ETV Bharat / entertainment

'ಮೂರನೆಯದ್ದೂ ಹೆಣ್ಣು ಮಗು, ನಿಜವಾದ ಚಾಲೆಂಜ್​​ ಅಂದು ಶುರುವಾಯ್ತು': ಚೈತ್ರಾ ಕುಂದಾಪುರ - CHAITRA KUNDAPURA

ಚೈತ್ರಾ ಕುಂದಾಪುರ ಅವರ ತಾಯಿ ಮತ್ತು ತಂಗಿ ಮನೆಯೊಳಗೆ ಆಗಮಿಸಿದ್ದು, ಭಾವನಾತ್ಮಕ ಕ್ಷಣಕ್ಕೆ ಬಿಗ್​ ಬಾಸ್​ ಸಾಕ್ಷಿಯಾಗಿದೆ.

Chaitra Kundapura
ಚೈತ್ರಾ ಕುಂದಾಪುರ (Photo: Bigg Boss Team)
author img

By ETV Bharat Entertainment Team

Published : Jan 2, 2025, 6:49 PM IST

ಹೆಚ್ಚಾಗಿ ಆರ್ಭಟಗಳಲ್ಲೇ ಕಳೆದು ಹೋಗುವ ಕನ್ನಡ ಬಿಗ್​ ಬಾಸ್​ ಮನೆಯೀಗ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ಮನೆ ಮಂದಿ ಆಗಮಿಸುತ್ತಿದ್ದು, ಈ ವಾರ ಎಮೋಶನಲ್​ ವೀಕ್​​ ಆಗಿ ಮಾರ್ಪಾಡಾಗಿದೆ. ಇಂದಿನ ಸಂಚಿಕೆಯಲ್ಲಿ ಧನರಾಜ್​ ಆಚಾರ್​, ಹನುಮಂತ ಮತ್ತು ಚೈತ್ರಾ ಕುಂದಾಪುರ ಕುಟುಂಬಸ್ಥರನ್ನು ಕಾಣಬಹುದಾಗಿದೆ.

'ದೊಡ್ಮನೆ ತುಂಬಾ ಸಂತಸ, ಸಂಭ್ರಮದ ಜೊತೆ ಒಂದಿಷ್ಟು ಕಣ್ಣೀರು' ಎಂಬ ಕ್ಯಾಪ್ಷನ್​​ನಡಿ ಪ್ರೋಮೋ ಅನಾವರಣಗೊಂಡಿದೆ. ಚೈತ್ರಾ ಕುಂದಾಪುರ ಅವರ ತಾಯಿ ಮತ್ತು ತಂಗಿ ದೊಡ್ಮನೆ ಪ್ರವೇಶಿಸಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ರಜತ್​ ಅವರಿಗೆ ನನಗೆ ನೀವ್​ ಬಾಸ್​​ ಎಂದು ಚೈತ್ರಾ ಕುಂದಾಪುರ ಅವರ ಸಹೋದರಿ ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಭಾವುಕ: ಇನ್ನೂ ತಾಯಿ ಮಾತನಾಡಿ, ಎಲ್ಲಾ ಸೇರಿ ನನ್ನ ಮಗಳಿಗೆ ಕಳಪೆ ಕೊಟ್ರಿ. ಆದರೆ ಅವಳು ನಮಗೆ ಎಂದೆಂದಿಗೂ ಉತ್ತಮವೇ ಎಂದು ಹೇಳಿ ಚೈತ್ರಾ ಕುಂದಾಪುರಗೆ ಮೆಡಲ್​ ಹಾಕಿದ್ದಾರೆ. ನಂತರ ಚೈತ್ರಾ ಮಾತನಾಡಿ, ಇವಳು (ತಂಗಿ) ಹುಟ್ಟಿದಾಗ ನನಗೆ ನಿಜವಾದ ಚಾಲೆಂಜ್​ ಶುರುವಾಗುತ್ತದೆ. ಮೂರನೆಯದ್ದೂ ಹೆಣ್ಣಾಯ್ತು ಅನ್ನೋ ಮಾತುಗಳು ಬರುತ್ತೆ. ಅಪ್ಪ ಅಮ್ಮನ ಹೆಣಕ್​ ಬೆಂಕಿ ಇಡೋಕ್ಕೂ ಇವರ ಮನೆಯಲ್ಲಿ ಗಂಡ್​ ದಿಕ್ಕಿಲ್ಲ..... ಅನ್ನೋ ಮಾತುಗಳು ಬಂದವು ಎಂದು ಹೇಳುತ್ತಾರೆ. ಅಲ್ಲಿಗೆ ಹೆಣ್ಣು ಮಗುವಿನ ಜನನದ ಬಗ್ಗೆ ಸಮಾಜದಿಂದ ಬಂದ ಟೀಕೆಗಳ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿರುವಂತೆ ತೋರಿದೆ.

ಇದನ್ನೂ ಓದಿ: 'ಒಂದು ಮಳೆಬಿಲ್ಲು'.. ಸೇರಿ ಹಿಟ್​​ ಸಾಂಗ್ಸ್ ಕೊಟ್ಟ ಗಾಯಕ ಅರ್ಮಾನ್ ಮಲಿಕ್ ಮದುವೆ: ಡ್ರೀಮಿ ವೆಡ್ಡಿಂಗ್ ಫೋಟೋಗಳಿಲ್ಲಿವೆ

ದೊಡ್ಮನೆ ಸ್ಪರ್ಧಿಗಳಿಗೆ ಊಟ ತಂದ ಹನುಮಂತು ಕುಟುಂಬಸ್ಥರು: ಮತ್ತೊಂದೆಡೆ, ಹನುಮಂತು ಅವರ ಕುಟುಂಬಸ್ಥರು ಕೂಡಾ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ಸ್ಪರ್ಧಿಗಳಿಗೆ ತಮ್ಮ ಮನೆಯಿಂದ ಮಾಡಿಕೊಂಡು ಬಂದ ಊಟವನ್ನು ಬಡಿಸಿದ್ದಾರೆ. ರೊಟ್ಟಿ, ಊಟ ಸವಿದು ಮನೆಯವರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಬೇಬಿಬಂಪ್​ ಫೋಟೋಶೂಟ್​​ ಹಂಚಿಕೊಂಡ ಹರಿಪ್ರಿಯಾ ವಸಿಷ್ಠ ಸಿಂಹ

ಬಿಗ್​ ಬಾಸ್​ ಇತಿಹಾಸದಲ್ಲೇ ಮೊದಲು: ಈಗಾಗಲೇ ಬಿಗ್​ ಬಾಸ್​ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್​, ರಜತ್​ ಕಿಶನ್​​, ಉಗ್ರಂ ಮಂಜು, ಗೌತಮಿ ಜಾಧವ್​ ಕುಟುಂಬಸ್ಥರು ಬಂದು ಹೋಗಿದ್ದಾರೆ. ಇಂದಿನ ಎಪಿಸೋಡ್​ನಲ್ಲಿ ಧನರಾಜ್​ ಆಚಾರ್​, ಹನುಮಂತ ಮತ್ತು ಚೈತ್ರಾ ಕುಂದಾಪುರ ಕುಟುಂಬಸ್ಥರನ್ನು ಕಾಣಬಹುದಾಗಿದೆ. ಅದರಲ್ಲೂ ಧನರಾಜ್​ ಆಚಾರ್​ ಅವರ ದೊಡ್ಡ ಕುಟುಂಬವೇ ಬಂದಿದೆ. ಪ್ರತೀ ಸ್ಪರ್ಧಿಗಳ ಮನೆಯಿಂದ ಒಬ್ಬರೋ, ಇಬ್ಬರೂ ಅಥವಾ ನಾಲ್ಕೈದು ಮಂದಿ ಬಂದ್ರೆ ಧನರಾಜ್​ ಮನೆಯಿಂದ ಸರಿಸುಮಾರು 30 ಮಂದಿ ಬಂದಿದ್ದಾರೆ. ಒಂದೇ ಕುಟುಂಬದ ಇಷ್ಟೊಂದು ಮಂದಿ ಬಂದಿದ್ದು ಬಿಗ್​ ಬಾಸ್​ ಇತಿಹಾಸದಲ್ಲೇ ಮೊದಲು. ಒಟ್ಟಾರೆ ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.