ETV Bharat / entertainment

ಅವಾಚ್ಯ ಶಬ್ದ ಬಳಸಿದ್ದ ರಜತ್​ಗೆ ಕಿಚ್ಚನ ಕ್ಲಾಸ್​: ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆಂದ ಸ್ಪರ್ಧಿಗೆ ಸುದೀಪ್ ಪಾಠ​​ - BIGG BOSS KANNADA 11

ಇತ್ತೀಚೆಗಷ್ಟೇ ಗೋಲ್ಡ್​ ಸುರೇಶ್​ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದ ರಜತ್ ಕಿಶನ್​​ ಅವರಿಗೆ ಸುದೀಪ್​​ ಕ್ಲಾಸ್​ ಕೊಟ್ಟಿದ್ದಾರೆ.

Suresh, Rajath
ಸುರೇಶ್, ರಜತ್​ (Photo: Bigg Boss Kannada)
author img

By ETV Bharat Entertainment Team

Published : Nov 23, 2024, 3:44 PM IST

ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 11' ಎಂಟನೇ ವಾರಾಂತ್ಯ ಬಂದು ತಲುಪಿದೆ. ವೈಲ್ಡ್​ ಕಾರ್ಡ್ ಮೂಲಕ ಬಂದಿರುವ ರಜತ್​ ಕಿಶನ್​​ ಮೊದಲ ವಾರದಲ್ಲೇ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ವಾರಾಂತ್ಯದಲ್ಲಿ ಬಿಸಿ ಮುಟ್ಟಲಿದೆ ಎಂದು ಪ್ರೇಕ್ಷಕರ ಪೈಕಿ ಬಹುತೇಕರು ಅಂದಾಜಿಸಿದ್ದರು. ನಿರೀಕ್ಷೆಯಂತೆ ಇಂದಿನ ಸಂಚಿಕೆಯಲ್ಲಿ ರಜತ್​ಗೆ ಕಿಚ್ಚನ ಕ್ಲಾಸ್​​ ಸಿಗಲಿದೆ.

ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆಂದ ಸ್ಪರ್ಧಿಗೆ ಸುದೀಪ್ ಪಾಠ​​ ಮಾಡಲಿರದ್ದು, ಅದರ ಸುಳಿವನ್ನು ಇಂದು ಅನಾವರಣಗೊಂಡಿರುವ ಪ್ರೋಮೋ ಬಿಟ್ಟುಕೊಟ್ಟಿದೆ. ''ವರ್ಚಸ್ಸಿಗೂ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿಯೋಕೆ ಬಂದ್ರು ಕಿಚ್ಚ ಸುದೀಪ! ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್​​ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. ಅಭಿನಯ ಚಕ್ರವರ್ತಿ ಸುದೀಪ್ ಅವರ ತೂಕದ ಮಾತುಗಳು ಪ್ರೇಕ್ಷಕರಿಗೆ ಹಿಡಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

''ಒಬ್ಬ ಮನುಷ್ಯನ ಬಾಯಿಂದ ಬರುವ ಪದಗಳು ಬರಿ ಮಾತಲ್ಲ, ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟಾನು ಏರಿಸುತ್ತೆ, ಒಂದು ಮಾತು ಸೋಲಿನ ದಾರೀನೂ ಹಿಡಿಸುತ್ತೆ'' ಎಂಬ ಸುದೀಪ್​ ಅವರ ಮಾತುಗಳೊಂದಿಗೆ ರಜತ್​ ಕಿಶನ್​ ಮತ್ತು ಗೋಲ್ಡ್​ ಸುರೇಶ್​ ಅವರ ಗಲಾಟೆಯ ವಿಡಿಯೋ ಹಾಕಲಾಗಿದೆ. ಅಲ್ಲಿಗೆ, ಇಂದು ರಜತ್​ಗೆ ಕಿಚ್ಚನ ಕ್ಲಾಸ್​ ಸಿಗೋದು ಪಕ್ಕಾ ಆಗಿದೆ. ಹಾಗಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈಗಾಗಲೇ 50 ದಿನಗಳ ಕಾರ್ಯಕ್ರಮ ನಡೆದಿದ್ದು, ಇಬ್ಬರು ವೈಲ್ಡ್​ ಕಾರ್ಡ್​​ ಸ್ಪರ್ಧಿಗಳು ಈ ವಾರದ ಆರಂಭದಲ್ಲಿ ಮನೆ ಪ್ರವೇಶಿಸಿದರು. ಅವರಿಬ್ಬರಿಗೂ ಇದು ಮೊದಲ ವಾರಾಂತ್ಯ. ಇವರಿಗೂ ಮುನ್ನ ಹನುಮಂತು ಅವರು ವೈಲ್ಡ್​ ಕಾರ್ಡ್​​ ಮೂಲಕ ಮನೆ ಪ್ರವೇಶಿಸಿದ್ದರು. ಮೊದಲ ವೈಲ್ಡ್​​​ಕಾರ್ಡ್​ ಸ್ಪರ್ಧಿ ಆಗಿರುವ ಹನುಮಂತು ಅವರು ತಮ್ಮ ನಡೆ ನುಡಿಯಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಎಂಟನೇ ವಾರಕ್ಕೆ ಮನೆ ಪ್ರವೇಶಿಸಿರುವ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್​​ ತಮ್ಮ ಏರುದನಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವುದರ ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ ಸ್ಪರ್ಧಿ ಹನುಮಂತುಗೆ ಬಟ್ಟೆ ಕಳುಹಿಸಿಕೊಟ್ಟ ಸುದೀಪ್‌: ಹೃದಯಸ್ಪರ್ಶಿ ಪತ್ರದಲ್ಲೇನಿದೆ?

ಇತ್ತೀಚೆಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಆಗ ರಜತ್​ ಮತ್ತು ಸುರೇಶ್ ನಡುವೆ ಮನಸ್ತಾಪವಾಗಿತ್ತು. ರಜತ್​ '...... ಮಗನೇ' ಎಂಬಂತಹ ಕೆಲ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಜೊತೆಗೆ ಬಳೆ ತೊಟ್ಟಿಕೋ ಎಂದು ಕೂಡಾ ಸುರೇಸ್​ಗೆ ತಿಳಿಸಿದ್ದರು. ಕೆರಳಿದ ಸುರೇಶ್​ ಮನೆ ಬಿಡಲು ನಿರ್ಧರಿದ್ದರು. ಆಗ ಮನೆಯೆ ಇತರೆ ಸದಸ್ಯರು ಸಂತೈಸಿದ್ದರು.

ಇದನ್ನೂ ಓದಿ: 'ಬಘೀರ'​ ಸೇರಿ ಒಟಿಟಿ ಪ್ರವೇಶಿಸಿದ ಕನ್ನಡದ ಹಿಟ್​​ ಚಿತ್ರಗಳಿವು

ವಾರಾಂತ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಮನೆಯವರು ರಜತ್​ ಹೆಸರನ್ನು ಸೂಚಿಸಿದ್ದರು. ಅದಕ್ಕೆ ಅಸಮಧಾನಗೊಂಡ ಅವರು​​​, ಬಿಗ್​ ಬಾಸ್​ ಆಟ ಗೆಲ್ಲೋದು ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ. ನಾನಿರೋದೇ ಹೀಗೆ. ಇನ್ಮುಂದೆಯೂ ಇದೇ ತರ ಇರುತ್ತೇನೆ. ಇದಕ್ಕಿಂತ ಇನ್ನೂ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಒಟ್ಟಾರೆ ಇವತ್ತು ರಜತ್​ ಅವರ ವಿಷಯ ಚರ್ಚೆಗೆ ಬರೋದು ಗ್ಯಾರಂಟಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.