ETV Bharat / technology

2025ರಲ್ಲಿ ವಿದೇಶಿ ಪ್ರಯಾಣಕ್ಕೂ ಡಿಜಿಯಾತ್ರಾ ಸೌಲಭ್ಯ ಅಳವಡಿಕೆ - Face Recognition Technology - FACE RECOGNITION TECHNOLOGY

Face Recognition Technology: ವಿದೇಶಕ್ಕೆ ಪ್ರಯಾಣಿಸುವವರಿಗೂ ವಿಮಾನ ನಿಲ್ದಾಣಗಳಲ್ಲಿ ಅನುಕೂಲಕರ ಮತ್ತು ತ್ವರಿತ ಚೆಕ್-ಇನ್‌ಗಾಗಿ ಫೇಸ್​ ರೆಕಗ್ನಿಷನ್​ ಟೆಕ್ನಾಲಜಿ (FRT) ಬಳಸಲು ಸರ್ಕಾರ ಸಿದ್ಧತೆ ನಡೆಸಿದೆ.

DIGI YATRA FOR FOREIGN TRAVEL  FRT SYSTEM IN AIRPORT  DIGI YATRA CEO
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Tech Team

Published : Oct 5, 2024, 12:16 PM IST

Face Recognition Technology: ವಿದೇಶಕ್ಕೆ ಪ್ರಯಾಣಿಸುವವರಿಗೆ ವಿಮಾನ ನಿಲ್ದಾಣಗಳಲ್ಲಿ ಅನುಕೂಲಕರ ಮತ್ತು ತ್ವರಿತ ಚೆಕ್-ಇನ್ ಮಾಡಲು ಅನುಕೂಲವಾಗುವಂತೆ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು (ಫೇಸ್​ ರೆಕಗ್ನಿಷನ್​ ಟೆಕ್ನಾಲಜಿ) ಬಳಸಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ. 2025ರ ಜೂನ್ ನಲ್ಲಿ ಪ್ರಾಯೋಗಿಕ ಯೋಜನೆ ಆರಂಭಿಸಲಾಗುವುದು ಎಂದು ಡಿಜಿಯಾತ್ರಾ ಸಿಇಒ ಕೆ.ಸುರೇಶ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಫೇಸ್​ ರೆಕಗ್ನಿಷನ್​ ಟೆಕ್ನಾಲಜಿ ಬಳಸಲು ಉದ್ದೇಶಿಸಲಾಗಿದೆ. ಅದಕ್ಕಾಗಿಯೇ 2025ರ ಜೂನ್‌ನಲ್ಲಿ ವಿದೇಶ ಪ್ರಯಾಣ ಮಾಡುವವರಿಗೆ ಈ ಸೌಲಭ್ಯವನ್ನು ಒದಸುವುದು ತಮ್ಮ ಯೋಜನೆಯಾಗಿದೆ ಎಂದು ಸುರೇಶ್ ಹೇಳಿದ್ದಾರೆ.

FRT ಯೊಂದಿಗೆ ಡಿಜಿಯಾತ್ರಾ ಸೇವೆಗಳು: ದೇಶೀಯ ಮಾರ್ಗಗಳಲ್ಲಿ ಎಫ್‌ಆರ್‌ಟಿ ಬಳಸಲು ಡಿಜಿಯಾತ್ರಾ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆಧಾರ್ ಕಾರ್ಡ್​ ಆಧಾರದ ಮೇಲೆ ವಯಸ್ಕರು ಮತ್ತು ಅಪ್ರಾಪ್ತರ ವಿವರಗಳನ್ನು ಸಹ ಅದರಲ್ಲಿ ವಿವರ ಪಡೆಯಬಹುದು. ಇದಕ್ಕಾಗಿ ಪ್ರತಿಯೊಬ್ಬರ ಮುಖವನ್ನು ಸೆಲ್ಫಿ ಮೂಲಕ ಸೆರೆ ಹಿಡಿಯಬೇಕು. ಮುಂದಿನ ಪ್ರಯಾಣಕ್ಕೂ ಮುನ್ನ ಸಂಬಂಧಿತ ವೈಶಿಷ್ಟ್ಯದಲ್ಲಿ ಬೋರ್ಡಿಂಗ್ ಪಾಸ್ ವಿವರಗಳನ್ನು ಸೇರಿಸಿದರೆ ಸಾಕು.

ಬೆಂಗಳೂರು, ಹೈದರಾಬಾದ್, ವಿಶಾಖಪಟ್ಟಣಂ, ದೆಹಲಿ, ವಾರಣಾಸಿ, ಕೋಲ್ಕತ್ತಾ, ಮುಂಬೈ, ಪುಣೆ, ಕೊಚ್ಚಿ ಇತ್ಯಾದಿ ವಿಮಾನ ನಿಲ್ದಾಣಗಳಲ್ಲಿ ಡಿಜಿಯಾತ್ರಾಗೆ ಪ್ರವೇಶ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯ ಸ್ಕ್ಯಾನರ್​ನಲ್ಲಿ ಡಿಜಿಯಾತ್ರಾ ಮೊಬೈಲ್ ಆಪ್​ನಲ್ಲಿ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ, ಅಲ್ಲಿನ ಕ್ಯಾಮರಾ ಮುಂದೆ ಫೇಸ್​ ತೊರಿಸಿದ್ರೆ ಸೆಕೆಂಡ್​​​ಗಳಲ್ಲಿ ಪರ್ಮಿಷನ್ ಬಂದು ತಾನಾಗಿಯೇ ಗೇಟ್​ಗಳು ತೆರೆದುಕೊಳ್ಳುತ್ತವೆ. ಯಾರೂ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವಂತಿಲ್ಲ. ಅತ್ಯಂತ ವೇಗವಾಗಿ ನಾವು ಚೆಕ್​ಇನ್​ ಮಾಡಿಕೊಳ್ಳಬಹುದು. ಪ್ರಸ್ತುತ ಈ ಸೌಲಭ್ಯವನ್ನು ದೇಶೀಯ ಸ್ಥಳಗಳಿಗೆ ಮಾತ್ರ ಅನುಮತಿಸಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣವು ಪಾಸ್‌ಪೋರ್ಟ್, ವೀಸಾ ಮತ್ತು ವಲಸೆ ವಿಚಾರಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ಬ್ಯೂರೋ ಆಫ್ ಇಮಿಗ್ರೇಷನ್ ಮತ್ತು ವೀಸಾ ವಿತರಣಾ ವ್ಯವಸ್ಥೆಗಳೊಂದಿಗೆ ಸಮನ್ವಯತೆಯ ಅಗತ್ಯವಿರುತ್ತದೆ ಎಂದು ಡಿಜಿಯಾತ್ರಾ ಸಿಇಒ ಹೇಳಿದ್ದಾರೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಭಾರತೀಯರಿಗೆ ಇ-ಪಾಸ್‌ಪೋರ್ಟ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸಿಂಗಾಪುರದ ಜೊತೆಗೆ ಕೆಲವು ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ಇ-ಪಾಸ್‌ಪೋರ್ಟ್‌ಗಳನ್ನು ನೀಡುತ್ತಿವೆ.

ಹೆಲ್ಙ್​ ಡೆಸ್ಕ್​ ಸ್ಥಾಪನೆ: ಈಗಾಗಲೇ ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಏರ್‌ಲೈನ್ ನಿರ್ವಾಹಕರು ಡಿಜಿಯಾತ್ರಾ ಬಗ್ಗೆ ವ್ಯಾಪಕ ಪ್ರಚಾರ ಮಾಡಿದ್ದಾರೆ. ಡಿಜಿಯಾತ್ರಾಕ್ಕಾಗಿ ಹೆಲ್ಪ್​ ಡೆಸ್ಕ್​​ ಸ್ಥಾಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಬಗ್ಗೆ ಪ್ರಚಾರ ಮಾಡಲಾಗಿದೆ. ಕೋಲ್ಕತ್ತಾ, ಪುಣೆ, ವಿಜಯವಾಡ ಮತ್ತು ವಾರಾಣಸಿ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.

ಓದಿ: ಮೇಕ್ ಇನ್‌ ಮೈಸೂರಿನ ಮೊದಲ ಬೈಕ್‌ ಜಾವ: ಇದಕ್ಕಿದೆ ರಾಜವಂಶಸ್ಥರ ನಂಟು! - Jawa Bike

ETV Bharat Logo

Copyright © 2025 Ushodaya Enterprises Pvt. Ltd., All Rights Reserved.