ETV Bharat / sports

ವಿರಾಟ್​ ಕೊಹ್ಲಿ ಧರಿಸುವ 'ಸನ್​ ಗ್ಲಾಸ್​' ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ದಂಗಾಗ್ತೀರ! - Price of Kohli sunglasses

ಟೀಂ ಇಂಡಿಯಾದ​ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕ್ರಿಕೆಟ್​ ಪಂದ್ಯದ ವೇಳೆ ಧರಿಸುವ ಸನ್​ ಗ್ಲಾಸ್​​ ತುಂಬ ದುಬಾರಿ ಬೆಲೆಯದ್ದಾಗಿದೆ. ಇವರು ಬಳಸುವ ಈ ಗ್ಲಾಸ್​​ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

author img

By ETV Bharat Sports Team

Published : 2 hours ago

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (Getty Images)

ಹೈದರಾಬಾದ್​: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್​​ ಕೊಹ್ಲಿ ಕೇವಲ ಬ್ಯಾಟಿಂಗ್‌ಗೆ ಮಾತ್ರವಲ್ಲದೆ ತಮ್ಮ ಫ್ಯಾಷನ್​ನಿಂದಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಮೈದಾನದ ಒಳಗಿರಲಿ ಅಥವಾ ಹೊರಗಿರಲಿ ವಿರಾಟ್ ತಮ್ಮ ಸ್ಟೈಲಿಶ್ ಲುಕ್​ನಿಂದಲೇ ಗಮನ ಸೆಳೆಯುತ್ತಾರೆ. ಅದರಲ್ಲೂ ಕ್ರಿಕೆಟ್​ ಪಂದ್ಯದ ವೇಳೆ ಕೊಹ್ಲಿ ಧರಿಸುವ ಸನ್ ಗ್ಲಾಸ್ ಹೆಚ್ಚು ಆಕರ್ಷಣೆಯುತವಾಗಿ ಕಾಣಿಸುತ್ತದೆ. ಆದರೆ ಬಹುತೇಕ ಅಭಿಮಾನಿಗಳು ಅವರು ಧರಿಸುವ ಸನ್​ ಗ್ಲಾಸ್​ ಯಾವ ಬ್ರಾಂಡ್​ನದ್ದು ಮತ್ತು ಅದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಬೇಕೆಂದು ಬಯಸುತ್ತಾರೆ. ಹಾಗಾದ್ರೆ ಬನ್ನಿ ಈ ಸುದ್ದಿಯಲ್ಲಿ ಅದರ ಕುರಿತು ತಿಳಿದುಕೊಳ್ಳೋಣ.

ಓಕ್ಲೆ ರಾಡರ್​ ಇವಿ ಪಾತ್​ (Oakley Radar EV Path): ವಿರಾಟ್ ಕೊಹ್ಲಿ ಹೆಚ್ಚಾಗಿ ಟಾಪ್ ಬ್ರಾಂಡ್ ಓಕ್ಲೆಯ ಸನ್ ಗ್ಲಾಸ್ ಧರಿಸುತ್ತಾರೆ. ಓಕ್ಲೆ ಕೇವಲ್​ ಲುಕ್​ಗೆ ಮಾತ್ರವಲ್ಲದೇ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕ್ರಿಕೆಟ್​ ಪಂದ್ಯದ ವೇಳೆ ಕೊಹ್ಲಿ ಧರಿಸುವ ಸನ್​ಗ್ಲಾಸ್​ ಓಕ್ಲೆ ರಾಡಾರ್ ಇವಿ ಪಾತ್ ಹೆಸರಿನದ್ದಾಗಿದೆ.

ಈ ಸನ್​ ಗ್ಲಾಸ್​ಗಳನ್ನು ವಿಶೇಷವಾಗಿ ಕ್ರೀಡಾಪಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸೂರ್ಯನ ಕಿರಣದಿಂದ ಕಣ್ಣಿಗೆ ರಕ್ಷಣೆ ನೀಡಲು ಡ್ಯುಯಲ್-ಲೆನ್ಸ್ ತಂತ್ರಜ್ಞಾನದೊಂದಿಗೆ ಇದನ್ನು ತಯಾರಿಸಲಾಗಿದೆ. ರಾಡಾರ್ ಇವಿ ಪಾತ್ ಸನ್ ಗ್ಲಾಸ್‌ಗಳು ಸಾಮಾನ್ಯವಾಗಿ 200 ಡಾಲರ್​ (ಸುಮಾರು ರೂ. 16,795)ನಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ಇನ್ನು ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸಿದರೆ ಅವುಗಳ ಬೆಲೆ ಸುಮಾರು 300 ಡಾಲರ್​ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿರಲಿದೆ. ಅದರಲ್ಲೂ ಕಸ್ಟಮ್ ವಿನ್ಯಾಸಗಳೊಂದಿಗೆ ಸ್ಪೇಷಲ್​ ಎಡಿಷನ್​ನಲ್ಲಿ ಬರುವ ಸನ್ ಗ್ಲಾಸ್​ನ ಬೆಲೆ ಅಧಿಕವಾಗಿರಲಿವೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಫಿಟ್ನೆಸ್​ ಗುಟ್ಟೇನು?: ರನ್​ ಮಷಿನ್ ಆಹಾರ ಪದ್ಧತಿ ಹೇಗಿರುತ್ತದೆ?, ಎಷ್ಟು ಗಂಟೆ ವ್ಯಾಯಾಮ ಮಾಡ್ತಾರೆ ಗೊತ್ತಾ? - Virat Kohli Fitness Mantra

ಓಕ್ಲೆ M2 ಫ್ರೇಮ್​ XL ಶೀಲ್ಡ್​ (Oakley M2 Frame XL Shield): ಕೊಹ್ಲಿ ಬಳಸುವ ಮತ್ತೊಂದು ಜನಪ್ರಿಯ ಸನ್​ ಗ್ಲಾಸ್​ ಎಂದರೆ ಓಕ್ಲೆ M2 ಫ್ರೇಮ್ XL ಶೀಲ್ಡ್. ಈ ಸನ್‌ಗ್ಲಾಸ್‌ಗಳು ಹೆಚ್ಚಿನ ಕವರೇಜ್​ ಒದಗಿಸುವ ವೀಸರ್ ತರಹದ ಲೆನ್ಸ್​ಗಳನ್ನು ಹೊಂದಿರಲಿವೆ. ಈ ಸನ್​ ಗ್ಲಾಸ್​ ಕೂಡ ವಿಶೇಷವಾಗಿ ಕ್ರೀಡಾಪಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹೊರಾಂಗಣದಲ್ಲಿ ಸೂರ್ಯನಿಂದ ರಕ್ಷಣೆ ನೀಡುತ್ತದೆ. M2 ಫ್ರೇಮ್ XL ಶೀಲ್ಡ್‌ನ ಮೂಲ ಆವೃತ್ತಿಯು ಸುಮಾರು 150 ಡಾಲರ್​ನಿಂದ ಪ್ರಾರಂಭವಾಗುತ್ತದೆ. ವಿಶೇಷ ಲೆನ್ಸ್ ಅಥವಾ ಪ್ರೀಮಿಯಂ ವಿನ್ಯಾಸಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಬಯಸಿದರೆ, ಅದರ ಬೆಲೆಯು 300 ಡಾಲರ್​ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿರಲಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಬಳಿ ಇವೆ 10 ದುಬಾರಿ ವಾಚ್​ಗಳು: ಒಂದೊಂದರ ಬೆಲೆ ಕೇಳಿದರೆ ಶಾಕ್​ ಆಗ್ತೀರಾ! - Virat Kohli Expensive Watches

ETV Bharat Logo

Copyright © 2024 Ushodaya Enterprises Pvt. Ltd., All Rights Reserved.