ETV Bharat / international

ಪ್ರಯಾಣಿಕರಿದ್ದ ದೋಣಿ ಮುಳುಗಿ 78 ಮಂದಿ ಸಾವು: 10 ಮಂದಿಯ ರಕ್ಷಣೆ - 78 people died when boat capsized

ಕಾಂಗೋದಲ್ಲಿ ದುರಂತವೊಂದು ಸಂಭವಿಸಿದೆ. 278 ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ ಸುಮಾರು 78 ಮಂದಿ ಮೃತಪಟ್ಟಿದ್ದಾರೆ.

author img

By PTI

Published : 2 hours ago

CONGO BOAT CAPSIZE
ಪ್ರಯಾಣಿಕರಿದ್ದ ದೋಣಿ ಮುಳುಗಿ 78 ಮಂದಿ ಸಾವು: 10 ಮಂದಿಯ ರಕ್ಷಣೆ (AP)

ಗೋಮಾ, ಕಾಂಗೋ: ಪೂರ್ವ ಕಾಂಗೋದ ಕಿವು ಸರೋವರದಲ್ಲಿ 278 ಪ್ರಯಾಣಿಕರಿದ್ದ ದೋಣಿಯೊಂದು ಗುರುವಾರ ಮಗುಚಿ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ.

ಈ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ. ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ (ಗಜ) ದೂರದಲ್ಲಿ ಡಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು.

ದೋಣಿ ಮುಳುಗಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಳುಗಿದ ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

CONGO BOAT CAPSIZE
ಕಾಂಗೋದಲ್ಲಿ ದುರಂತವೊಂದು ಸಂಭವಿಸಿದೆ (AP)

10 ಮಂದಿ ಬದುಕುಳಿದಿದ್ದು, ಅವರೆನ್ನಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಳಿದವರ ರಕ್ಷಣೆ ಹಾಗೂ ಶವಗಳಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಗಳು ಮುಂದುವರೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದು ಮಧ್ಯ ಆಫ್ರಿಕನ್ ದೇಶದಲ್ಲಿ ಇತ್ತೀಚಿನ ಮಾರಣಾಂತಿಕ ದೋಣಿ ಅಪಘಾತವಾಗಿದೆ. ಸಣ್ಣ ಹಡಗುಗಳು ಮತ್ತು ದೋಣಿಗಳಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವಾಗ ಇಂತಹ ದೊಡ್ಡ ದೊಡ್ಡ ಅಪಘಾತಗಳು ವರದಿಯಾಗುತ್ತಲೇ ಇವೆ.

CONGO BOAT CAPSIZE
10 ಮಂದಿಯ ರಕ್ಷಣೆ (AP)

ಕಾಂಗೋಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಓವರ್‌ಲೋಡ್‌ ದೋಣಿ ಪ್ರಯಾಣದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಮತ್ತು ಜಲ ಸಾರಿಗೆ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೂ ಇಂತಹ ದುರ್ಘಟನೆಗಳು ನಿಂತಿಲ್ಲ.

CONGO BOAT CAPSIZE
278 ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮುಳುಗಡೆ (AP)

ಕಳದೆ ಜೂನ್‌ನಲ್ಲಿ, ಕಿನ್ಶಾಸಾದ ರಾಜಧಾನಿ ಬಳಿ ಓವರ್‌ಲೋಡ್ ಆಗಿದ್ದ ದೋಣಿ ಮುಳುಗಿ 80 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು. ಜನವರಿಯಲ್ಲಿ, ಮಾ-ನ್ಡೊಂಬೆ ಸರೋವರದಲ್ಲಿ 22 ಜನರು ಸಾವನ್ನಪ್ಪಿದರು ಮತ್ತು ಏಪ್ರಿಲ್ 2023 ರಲ್ಲಿ ಆರು ಮಂದಿ ಮೃತಪಟ್ಟಿದ್ದರು.

ಇದನ್ನು ಓದಿ: ಭಾರತದಲ್ಲಿನ ತನ್ನ ರಾಯಭಾರಿ ವಾಪಸ್​​ ಕರೆಸಿಕೊಂಡ ಬಾಂಗ್ಲಾದೇಶ - Bangladesh Recalls Ambassadors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.