ಹೈದರಾಬಾದ್: ಫೆ. 19 ರಿಂದ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಅದರಲ್ಲೂ ಕ್ರೀಡಾ ಪ್ರಿಯರು ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ಉಭಯ ತಂಡಗಳ ನಡುವಿನ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಇದರ ನಡುವೆಯೇ ಪಾಕಿಸ್ತಾನದ ಉಪನಾಯಕ ಅಘಾ ಸಲ್ಮಾನ್ ಹೇಳಿಕೆಯೊಂದು ವೈರಲ್ ಆಗಿದೆ.
"ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ನಾನು ಕುತೂಹಲದಿಂದ ಕಾಯುತ್ತಿದ್ದೇನೆ." 8 ವರ್ಷಗಳ ಬಳಿಕ ಐಸಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮಗೆ ತುಂಬಾ ವಿಶೇಷವಾಗಿದೆ. ಈ ಬಾರಿ ಲಾಹೋರ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯುವುದು ನಮ್ಮ ಗುರಿ ಆಗಿದೆ. ಆ ಕನಸು ನನಸಾಗುತ್ತದೆ ಎಂದು ನಾನು ಭಾವಿಸುತ್ತೇನೆ.
ಕಳೆದ ಬಾರಿಯಂತೆ ಈ ಬಾರಿಯೂ ನಮಗೆ ಗೆಲ್ಲುವ ಶಕ್ತಿ ಇದೆ. ಅದರಲ್ಲೂ ಭಾರತ ವಿರುದ್ಧದ ಪಂದ್ಯವನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ. ಇತರ ಪಂದ್ಯಗಳಿಗೆ ಹೋಲಿಸಿದರೆ ಇದು ಸ್ವಲ್ಪ ಭಿನ್ನವಾಗಿದೆ. ಇದು ಅತ್ಯಂತ ದೊಡ್ಡ ಫೈಟ್ ಎಂದು ಅಭಿಮಾನಿಗಳು ಹೇಳುತ್ತಾರೆ. ಒಬ್ಬ ಕ್ರಿಕೆಟಿಗನಾಗಿ, ಇದು ಸಾಮಾನ್ಯ ಪಂದ್ಯಗಳಂತೆ ಎಂದು ನಾನು ಭಾವಿಸುತ್ತೇನೆ.
ನಮಗೆ ಈ ಪಂದ್ಯ ಗೆಲ್ಲುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದೆ ಮುಖ್ಯವಾಗಿದೆ. ಆದಾಗ್ಯೂ, ನಾವೆಲ್ಲರೂ ಭಾರತದ ವಿರುದ್ಧ ಗೆಲ್ಲಲು ಬಯಸುತ್ತೇವೆ. ಅದಕ್ಕಾಗಿ ನಾವು ಕೊನೆಯವರೆಗೂ ಪ್ರಯತ್ನಿಸುತ್ತೇವೆ. "ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಎಂದು ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 2017ರ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು 8 ವರ್ಷ ಏಕೆ ನಿಲ್ಲಿಸಲಾಗಿತ್ತು?