ETV Bharat / state

ಕನ್ನಡ ಸಾಹಿತ್ಯ‌ ಸಮ್ಮೇಳನದಲ್ಲಿ ಗಮನಸೆಳೆಯುತ್ತಿರುವ ಬಾ ಗುರು ಬುಕ್‌ ತಗೋ ಮಳಿಗೆ : ಏನಿದರ ವಿಶೇಷ? - BA GURU BOOK TAGO

ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾ ಗುರು ಬುಕ್​ ತಗೋ ಎಂಬ ಮಳಿಗೆ ಸಾಹಿತ್ಯಾಸಕ್ತರನ್ನ ಸೆಳೆಯುತ್ತಿದೆ.

Bookstore
ಪುಸ್ತಕ ಮಳಿಗೆ (ETV Bharat)
author img

By ETV Bharat Karnataka Team

Published : 4 hours ago

Updated : 4 hours ago

ಮಂಡ್ಯ : ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ‌ ಸಮ್ಮೇಳನದಲ್ಲಿನ ಪುಸ್ತಕ ಮಾರಾಟ ಮಳಿಗೆಗಳು ಸಾಹಿತ್ಯಾಸ್ತಕರನ್ನ ಹಾಗೂ ಓದುಗರನ್ನ ಸೆಳೆಯುತ್ತಿವೆ. ಈ ಪುಸ್ತಕ ಮಳಿಗೆಯಲ್ಲಿ "ಬಾ ಗುರು ಬುಕ್‌ ತಗೋ " ಸ್ಟಾಲ್ ಗಮನಸೆಳೆಯುತ್ತಿದೆ. ಈ ಹೆಸರಿಗೆ ಇರುವ ವಿಶೇಷತೆಯೇನು? ಎಂಬ ಕುರಿತು ಇಲ್ಲಿದೆ ವರದಿ.

ಮಂಡ್ಯದ ಅಕ್ಷರ ಜಾತ್ರೆಯ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಮಳಿಗೆಗಳಿವೆ. ಅದರಲ್ಲಿ ಗಮನ ಸೆಳೆಯುತ್ತಿರುವುದು " ಬಾ ಗುರು ಬುಕ್‌ ತಗೋ " ಮಳಿಗೆ. ಈ ಮಳಿಗೆಯ ಮಾಲೀಕರು ತಾವು ಬರೆದ ಕಥೆ, ಕವನಗಳನ್ನು ತಾವೇ ನೇರವಾಗಿ ಓದುಗರಿಗೆ ತಲುಪಿಸುತ್ತಿದ್ದಾರೆ.

ಬರಹಗಾರ ವಿಕ್ರಮ್ ಮಾತನಾಡಿದರು (ETV Bharat)

ಜನರು ಜಾಲತಾಣಗಳ ಮೂಲಕ "ಬಾ ಗುರು ಬುಕ್​ ತಗೋ" ಸ್ಟಾಲ್‌ ಬಗ್ಗೆ ತಿಳಿದು ಪುಸ್ತಕ ಖರೀದಿಗೆ ಬರುತ್ತಿದ್ದಾರೆ. ಈ ಪುಸ್ತಕ ಮಳಿಗೆಯ ಬಗ್ಗೆ ಬರಹಗಾರ ವಿಕ್ರಮ್ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

'ನಾನು ಕವಿತೆ ಮತ್ತು ಕಥೆಗಳನ್ನು ಬರೆಯುತ್ತೇನೆ. ಈ ಸಮ್ಮೇಳನದಲ್ಲಿ ಬಂದು ಪಾಲ್ಗೊಳ್ಳುತ್ತಿರುವುದು ತುಂಬಾ ಖುಷಿಯ ವಿಷಯ. ನಾವು "ಬಾ ಗುರು ಬುಕ್‌ ತಗೋ" ಎಂಬ ಅಭಿಯಾನ ಮಾಡುತ್ತಿದ್ದೇವೆ. ಇದರ ಮೂಲಕ ಬರಹಗಾರರು ನೇರವಾಗಿ ಓದುಗರನ್ನು ತಲುಪುವ ಪ್ರಯತ್ನವಾಗಿದೆ' ಎಂದರು. ‌

Books
ಪುಸ್ತಕ ಮಳಿಗೆಯಲ್ಲಿ ಕಂಡುಬಂದ ಪುಸ್ತಕಗಳು (ETV Bharat)

ಈ ಬಾರಿ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ಹಾಕಿ ಪುಸ್ತಕ ಮಾರಾಟ ಮಾಡುತ್ತಿದ್ದೇವೆ‌. ಜನರು‌ ನಮ್ಮ‌ ಮಳಿಗೆಗೆ ಬಂದು, ಸಂವಾದ ನಡೆಸಿ ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ‌ ಮಳಿಗೆಯಲ್ಲಿ ಕವಿತೆಯ ಸಂಕಲನ, ಕಾದಂಬರಿ ಸಂಕಲನ, ಕಥೆಗಳ ಸಂಕಲನ, ಕಿರು ಕಾದಂಬರಿ, ನಾಟಕಗಳ ಪುಸ್ತಕಗಳು ಈ ರೀತಿ ಹಲವು ಪ್ರಕಾರಗಳ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

Books
ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳ ಮಾರಾಟ (ETV Bharat)

ಒಂದೇ ಪುಸ್ತಕದಲ್ಲಿ‌ ಕಥೆ ಮತ್ತು ಕವಿತೆ ಎರಡೂ ಇದೆ‌: ನಾನು ತ್ರಿಲೋಕ ಬರಹ ಪ್ರಕಾಶ ಸಂಸ್ಥೆ ಎನ್ನುವ ಸಂಸ್ಥೆ ನಡೆಸುತ್ತಿದ್ದೇನೆ. ಇಲ್ಲಿ 'ಕಾಣುವಂತೆ ಕಾಣದಂತೆ‌' ಎನ್ನುವ ಪುಸ್ತಕ ಬರೆದಿದ್ದೇನೆ. ಇದು ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಹೊಸ ಪ್ರಯತ್ನ. ಏಕೆಂದರೆ ‌ಒಂದೇ ಪುಸ್ತಕದಲ್ಲಿ‌ ಕಥೆ ಮತ್ತು ಕವಿತೆ ಎರಡೂ ಇದೆ‌.‌ ಇದರ ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರ ‌ಕುರಿತಾಗಿ ಬರೆಯಲಾಗಿದೆ ಎಂದು ತಿಳಿಸಿದರು.

ನಮ್ಮ‌ ಸಂಸ್ಥೆ ಪುಸ್ತಕಗಳು ಓದುಗರನ್ನು ನೇರವಾಗಿ ಮುಟ್ಟುವಂತೆ ಮಾಡುತ್ತವೆ. ನಾವು ಬರೆದ ಪುಸ್ತಕವನ್ನು ಬೀದಿಯಲ್ಲಿ ನಿಂತು ನಾವೇ ಮಾರಾಟ ಮಾಡುತ್ತೇವೆ. ಮಾರಾಟ‌ ಮಾಡುವ ಸಮಯದಲ್ಲಿ ಬೀದಿಯಲ್ಲಿ ‌ನಿಂತಾಗ ಓದುಗರು ತಮ್ಮ ಮನಸ್ಸಿಗೆ ಬಂದ ಪುಸ್ತಕಗಳ ಬಗೆಗಿನ ಪ್ರಶ್ನೆಗಳನ್ನು ನೇರವಾಗಿ ಕೇಳುತ್ತಾರೆ. ಅದು ನಮಗೆ ಹೆಚ್ಚು ಜ್ಞಾನ ನೀಡುತ್ತದೆ ಎಂದರು.

Books
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡು ಬಂದ ಪುಸ್ತಕಗಳು (ETV Bharat)

ಒಂದು ಕಡೆ ಪುಸ್ತಕ ಮಳಿಗೆಗಳಲ್ಲಿ ನಮ್ಮ ಪುಸ್ತಕ ಇಟ್ಟರೆ, ಅವುಗಳನ್ನ ಆ ಮಳಿಗೆಗೆ ಬರುವವರು ಮಾತ್ರ ತೆಗೆದುಕೊಳ್ಳುತ್ತಾರೆ. ಆದರೆ, ನಾವು ಬೀದಿಯಲ್ಲಿ ಮಾರಾಟಕ್ಕೆ ನಿಂತಾಗ ಹೊಸ ಓದುಗರ ಬೇಡಿಕೆ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಅನೇಕರು ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ನಮ್ಮ ಮಳಿಗೆಯ ಬಗ್ಗೆ ತಿಳಿದು ಇಲ್ಲಿ ಬಂದು ಪುಸ್ತಕಗಳನ್ನು ಕೇಳುತ್ತಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇರುವುದು ಕೂಡಾ ಮುಖ್ಯ ಎಂದು ಅನಿಸುತ್ತದೆ ಎಂದರು.

ಹೆಚ್ಚಿನ ಪುಸ್ತಕಗಳು ಆನ್ಲೈನ್ ಮೂಲಕವೇ ಮಾರಾಟ: ಈಗ ನನ್ನ ಪುಸ್ತಕಗಳನ್ನು ಬೀದಿಯಲ್ಲಿ ಮಾರಾಟ ಮಾಡುವುದು ಒಂದು ಭಾಗ. ನಾನು‌ ಕೂಡ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದೇನೆ. ನನ್ನ ಕವಿತೆಗಳನ್ನು ಅದರಲ್ಲಿ ಹಾಕುತ್ತೇನೆ. ಅವಾಗ ಜನರು ಅದನ್ನು ನೋಡಿ ಪುಸ್ತಕಗಳನ್ನು ಕೊಂಡುಕೊಳ್ಳುತ್ತಾರೆ. ನನ್ನ ಹೆಚ್ಚಿನ ಪುಸ್ತಕಗಳು ಆನ್ಲೈನ್ ಮೂಲಕವೇ ಮಾರಾಟವಾಗಿವೆ. ಹೀಗಾಗಿ ಈಗಿನ ಸನ್ನಿವೇಶಕ್ಕೆ ಡಿಜಿಟಲ್ ವಿಭಾಗ ಕೂಡ ಮುಖ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭೂರಿ ಭೋಜನದ ವ್ಯವಸ್ಥೆ: ಇಲ್ಲಿದೆ ಮೆನು - SAHITYA SAMMELANA

Last Updated : 4 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.