ಕರ್ನಾಟಕ

karnataka

ETV Bharat / entertainment

ಆಂಧ್ರಪ್ರದೇಶದ ಪ್ರಸಿದ್ಧ ದೇಗುಲಕ್ಕೆ ₹12.5 ಲಕ್ಷ ದೇಣಿಗೆ ನೀಡಿದ ಜೂ.ಎನ್​ಟಿಆರ್​ - Jr NTR - JR NTR

ತೆಲುಗು ನಟ ಜೂನಿಯರ್​​ ಎನ್​ಟಿಆರ್ ಅವರು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪ್ರಸಿದ್ಧ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಾಲಯಕ್ಕೆ 12.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

JR NTR
ಜೂ.ಎನ್​ಟಿಆರ್​ (Instagram)

By ETV Bharat Karnataka Team

Published : May 16, 2024, 7:01 AM IST

ಭಾರತೀಯ ಚಿತ್ರರಂಗದ ಕೆಲವು ಹೆಸರಾಂತ ನಟರು ನಟನೆಗೆ ಮಾತ್ರ ಸೀಮಿತವಾಗಿರದೇ ಸಾಮಾಜಿಕ ಕಾರ್ಯಗಳಲ್ಲೂ ನಿರತರಾಗಿ ಗಮನ ಸೆಳೆಯುತ್ತಿರುತ್ತಾರೆ. ದಾನ, ಧರ್ಮ, ಅಭಿವೃದ್ಧಿ ಕಾರ್ಯಗಳಿಗೆ ಸಹಾಯಹಸ್ತ ಚಾಚಿರುವ ನಿದರ್ಶನಗಳಿವೆ. ಇದೀಗ ಟಾಲಿವುಡ್​ನ ಜೂನಿಯರ್ ಎನ್​ಟಿಆರ್​​ ಆಂಧ್ರದ​​ ದೇವಾಲಯವೊಂದಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.​​

ಜೂನಿಯರ್ ಎನ್​​ಟಿಆರ್ ತೆಲುಗು ನಾಡಿನ ಜನಪ್ರಿಯ ನಟರಲ್ಲೋರ್ವರು. ಅಪಾರ ಅಭಿಮಾನಿ ಬಳಗ ಇವರ ಬೆನ್ನಿಗಿದೆ. ಇವರ ನಟನೆಯ 'ಆರ್​ಆರ್​ಆರ್'​ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. 'ಮ್ಯಾನ್ ಆಫ್ ಮಾಸ್' ಎಂಬುದು ಅಭಿಮಾನಿಗಳು ಕೊಟ್ಟ ಬಿರುದು. ಪ್ರಸ್ತುತ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1'ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಮೇ 20ರಂದು ಜೂ.ಎನ್‌ಟಿಆರ್ ಹುಟ್ಟುಹಬ್ಬವಿದೆ. ಇದಕ್ಕೂ ಮುನ್ನ ದೇವಸ್ಥಾನವೊಂದಕ್ಕೆ ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪ್ರಸಿದ್ಧ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಾಲಯಕ್ಕೆ 12.5 ಲಕ್ಷ ರೂ. ಹಸ್ತಾಂತರಿಸಿದ್ದಾರೆ.

ಜೂ.ಎನ್‌ಟಿಆರ್ ಅವರ ದೇಣಿಗೆ ವಿಚಾರ ನೆಟ್ಟಿಗರ ಗಮನ ಸೆಳೆದಿದೆ. ಇದನ್ನು ಫ್ಯಾನ್ಸ್​​ ಪೇಜ್, ವಿವಿಧ​​​ ಸೋಷಿಯಲ್​ ಮೀಡಿಯಾ ಪ್ಲಾಟ್​​​ಫಾರ್ಮ್​​​ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ದೇವಸ್ಥಾನದ ಚಿತ್ರ ಶೇರ್ ಮಾಡಿರುವ ಕೆಲವು ಫ್ಯಾನ್ಸ್​ ಪೇಜ್‌ಗಳು, 'ಪೂರ್ವ ಗೋದಾವರಿಯ ಜಗ್ಗಣ್ಣಪೇಟಾದ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಎನ್​ಟಿಆರ್​ ಅಣ್ಣ 12.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ವಿಷಯ ಯಾರಿಗೂ ತಿಳಿದಿಲ್ಲ. ದೈವಂ ಮನುಷ್ಯ ರೂಪೇನ' ಎಂದು ಬರೆದು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ:ಜೂ.ಎನ್​ಟಿಆರ್​ ಜನ್ಮದಿನಕ್ಕೆ 'ದೇವರ' ಫಸ್ಟ್ ಸಾಂಗ್​ ರಿಲೀಸ್​​ - Jr NTR Devara

ಆರ್​ಆರ್​​ಆರ್​ ನಟ ಈ ಹಿಂದೆ, ಪ್ರವಾಹಪೀಡಿತರಿಗೆ ನೆರವಿಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ಮತ್ತು ದೈನಂದಿನ ಕೂಲಿ ಕಾರ್ಮಿಕರನ್ನು ಬೆಂಬಲಿಸಲು ಕೋವಿಡ್​​ ಸಂಬಂಧಿತ ಚಾರಿಟಿಗೆ 25 ಲಕ್ಷ ರೂಪಾಯಿ ಸೇರಿದಂತೆ ಹಲವು ಬಾರಿ ದೇಣಿಗೆ ನೀಡಿದ್ದರು.

ಇದನ್ನೂ ಓದಿ:ಈ ರಾಜ್ಯದಲ್ಲಿ 400ಕ್ಕೂ ಹೆಚ್ಚು ಸಿಂಗಲ್​ ಸ್ಕ್ರೀನ್​​​ ಥಿಯೇಟರ್​ ತಾತ್ಕಾಲಿಕ ಸ್ಥಗಿತ - Single Screen Theatres

ಇನ್ನು ಇವರ ಮುಂದಿನ ಸಿನಿಮಾ 'ದೇವರ: ಭಾಗ 1'. ಕೊರಟಾಲ ಶಿವ ನಿರ್ದೇಶನದ ಆ್ಯಕ್ಷನ್ ಡ್ರಾಮಾದಲ್ಲಿ ಜಾಹ್ನವಿ ಕಪೂರ್​, ಸೈಫ್​ ಅಲಿ ಖಾನ್​​ ಅಭಿನಯಿಸಿದ್ದಾರೆ. ಅಕ್ಟೋಬರ್​​ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ನಟನ ಜನ್ಮದಿನಕ್ಕೆ ಚಿತ್ರದಿಂದ ಮೊದಲ ಹಾಡು ಅನಾವರಣಗೊಳ್ಳುವ ಸಾಧ್ಯತೆ ಇದೆ. ಹೃತಿಕ್ ರೋಷನ್ ಅವರೊಂದಿಗೆ 'ವಾರ್ 2'ನಲ್ಲಿಯೂ ಜೂ.ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details