ ಪವಿತ್ರ ಸ್ನಾನ - VIJAY DEVARAKONDA

ಜನಪ್ರಿಯ ನಟ ವಿಜಯ್ ದೇವರಕೊಂಡ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

Actor Vijay Devarakonda
ನಟ ವಿಜಯ್ ದೇವರಕೊಂಡ (IANS)
author img

By ETV Bharat Entertainment Team

Published : Feb 17, 2025, 7:58 PM IST

ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಸೆಲೆಬ್ರಿಟಿಗಳ ಪಟ್ಟಿಗೆ ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ವಿಜಯ್ ದೇವರಕೊಂಡ ಅವರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಹೌದು, ಅವರು ತಮ್ಮ ಧಾರ್ಮಿಕ ಪ್ರಯಾಣದ ಫೋಟೋಗಳನ್ನಿಂದು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಾಯಿಯೊಂದಿಗೆ ನಟ ಪ್ರಾರ್ಥಿಸುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು. ಹಾಗೆಯೇ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಜೊತೆಗಿದ್ದರು.

ವಿಜಯ್ ದೇವರಕೊಂಡ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದನ್ನು ಕಾಣಬಹುದು. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ತಿಲಕವಿಟ್ಟು ತಾಯಿಯೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ಪುಣ್ಯ ಸ್ನಾನದ ನಂತರ, ಕಾಶಿಗೂ ಭೇಟಿ ನೀಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಸೌತ್​ ಸೂಪರ್ ಸ್ಟಾರ್, '2025 ಕುಂಭಮೇಳ, ಮೂಲದೊಂದಿಗೆ ಸಂಪರ್ಕಿಸುವ ಪ್ರಯಾಣ. ನನ್ನ ಸ್ನೇಹಿತರೊಂದಿಗೆ ನೆನಪುಗಳ ರಚನೆ, ತಾಯಿಯೊಂದಿಗೆ ಪ್ರಾರ್ಥನೆ. ಇವೆಲ್ಲವುಗಳ ಜೊತೆಗೆ ನಾನು ಕಾಶಿಗೂ ಭೇಟಿ ನೀಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬರ್ಲಿನ್​ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ 'ವಾಘಚಿಪಾಣಿ' : ಟೀಸರ್​ ನೋಡಿದ್ರಾ

ಈ ಮಹಾ ಕುಂಭಮೇಳಕ್ಕೆ ಭಾರತೀಯ ಚಿತ್ರರಂಗದ ಗಣ್ಯರಾದ ಹೇಮಾ ಮಾಲಿನಿ, ಸುನಿಲ್ ಗ್ರೋವರ್, ಕಬೀರ್ ಖಾನ್, ಗುರು ರಾಂಧವ, ಅವಿನಾಶ್ ತಿವಾರಿ, ಮಮತಾ ಕುಲಕರ್ಣಿ, ಅನುಪಮ್ ಖೇರ್, ಮಿಲಿಂದ್ ಸೋಮನ್, ಅಂಕಿತಾ ಕೊನ್ವಾರ್, ವಿವೇಕ್ ಒಬೆರಾಯ್, ಶ್ರೀನಿಧಿ ಶೆಟ್ಟಿ, ಆರ್​​ ಚಂದ್ರು, ರಾಜ್​​ ಬಿ ಶೆಟ್ಟಿ, ಅನುಶ್ರೀ, ಕಿರಣ್​ ರಾಜ್​​ ಸೇರಿದಂತೆ ಹಲವರು ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಪವಿತ್ರ ಸ್ನಾನ

ಜನವರಿ 13, 2025ರಂದು ಮಹಾ ಕುಂಭಮೇಳ ಆರಂಭವಾಗಿತ್ತು. ಇದೊಂದು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸೇರುವಿಕೆ ಆಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ಪುಣ್ಯಸ್ನಾನ ಮಾಡಿದ್ದಾರೆ. ಫೆಬ್ರವರಿ 26ರ ಮಹಾಶಿವರಾತ್ರಿವರೆಗೆ ಈ ಮಹಾ ಕುಂಭಮೇಳ ನಡೆಯಲಿದ್ದು, ಸೆಲೆಬ್ರಿಟಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪುಣ್ಯ ಸ್ನಾನ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.