ಮುಂಬೈ:ಪ್ರತಿ ಭಾನುವಾರದಂತೆ ಈ ಭಾನುವಾರವೂ ಸಹ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮುಂಬೈ ನಿವಾಸ ಜಲ್ಸಾದ ಹೊರಗೆ ಅಭಿಮಾನಿಗಳು ದಾಂಗುಡಿ ಇಟ್ಟಿದ್ದರು. ಅಭಿಮಾನಿಗಳ ಕೇಕೆ, ಘೋಷಣೆ, ಚೆಪ್ಪಾಳೆಗಳನ್ನು ಕಂಡ ಬಚ್ಚನ್, ಹೊರಗೆ ಬಂದು ಕೈಮುಗಿದು ತಮ್ಮ ವಿನಮ್ರತೆಯನ್ನು ತೋರಿಸಿದರು.
81 ವರ್ಷದ ನಟ ಬಚ್ಚನ್, ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಕೇಕೆ ಮತ್ತು ಚಪ್ಪಾಳೆಗಳು ವೇಗ ಪಡೆದವು. ತಮ್ಮ ನೆಚ್ಚಿನ ಹೆಸರು ಸಹಿತ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅಭಿಮಾನಿಗಳ ಅಭಿಮಾನ ಕಂಡು ಬಚ್ಚನ್, ಗೌರವದ ಸೂಚಕವಾಗಿ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಕೈಮುಗಿದು ವಿನಮ್ರತೆ ತೋರಿಸಿದರು.
ಕಳೆದ ನಾಲ್ಕು ದಶಕಗಳಿಂದ ಪ್ರತಿ ಭಾನುವಾರ ಇದೇ ರೀತಿಯ ಸಂಖ್ಯೆಯ ಅಭಿಮಾನಿಗಳು ಅಮಿತಾಬ್ ಬಚ್ಚನ್ ಅವರ ನಿವಾಸದ ಮುಂದೆ ಸೇರಿರುತ್ತದೆ. ಅಷ್ಟೇ ಪ್ರೀತಿಯಿಂದ ಮನೆಯಿಂದ ಹೊರ ಬರುವ ಬಚ್ಚನ್, ಕೆಲವು ನಿಮಿಷಗಳ ಕಾಲ ನಿಂತು, ಅಭಿಮಾನಿಗಳ ಹರ್ಷ ಕಂಡು ತೆರಳುತ್ತಾರೆ. ಅಭಿಮಾನಿಗಳನ್ನು ಭೇಟಿ ಮಾಡುವಾಗ ಅವರು ಚಪ್ಪಲಿ ಹಾಕಿಕೊಳ್ಳದಿರುವುದು ಮತ್ತೊಂದು ವಿಶೇಷ. ಈ ಭಾನುವಾರ ಸಹ ಜಲ್ಸಾ ಬಾಗಿಲು ಮುಚ್ಚುವವರೆಗೂ ಅಲ್ಲಿಯೇ ಇದ್ದು ಸನ್ನೆ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿ ಮತ್ತೆ ಮನೆಯ ಒಳಗೆ ತೆರಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಆದರೆ, 81 ವರ್ಷದ ನಟ ಬಚ್ಚನ್, ತನ್ನ ಅಭಿಮಾನಿಗಳಿಗೆ ಕೈ ಬೀಸುವಂತೆ ಎಂದಿನಂತೆ ಎನರ್ಜಿಟಿಕ್ ಆಗಿದ್ದರು. ಅಭಿಮಾನಿಗಳು ಕೂಡ ಅವರ ಎನರ್ಜಿ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
ಪ್ರಭಾಸ್ ನಟನೆಯ ನಾಗ ಅಶ್ವಿನ್ ನಿರ್ದೇಶನದ ಬಹುನಿರೀಕ್ಷಿತ 'ಕಲ್ಕಿ 2898 AD' ಚಿತ್ರದಲ್ಲಿ ಬಿಗ್ ಬಿ ನಟಿಸಿದ್ದು, ಇದೇ ಜೂನ್ 27 ರಂದು ಬಿಡುಗಡೆಯಾಗಲಿದೆ. ವೈಜ್ಞಾನಿಕ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಇವರಷ್ಟೇ ಅಲ್ಲದೇ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶರುವಾಗಿದೆ. ಟ್ರೈಲರ್ ಬಿಡಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಇದನ್ನೂ ಓದಿ:ಕಲ್ಕಿ ಸಿನಿಮಾದ ಟ್ರೈಲರ್ಗೂ ಮುನ್ನ ಪೋಸ್ಟರ್ ಬಿಡುಗಡೆ; ಸ್ಟನ್ನಿಂಗ್ ಲುಕ್ನಲ್ಲಿ ದೀಪಿಕಾ ಪಡುಕೋಣೆ - Kalki Stunning Poster