ETV Bharat / entertainment

ಸೂರ್ಯಕಾಂತಿ ನಾನು, ನನ್ನ ಸೂರ್ಯ ನೀನು : ಡಾಲಿ ಧನಂಜಯ್​​ ಬಗ್ಗೆ ಪತ್ನಿ ಧನ್ಯತಾ ಮನದಾಳ - DHANYATHA DHANANJAY

ಫೆಬ್ರವರಿ 16, ಭಾನುವಾರದಂದು ಡಾಲಿ ಧನಂಜಯ್​ ಹಾಗೂ ಧನ್ಯತಾ ಮೈಸೂರಿನಲ್ಲಿ ಬಹಳ ಅದ್ಧೂರಿಯಾಗಿ ಹಸೆಮಣೆ ಏರಿದರು. ಇದೀಗ ಧನ್ಯತಾ, ಧನಂಜಯ್​ ಅವರನ್ನು ತಮ್ಮ ಸೂರ್ಯ ಎಂದು ಮನದಾಳ ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್
ನವದಂಪತಿ ಧನ್ಯತಾ, ಡಾಲಿ ಧನಂಜಯ್​​ (Photo: ETV Bharat)
author img

By ETV Bharat Entertainment Team

Published : Feb 20, 2025, 1:19 PM IST

ಏರಿಳಿತಗಳನ್ನು ಎದುರಿಸಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್​​​ ಇತ್ತೀಚೆಗಷ್ಟೇ ವೈವಾಹಿಕ ಜೀವನ ಶುರು ಮಾಡಿದ್ದಾರೆ. ಭಾನುವಾರದಂದು ಮನ ಮೆಚ್ಚಿದ ಹುಡುಗಿ ಧನ್ಯತಾ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ನವದಂಪತಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಇದೀಗ ಧನ್ಯತಾ ಅವರು ಪತಿ ಬಗ್ಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಅವರ ಸೋಷಿಯಲ್​ ಮೀಡಿಯಾ ಪೋಸ್ಟ್​​ ಪರಿಶುದ್ಧ ಪ್ರೀತಿಯ ಸಂಕೇತದಂತಿದೆ.

ಅದ್ಧೂರಿ ಮದುವೆ ಬಳಿಕ 'ಕೃತಜ್ಞತಾ ಪೋಸ್ಟ್'​ ಹಂಚಿಕೊಂಡಿದ್ದು ಬಿಟ್ಟರೆ ಮದುವೆಯ ಬೇರಾವುದೇ ಫೋಟೋ ವಿಡಿಯೋಗಳನ್ನು ನವದಂಪತಿ ಶೇರ್ ಮಾಡಿರಲಿಲ್ಲ. ವಿವಾಹ ಪೂರ್ವ ಶಾಸ್ತ್ರಗಳು, ಆರತಕ್ಷತೆ, ಅದ್ಧೂರಿ ವಿವಾಹ ಸಮಾರಂಭದ ಪ್ರತೀ ಕ್ಷಣಗಳೂ ಆ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಸಖತ್​ ಸದ್ದು ಮಾಡಿದ್ದವು. ಈ ಕ್ಷಣಕ್ಕಾಗಿ ಕಾತರರಾಗಿದ್ದ ನೆಟ್ಟಿಗರು, ಅಭಿಮಾನಿಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​ಗಳ ಮೂಲಕ ಮದುವೆಯನ್ನು ಕಣ್ತುಂಬಿಕೊಂಡಿದ್ದರು. ಇದೀಗ, ಧನ್ಯತಾ ಮದುವೆಯ ಕೆಲ ಆಯ್ದ ಕ್ಷಣಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪತಿ ಡಾಲಿ ಧನಂಜಯ್​ ಅವರ ಅಫೀಶಿಯಲ್​​ ಸೋಷಿಯಲ್​ ಮೀಡಿಯಾದಲ್ಲೂ ಈ ಬ್ಯೂಟಿಫುಲ್​ ಪೋಸ್ಟ್​ ಅನ್ನು ಕಾಣಬಹುದಾಗಿದೆ.

'ಸೂರ್ಯಕಾಂತಿ ನಾನು, ನನ್ನ ಸೂರ್ಯ ನೀನು' : ಅರಿಶಿಣ ಶಾಸ್ತ್ರ, ಆರತಕ್ಷತೆ ಕಾರ್ಯಕ್ರಮ, ಅದ್ಧೂರಿ ಮದುವೆ ಸೇರಿ 6 ಸುಂದರ ಚಿತ್ರಗಳನ್ನು ಹಂಚಿಕೊಂಡಿರುವ ಧನ್ಯತಾ, 'ಸೂರ್ಯಕಾಂತಿ ನಾನು, ನನ್ನ ಸೂರ್ಯ ನೀನು' ಎಂಬ ಆಕರ್ಷಕ ಕ್ಯಾಪ್ಷನ್​​ ಕೊಟ್ಟಿದ್ದಾರೆ. ಫೋಟೋಗಳ ಜೊತೆಗೆ ಕ್ಯಾಪ್ಷನ್​​ ಕೂಡಾ ಗಮನ ಸೆಳೆದಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: ಹೃದಯಪೂರ್ವಕ ನಮನಗಳು, ಜೊತೆಗೆ ಕ್ಷಮೆಯಿರಲಿ : ಮದುವೆ ಬಳಿಕ ಡಾಲಿ ಧನಂಜಯ್​ ಮೊದಲ ಪೋಸ್ಟ್​

ಮದುವೆ ಯಾವಾಗ? ಅನ್ನೋ ಪ್ರಶ್ನೆ ಚಂದನವನದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​ ಅವರಿಗೆ ಸದಾ ಎದುರಾಗುತ್ತಿತ್ತು. ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶೀಘ್ರವೇ ಮದುವೆ ಆಗಿ ಎಂದು ನಟನಲ್ಲಿ ಒತ್ತಾಯಿಸುತ್ತಿದ್ದರು. ಸಮಯ ಕೂಡಿ ಬಂದಾಗ, ಮನಸ್ಸಿಗೆ ಇಷ್ಟ ಆಗೋ ಹುಡುಗಿ ಸಿಕ್ಕಾಗ ಆಗುತ್ತೇನೆಂಬ ಭರವಸೆಯನ್ನು ಡಾಲಿ ನೀಡಿದ್ದರು. ಕೊಟ್ಟ ಮಾತಿನಂತೆ ಫೆಬ್ರವರಿ 16, ಭಾನುವಾರದಂದು ಮೈಸೂರಿನಲ್ಲಿ ಬಹಳ ಅದ್ಧೂರಿಯಾಗಿ ಹಸೆಮಣೆ ಏರಿದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಅವರ ಜೊತೆ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಕಡಲ ತೀರದಲ್ಲಿ ಮುದ್ದಿನ ಮಡದಿಗೆ ಮುತ್ತಿಟ್ಟ ಕಾಂತಾರ ಸ್ಟಾರ್: ಫೋಟೋಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.