ETV Bharat / opinion

ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ: ಶರದ್ ಪವಾರ್, ಉದ್ಧವ್‌ ಠಾಕ್ರೆಗೆ ರಾಜಕೀಯ ಅಸ್ತಿತ್ವದ ಪ್ರಶ್ನೆ - MAHARASHTRA ELECTION RESULT

ರಾಜಕೀಯ ನಿವೃತ್ತಿಯ ಅಂಚಿನಲ್ಲಿರುವ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಿಗೆ​ ಮಹಾರಾಷ್ಟ್ರ ಚುನಾವಣಾ ಫಲಿತಾಂಶ ನಿರಾಸೆ ಮೂಡಿಸಿದೆ. ಈ ಕುರಿತು 'ಈಟಿವಿ ಭಾರತ್'​ ಸಂಪಾದಕ ಬಿಲಾಲ್​ ಭಟ್​ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

maharashtra-election-result-leaves-pawar-and-thackeray-in-search-for-survival
ಶರದ್​ ಪವಾರ್​, ಉದ್ಧವ್​ ಠಾಕ್ರೆ (ANI)
author img

By Bilal Bhat

Published : Nov 25, 2024, 12:31 PM IST

Updated : Nov 25, 2024, 2:34 PM IST

ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತಕ್ಕೆ ಪ್ರಬಲ ಪ್ರತಿಪಕ್ಷ ಪ್ರಮುಖವಾಗಿದೆ. ಆದರೆ, ಪ್ರತಿಪಕ್ಷದ ಗಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ. ಇಲ್ಲಿ ಪ್ರತಿಪಕ್ಷದ ಉಳಿಯುವಿಕೆಯೇ ಸವಾಲಾಗಿದೆ. ವಿಧಾನಸಭೆಯ ಬಾವಿಯಲ್ಲಿ ಪ್ರತಿಪಕ್ಷದ ಧ್ವನಿಯನ್ನು ಹುಡುಕುವಂತಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಅನೇಕರಿಗೆ ಅಚ್ಚರಿ ಮೂಡಿಸಿದೆ. ವಿಶೇಷವಾಗಿ, ಎನ್​ಸಿಪಿ (ಎಸ್​ಪಿ) ಮತ್ತು ಶಿವಸೇನಾ (ಯುಬಿಟಿ) ಕೊಂಚ ಉತ್ತಮ ಪ್ರದರ್ಶನ ತೋರಬಹುದು ಎಂದು ನಿರೀಕ್ಷಿಸಿದವರಿಗೆ ನಿರಾಸೆಯಾಗಿದೆ.

2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ಎನ್​ಸಿಪಿ 54 ಮತ್ತು ಅವಿಭಜಿತ ಶಿವಸೇನೆ 56 ಸ್ಥಾನ ಗಳಿಸಿತ್ತು. ವಿಭಜನೆಗೆ ಮೊದಲು ಶಿವಸೇನೆ ಬಿಜೆಪಿ ಜೊತೆ ಸ್ಪರ್ಧಿಸಿದ್ದಾಗ ಅವಿಭಜಿತ ಎನ್​ಸಿಪಿ ಕಾಂಗ್ರೆಸ್​ ಜೊತೆ ಸ್ಪರ್ಧಿಸಿ ಗೆಲುವು ಕಂಡಿತ್ತು.

ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, 2024ರಲ್ಲಿ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಶಿವಸೇನೆ 44 ಗೆದ್ದು 13 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತು. ಎನ್​ಸಿಪಿಯೂ 35 ಸ್ಥಾನ ಗೆದ್ದು, ಆರರಲ್ಲಿ ಮುನ್ನಡೆ ಸಾಧಿಸಿತು. ಶಿವಸೇನಾ (ಯುಬಿಟಿ) ಮತ್ತು ಎನ್​ಸಿಪಿ (ಎಸ್​ಪಿ) ಕಳಪೆ ಪ್ರದರ್ಶನ ತೋರಿತು. ಎನ್​ಸಿಪಿ (ಎಸ್​ಪಿ) 8 ಸ್ಥಾನ ಗೆದ್ದು, 2 ಸ್ಥಾನದಲ್ಲಿ ಮುನ್ನಡೆ ಸಾಧಿಸಿದರೆ, ಶಿವಸೇನಾ (ಯುಬಿಟಿ) 17 ಸ್ಥಾನ ಗೆದ್ದು, ಮೂರು ಸ್ಥಾನದಲ್ಲಿ ಮುನ್ನಡೆ ಕಂಡಿತು.

ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ಶರದ್ ಪವಾರ್ ಅವರ ಎನ್‌ಸಿಪಿಗಿಂತಲೂ ಉತ್ತಮ ಪ್ರದರ್ಶನ ತೋರಿದೆ. ರಾಜಕೀಯ ವೃತ್ತಿಜೀವನದ ಅಂಚಿನಲ್ಲಿರುವ ಶರಾದ್​ ಪವರ್​ ಅವರಿಗೆ ಫಲಿತಾಂಶ ನಿರಾಶೆ ಮೂಡಿಸಿದೆ. ಅವರ ರಾಜಕೀಯ ಪರಂಪರೆಯ ಅಸ್ತಿತ್ವವೇ ಈಗ ಅಪಾಯದಲ್ಲಿದೆ. ಅವರ ಮಗಳು ಸುಪ್ರಿಯಾ ಸುಳೆ ಅವರ ಮೇಲಿನ ಪ್ರೀತಿಯಿಂದಾಗಿ ಪವಾರ್ ಭಾರೀ ಬೆಲೆ ತೆರುವಂತಾಗಿದೆ.

ಅದೇ ರೀತಿ, ಶಿವಸೇನೆಯ ಉದ್ಧವ್​ ಠಾಕ್ರೆ ಅವರು ಶಿವಸೇನೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಬದಲು ಏಕನಾಥ್ ಶಿಂಧೆ ಅವರಿಗೆ ಗೌರವಾನ್ವಿತ ಸ್ಥಾನ ನೀಡಿ ಸುಮ್ಮನಿರಬಹುದಿತ್ತು. ತಮ್ಮ ಸೋದರ ಸಂಬಂಧಿ ರಾಜ್ ಠಾಕ್ರೆಯವರೊಂದಿಗೂ ಒಪ್ಪಂದ ಮಾಡಿಕೊಳ್ಳಬಹುದಿತ್ತು. ಉದ್ಧವ್ ಮತ್ತು ರಾಜ್ ನಡುವೆ ಮಧ್ಯಸ್ಥಿಕೆಗೆ ಅನೇಕರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಲ್ಲಿ ವಂಶಾವಳಿ ಪ್ರಮುಖ ಪಾತ್ರವಹಿಸಿತು. ಆದರೆ, ಹಾಲಿ ನಡೆದ ಚುನಾವಣೆಯಲ್ಲಿ ಏಕನಾಥ್​ ಶಿಂಧೆ ಪರವಾಗಿ ಜನಾದೇಶ ಸಿಕ್ಕಿದೆ.

2024ರ ಲೋಕಸಭಾ ಚುನಾವಣೆಯ ಬಳಿಕ ಹಿರಿಯ ನಾಯಕರಾದ ಪವಾರ್​, ಉದ್ಧವ್​​ ಮತ್ತು ಕಾಂಗ್ರೆಸ್‌ಗೆ ಒಂದು ಭರವಸೆ ಇತ್ತು. ಆದರೆ, ಅವರೊಳಗಿನ ಅಂತ:ಕಲಹ ಮತದಾರರಿಗೆ ಅವರ ವಿರೋಧಿ ಬಿಜೆಪಿ ಅಭ್ಯರ್ಥಿ ಪರ ಹೋಗುವಂತೆ ಮಾಡಿತು.

ಈ ಫಲಿತಾಂಶ ಕೇವಲ ಉದ್ಧವ್​ ಅಥವಾ ಶರಾದ್​ ಅವರಿಗೆ ಮಾತ್ರವಲ್ಲದೇ, ಅಜಿತ್ ನೇತೃತ್ವದ ಎನ್‌ಸಿಪಿ ಮತ್ತು ಏಕನಾಥ್ ನೇತೃತ್ವದ ಶಿವಸೇನೆಯನ್ನೂ ಅಪಾಯಕ್ಕೆ ಸಿಲುಕಿಸಿದೆ. ಮೈತ್ರಿಯಲ್ಲಿನ ಅವರ ಗೆಲುವಿನ ಮೊತ್ತ ಸಣ್ಣದಾಗಿದ್ದು, ಮುಂದಿನ ದಿನದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ಬಿಜೆಪಿ ಜೊತೆಗಿನ ಮಾತುಕತೆಯಲ್ಲಿ ಧ್ವನಿ ಗಟ್ಟಿಗೊಳಿಸಲು ಸಾಧ್ಯವಾಗುವುದಿಲ್ಲ.

ಉತ್ತರಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಜನರು ತಮ್ಮದೇ ಆದ ವಿಧಾನ ಹೊಂದುತ್ತಾರೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶ ಒಂದು ಉದಾಹರಣೆ. ಮಹಾಯುತಿ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಉದ್ಧವ್​ ಬದಲಾಗಿ ಜನರು ಏಕನಾಥ್​ ಶಿಂಧೆ ಅವರನ್ನು ಆಯ್ಕೆ ಮಾಡಿದರು. ಅದೇ ರೀತಿ ಶರದ್​ ಪವಾರ್​ ಬದಲಾಗಿ ಅಜಿತ್​ ಪವಾರ್ ಅವರನ್ನು​ ಆಯ್ಕೆ ಮಾಡಿದರು. ಈ ಚುನಾವಣೆಯ ಫಲಿತಾಂಶ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷದ ವರಸೆಯನ್ನೇ ಬದಲಾಯಿಸಿದೆ.

ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಮಾಡುವ ಸ್ಥಳೀಯ ಸಮಸ್ಯೆಗಳ ಕುರಿತ ಭಾಷಣಗಳು ಗೆಲುವಿನಲ್ಲಿ ನಿರ್ಣಾಯಕವಾಗುತ್ತವೆ. ಅದರಲ್ಲೂ ಮರಾಠಿ ಅಸ್ಮಿತೆ ವಿಷಯ ಗೆಲುವಿನ ರೂವಾರಿಯಾಗಿರುತ್ತದೆ. ಆದರೆ, ಈ ಬಾರಿ ಮರಾಠ ಹೆಮ್ಮೆಗಿಂತ ಗೆದ್ದು ಬೀಗಿದ್ದು ಹಿಂದೂ ರಾಷ್ಟ್ರೀಯತೆ. ಮಹಾರಾಷ್ಟ್ರ ಯಾವಾಗಲೂ ಮರಾಠ ಸಂಬಂಧಿಸಿದ ವಿಷಯದಲ್ಲಿ ಗೆಲುವು ಕಂಡಿದೆ. 46 ವರ್ಷದ ಹಿಂದೆ ಸ್ಥಳೀಯ ಸಮಸ್ಯೆಗಳ ಕುರಿತು ಮತದಾರರ ಮನ ತಲುಪಿದ್ದ ಶರದ್​​ ಪವಾರ್​ ಮಹಾರಾಷ್ಟ್ರದ ಕಿರಿಯ ಸಿಎಂ ಪಟ್ಟಕ್ಕೂ ಏರಿದ್ದರು. ಬಳಿಕ ಕಾಂಗ್ರೆಸ್​ ತೊರೆದ ಅವರು ಎನ್‌ಸಿಪಿ ಸೇರಿದ್ದು ಈಗ ಇತಿಹಾಸ.

ಅದೇ ರೀತಿ, ಶಿವಸೇನೆ ರಾಜ್ಯದಲ್ಲಿ ಮರಾಠಿ ಹೆಮ್ಮೆಯ ವಿಷಯದ ಸುತ್ತಮುತ್ತದ ವಿಚಾರದಿಂದ ಮತದಾರರ ಮನ ಸೆಳೆಯುತ್ತದೆ. ಹಿಂದೆ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆಯ ವಿಚಾರವನ್ನು ಮತ ಸೆಳೆಯಲು ಅಸ್ತ್ರ ಮಾಡಿದ್ದವು. ಆದರೆ ಈ ಬಾರಿ ಪ್ರಾದೇಶಿಕ ಪಕ್ಷಗಳು ವಿಭಜನೆಯಾದವು.

ಫಲಿತಾಂಶ ಪ್ರಕಟವಾಗುವವರೆಗೂ ಪ್ರಾದೇಶಿಕ ಪಕ್ಷಗಳು ಏನಾದರೂ ಹೇಳುತ್ತಿರುತ್ತವೆ. ಆದರೆ, ಗೆಲುವಿನ ನಂತರ ದೇವೇಂದ್ರ ಫಡ್ನವಿಸ್​ ಮಾತಿನ ವೈಖರಿ ಗಮನಿಸಿದಾಗ ಪ್ರಾದೇಶಿಕ ಪಕ್ಷಗಳು ಅಧೀನರಾಗಿ ಉಳಿಯಬೇಕಾಗುತ್ತದೆ ಎಂಬುದು ಗೋಚರವಾಗುತ್ತದೆ. ಇದೊಂದು ಸಿದ್ಧಾಂತದ ಯುದ್ದ. ಪ್ರಧಾನಿ ಮೋದಿ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದು, ಅವರ ವಿಚಾರಗಳನ್ನು ನಿರ್ಲಕ್ಷ್ಯಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಜನರು ವಿಕಾಸ್​ (ಅಭಿವೃದ್ಧಿ) ಮತ್ತು ಲಾಡ್ಲಿ ಬೆಹನ್​ ಯೋಜನೆಗೆ ಮತ ನೀಡಿದ್ದಾರೆ. ಮಹಾರಾಷ್ಟ್ರದ ಪಶ್ಚಿಮದ ಭಾಗದ ಹೊರತಾಗಿ ಎಲ್ಲಾ ಪ್ರದೇಶದಲ್ಲಿ ಬಿಜೆಪಿ ಮತ್ತು ಮಹಾಯುತಿ ಮೈತ್ರಿಗೆ ಬೆಂಬಲ ನೀಡಿದ್ದಾರೆ. ಇದು ಸಂಪೂರ್ಣ ಗೆಲುವು ಮತ್ತು ಮಹಾಯುತಿಗೆ ಬಹುದೊಡ್ಡ ಗೆಲುವಾಗಿದೆ.

ಇದೀಗ ಮಹಾರಾಷ್ಟ್ರ ಚುನಾವಣೆಯಲ್ಲಿ ಮಾಜಿ ಸಿಎಂ ಪೃಥ್ವಿರಾಜ್​ ಚೌಹಣ್​, ಬಾಲಸಾಹೇಬ್​ ಥ್ರೋಟ್​​ಅವರಂಥ ಪ್ರಮುಖ ಎಂಟು ಶಾಸಕರು ಸೋಲು ಕಂಡಿದ್ದು, ಪ್ರತಿಪಕ್ಷ ಪ್ರತಿನಿಧಿಸುವ ಮುಖಗಳಿಗೆ ಹುಡುಕಾಟ ನಡೆಸಬೇಕಿದೆ. ಜೊತೆಗೆ, ಯಾವುದೇ ಪಕ್ಷವೂ 29 ಸೀಟ್​ಗಳನ್ನು ಗೆಲ್ಲುವಲ್ಲಿ ವಿಫಲವಾಗುವ ಮೂಲಕ ಪ್ರತಿಪಕ್ಷದ ಸ್ಥಾನದ ಕೂರುವಲ್ಲಿ ಸೋತಿದೆ.

ಐದು ವರ್ಷದ ಕಾಲ ಜೀವಂತವಾಗಿರಲು ಮತ್ತು ಮತ್ತೆ ಐದು ವರ್ಷದ ನಂತರದ ಅಧಿಕಾರದ ಗದ್ದುಗೆಗೇರಲು ಅವರು ಜನ ಸಂಬಂಧಿ ಕಾರ್ಯಸೂಚಿ ಹೊಂದುವುದು ಅವಶ್ಯಕವಾಗಿದೆ. ಇದಕ್ಕೂ ಮುನ್ನ ಅವರು ತಮ್ಮ ಪ್ರಸ್ತುತ ನಾಯಕತ್ವದಲ್ಲಿ ಪ್ರಬಲ ಬದಲಾವಣೆ ಕಾಣಬೇಕಿದೆ. ಉತ್ತರಾಧಿಕಾರಿಗಳು ಪ್ರಬಲವಾಗಿದ್ದಾಗ ಮಾತ್ರವೇ ಪಕ್ಷದ ಅಸ್ತಿತ್ವ ಉಳಿಯಲು ಸಾಧ್ಯವಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಮಹಾಯುತಿ ಗೆಲುವಿನ ಸುನಾಮಿಯಲ್ಲಿ ಕೊಚ್ಚಿ ಹೋದ ವಿಪಕ್ಷ ನಾಯಕ ಸ್ಥಾನ

Last Updated : Nov 25, 2024, 2:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.