ಕೊಲೊಂಬೋ(ಶ್ರೀಲಂಕಾ): ಕೋತಿಯಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾ ಕೆಲ ಸಮಯ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು. ಹೌದು, ಕೋತಿಯೊಂದು ಕೊಲಂಬೊ ಉಪನಗರದ ಗ್ರಿಡ್ ಸ್ಟೇಷನ್‌ನ ಟ್ರಾನ್ಸ್ಫಾರ್ಮರ್ ಅನ್ನು ತಾಕಿದ್ದರಿಂದ ಫೆ.9ರಂದು ಸುಮಾರು 6 ಗಂಟೆಗಳ ಕಾಲ ಶ್ರೀಲಂಕಾದಾದ್ಯಂತ ವಿದ್ಯುತ್ ಕಡಿತಗೊಂಡಿತ್ತು. ಇದರಿಂದ ರಾಷ್ಟ್ರವ್ಯಾಪಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಇದಾದ ಬಳಿಕ, ವಿದ್ಯುತ್ ಸ್ಥಾವರ ತಾತ್ಕಲಿಕವಾಗಿ ಸ್ಥಗಿತವಾದ ಕಾರಣ ಶ್ರೀಲಂಕಾದಲ್ಲಿ ಕಳೆದ ಸೋಮವಾರ ಮತ್ತು ಮಂಗಳವಾರ 90 ನಿಮಿಷಗಳ ವಿದ್ಯುತ್ ಕಡಿತವಾಗಿತ್ತು. ನೊರೊಚ್ಚೋಲೈ 900 ಮೆಗಾವ್ಯಾಟ್ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿನ ಎದುರಾಗಿರುವ ಸಮಸ್ಯೆಯಿಂದ ವಿದ್ಯುತ್ ಪೂರೈಕೆಯಲ್ಲಿ ಕೊರತೆಯುಂಟಾಗಿರುವುದನ್ನು ಪರಿಗಣಿಸಿ, ಸಿಲೋನ್ ವಿದ್ಯುತ್ ಮಂಡಳಿ ಈ ವಿದ್ಯುತ್ ಕಡಿತ ಮಾಡಿ ನಿರ್ಧಾರ ಕೈಗೊಂಡಿತ್ತು.
ಸಿಲೋನ್ ವಿದ್ಯುತ್ ಮಂಡಳಿ, ಎರಡೂ ದಿನ ವಿವಿಧ ಪ್ರದೇಶಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9.30 ರವರೆಗೆ ಎರಡು ಹಂತಗಳಲ್ಲಿ 90 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಭಾನುವಾರ ಹಠಾತ್ ವಿದ್ಯುತ್ ಕಡಿತದಿಂದಾಗಿ ಲಕ್ವಿಜಯ ವಿದ್ಯುತ್ ಸ್ಥಾವರದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಆಗಸ್ಟ್ 2022ರಲ್ಲಿ ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾಗ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಕಾರಣವಾದಿಂದ ಮೊದಲ ಬಾರಿಗೆ ವಿದ್ಯುತ್ ವ್ಯತ್ಯಯ ಎದುರಿಸಿತ್ತು.
ವಿದೇಶಿ ವಿನಿಮಯ ಕೊರತೆಯಿಂದಾಗಿ 12 ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡು ಇಂಧನ ಮತ್ತು ಅಗತ್ಯ ವಸ್ತುಗಳಿಗಾಗಿ ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು. ಇದರಂದ ಏಪ್ರಿಲ್ ಮತ್ತು ಜುಲೈ 2022ರ ನಡುವೆ ದೇಶದ ಪ್ರಜೆಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶವನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ನಂತರ ರಾಜೀನಾಮೆ ನೀಡಿದ್ದರು.
ಈ ವೇಳೆ ಭಾರತ ನೀಡಿದ್ದ 4 ಬಿಲಿಯನ್ ಯುಎಸ್ ಡಾಲರ್ ನೆರವು ಶ್ರೀಲಂಕಾ ಆರ್ಥಿಕವಾಗಿ ಚೇತರಿಕೆಗೆ ಸಹಾಯ ಮಾಡಿತ್ತು.
ಇದನ್ನೂ ಓದಿ: ಆಫೀಸ್ಗೆ ಹೋಗಿ ಬರಲು ನಿತ್ಯ 700 ಕಿಮೀ ವಿಮಾನ ಪ್ರಯಾಣ: ಭಾರತೀಯ ಮೂಲದ ಮಹಿಳೆಯ ದಿನಚರಿ ಕೇಳಿದರೆ ಹೌಹಾರದಿರಿ!