ETV Bharat / entertainment

'ಕಟ್, ಪೇಸ್ಟ್, ಕ್ರಾಪ್ ಆಗಬಾರದು': ಯುಐ ವೀಕ್ಷಿಸಿದವರು ಹೀಗಂದಿದ್ದೇಕೆ? - UI RELEASE

ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳಲ್ಲಿ 'ಯುಐ' ಹೌಸ್‌ಫುಲ್​ ಪ್ರದರ್ಶನ ಕಾಣುತ್ತಿದೆ.

UI Release
'ಯುಐ' ಬಿಡುಗಡೆ (Photo: ETV Bharat)
author img

By ETV Bharat Entertainment Team

Published : Dec 20, 2024, 6:04 PM IST

Updated : Dec 20, 2024, 6:45 PM IST

ಬೆಂಗಳೂರು: ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿರುವ 'ಯುಐ' ಚಿತ್ರ ಇಂದು ತೆರೆಕಂಡಿದೆ. ನಗರದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್​ ಪ್ರದರ್ಶನ ಕಾಣುತ್ತಿದೆ. ರಿಯಲ್ ಸ್ಟಾರ್ ಅಭಿಮಾನಿಗಳು ನಟನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂಭ್ರಮಿಸಿದ್ದಾರೆ.

ಚಲನಚಿತ್ರ ವೀಕ್ಷಿಸಿ ಈಟಿವಿ ಭಾರತದ ಜೊತೆ ಮಾತನಾಡಿದ ರಿಯಲ್ ಸ್ಟಾರ್ ಅಭಿಮಾನಿಯಾದ ನಟ-ನಿರೂಪಕ ಸುಶಾನ್ ಶೆಟ್ಟಿ, "ವಿಚಾರವನ್ನು ವಿಚಾರವನ್ನಾಗಿ ತೆಗೆದುಕೊಳ್ಳಬೇಕು. ಕಟ್, ಪೇಸ್ಟ್, ಕ್ರಾಪ್ ಆಗಬಾರದು ಅನ್ನೋದು ಯುಐ ಚಿತ್ರದ ಸಂದೇಶ. ಚಿತ್ರ ನೋಡುವ ಪ್ರತಿಯೊಬ್ಬರೂ ಹೆಮ್ಮೆಯಿಂದ ಹೊರಬರುತ್ತಿದ್ದಾರೆ. ಚಿತ್ರ ಮತ್ತು ಚಿತ್ರನಟನ ಉದ್ದೇಶ ಮುಖ್ಯ ಎನ್ನುವುದನ್ನು ಚಿತ್ರ ಸಾರಿ ಹೇಳುತ್ತದೆ" ಎಂದರು.

'ಯುಐ' ಬಿಡುಗಡೆ (Photo: ETV Bharat)

"ಇದು ಯೂನಿವರ್ಸಲ್ ಇಂಟೆಲಿಜೆನ್ಸ್ ಸಿನಿಮಾ. ಕೇವಲ ಕನ್ನಡದ, ದೇಶದ ಸಿನಿಮಾ ಆಗಿರದೇ ಇಡೀ ಜಗತ್ತಿಗೆ ಮತ್ತು ಅದರ ಹೊರತಾಗಿ ಜಗತ್ತಿದ್ದರೂ ಅದಕ್ಕೂ ಅನ್ವಯಿಸುವ ಸಿನಿಮಾ. ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಕಲಿಯುಗದಲ್ಲಿ ಮಾಡಿದ ಕರ್ಮವನ್ನು ಇಲ್ಲಿಯೇ ಅನುಭವಿಸಿ ಹೋಗಬೇಕು ಎನ್ನುವ ಸಂದೇಶವನ್ನು ಸಿನಿಮಾ ನೀಡುತ್ತಿದೆ. ಕಲ್ಕಿ ಮತ್ತು ಸತ್ಯನ ಎರಡೂ ಪಾತ್ರಗಳಲ್ಲಿ ಉಪೇಂದ್ರ ತುಂಬಾ ಚೆನ್ನಾಗಿ ನಟಿಸಿದ್ದಾರೆ" ಎಂದು ತಿಳಿಸಿದರು.

"ಯುಐ ನೋಡುತ್ತಾ ಪ್ರಸ್ತುತವಾದ ಡೈಲಾಗ್ ತುಂಬಾ ಮನಸ್ಸಿಗೆ ನಾಟುತ್ತದೆ. ಹಣ್ಣು ಕಚ್ಚಿದರೆ ಹೆಣ್ಣು ಬಿಚ್ಚಿದರೆ ಬೆಲೆ ಇಲ್ಲ ಎನ್ನುವುದು ಆ ಡೈಲಾಗ್ ಆಗಿದೆ. ಕೆಲವು ಹೆಣ್ಣು ಮಕ್ಕಳಿಗೆ ಈಗಿನ ಸೋಶಿಯಲ್ ಮೀಡಿಯಾದಲ್ಲಿ ಬಟ್ಟೆ ಬಿಚ್ಚಿದರೆ ಮಾತ್ರ ನಾವು ತುಂಬಾ ಹೆಚ್ಚು ಪ್ರಚಾರ ಪಡೆಯುತ್ತೇವೆ ಎನ್ನುವ ಮನೋಭಾವ ಬಂದಿದೆ. ಆದರೆ ಈ ಚಿತ್ರದ ಸಂದೇಶದಂತೆ ನಮ್ಮ ಕರುನಾಡ ದೇಶದ ಹೆಣ್ಣು ಮಕ್ಕಳು ನಡೆದರೆ ಉತ್ತಮ ಭವಿಷ್ಯ ಅವರದ್ದಾಗುತ್ತದೆ" ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Watch: ಅಮೆರಿಕ ತಲುಪಿದ ಶಿವರಾಜ್​ಕುಮಾರ್​​, ಮಂಗಳವಾರ ಶಸ್ತ್ರಚಿಕಿತ್ಸೆ

ಬೆಳ್ಳಂದೂರಿನಿಂದ ಜಗದೀಶ್ ಮಾತನಾಡಿ, "ಕೋರಮಂಗಲ ಮತ್ತು ಬೆಳ್ಳಂದೂರಿನ ಉಪೇಂದ್ರ ಅಭಿಮಾನಿಗಳು ಹೋಮ ಮಾಡಿದ್ದೇವೆ. ಬಾಳೆಹಣ್ಣು ಮತ್ತು ಸಿಹಿತಿಂಡಿಗಳನ್ನು ಹಂಚಿದ್ದೇವೆ. ಎಲ್ಲ ಜನರೂ ಕೂಡ ಸಂದೇಶ ಸಾರುವ ಚಿತ್ರ ಇದಾಗಿದೆ ಎಂದು ಹೇಳುತ್ತಿದ್ದಾರೆ. ಶಿವಣ್ಣ ಅವರ ಅರೋಗ್ಯ ಕೂಡ ಬೇಗ ಸುಧಾರಿಸಬೇಕು ಎಂದು ಈದಿನ ಬೇಡಿಕೊಂಡಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್​

ಮತ್ತೊಬ್ಬ ಅಭಿಮಾನಿ ವಿನಯ್ ಮಾತನಾಡಿ, "ಇವತ್ತು ಹಬ್ಬದ ವಾತಾವರಣ ನಿರ್ಮಾಣವಾಗಿದೆ. 9 ವರ್ಷದ ನಂತರ ಉಪೇಂದ್ರ ನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಚಿತ್ರವನ್ನು ಸಂಪೂರ್ಣ ನೋಡಲು ಸಾಧ್ಯವಾಗಿಲ್ಲ. ಮತ್ತೊಂದು ಬಾರಿ ಚಿತ್ರವನ್ನು ನೋಡಿ ಸಂಭ್ರಮಿಸಲು ಕಾತುರದಿಂದ ಕಾಯುತ್ತಿದ್ದೇನೆ" ಎಂದು ನುಡಿದರು.

Last Updated : Dec 20, 2024, 6:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.