ಕರ್ನಾಟಕ

karnataka

ETV Bharat / entertainment

ನಟಿ ಅಮೃತಾ ಪಾಂಡೆ ಆತ್ಮಹತ್ಯೆ ಪ್ರಕರಣ: ಮುಂದುವರಿದ ತನಿಖೆ - Amrita Pandey - AMRITA PANDEY

ಭೋಜ್‌ಪುರಿ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಜೋಗ್​​ಸರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Actress Amrita Pandey
ನಟಿ ಅಮೃತಾ ಪಾಂಡೆ

By ETV Bharat Karnataka Team

Published : Apr 30, 2024, 2:47 PM IST

ಭೋಜ್‌ಪುರಿ ನಟಿ ಅಮೃತಾ ಪಾಂಡೆ ಏಪ್ರಿಲ್ 27ರಂದು ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಿ ಪ್ರಕಾರ, ತನಿಖಾಧಿಕಾರಿಗಳು ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ಊಹಿಸಿದ್ದಾರೆ. ಸಾವಿಗೂ ಮುನ್ನ ಅಮೃತಾ ವಾಟ್ಸಾಪ್‌ನಲ್ಲಿ ರಹಸ್ಯ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ನಟಿಯ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ.

ನಟಿ ಅಮೃತಾ ಪಾಂಡೆ ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಯಲ್ಲಿ, ಅಮೃತಾ ಭೋಜ್‌ಪುರಿ ಮತ್ತು ಹಿಂದಿ ಭಾಷೆಗಳ ಹಲವು ಸಿನಿಮಾಗಳು, ಶೋಗಳು, ವೆಬ್ ಸರಣಿಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಗ್​​ಸರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ಸೈನ್ಸ್ ಲ್ಯಾಬೋರೆಟರಿ (ಎಫ್‌ಎಸ್‌ಎಲ್) ಅಧಿಕಾರಿಗಳು ನಟಿಯ ಮೃತದೇಹ ಪತ್ತೆಯಾದ ಕೋಣೆಯನ್ನು ಪರಿಶೀಲಿಸಿದ್ದಾರೆ. ತನಿಖೆ ಸಲುವಾಗಿ ಸ್ಥಳದಿಂದ ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗದಿದ್ದರೂ, ಆಕೆ ಸಾವಿಗೂ ಮುನ್ನ ಶೇರ್ ಮಾಡಿರೋ ವಾಟ್ಸಾಪ್ ಸ್ಟೇಟಸ್ ಅನ್ನು ತನಿಖೆಯಲ್ಲಿ ಮುಖ್ಯ ಅಂಶವನ್ನಾಗಿಟ್ಟುಕೊಂಡಿದ್ದಾರೆ. ಅದರಲ್ಲಿ, "ಅವನ/ಅವಳ ಜೀವನ ಎರಡು ದೋಣಿಗಳಲ್ಲಿ ಸಾಗುತ್ತಿತ್ತು. ನಾನು ನನ್ನದನ್ನು ಮುಳುಗಿಸುವ ಮೂಲಕ ಅವರ ಪ್ರಯಾಣವನ್ನು ಸುಲಭಗೊಳಿಸಿದೆ". ಸೂಕ್ತ ಕೆಲಸ ಸಿಗದೆ ಅವರು ಖಿನ್ನತೆಗೆ ಒಳಗಾಗಿದ್ದರು, ಆತಂಕದಲ್ಲಿದ್ದರು ಎಂದು ನಟಿಯ ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ:PHOTOS: ಅಮೆರಿಕದಲ್ಲಿ ಸುಂಟರಗಾಳಿ; ನಾಲ್ವರು ಸಾವು, ಮನೆಗಳಿಗೆ ಹಾನಿ, ಧರೆಗುರುಳಿದ ಮರಗಳು - America Tornado 2024

ಅಮೃತಾ ತಮ್ಮ ಪತಿ, ಅನಿಮೇಷನ್ ಇಂಜಿನಿಯರ್ ಚಂದ್ರಮಣಿ ಜಂಗಡ್ ಅವರೊಂದಿಗೆ ಮುಂಬೈನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಭಾಗಲ್ಪುರದಲ್ಲಿ ನಡೆದ ತಮ್ಮ ಸಹೋದರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮದುವೆ ನಂತರ ಪತಿ ಮುಂಬೈಗೆ ಹಿಂದಿರುಗಿದ್ದು, ಅಮೃತಾ ಇಲ್ಲೇ ಉಳಿದುಕೊಂಡಿದ್ದರು. ಅಮೃತಾ ಅವರ ಕುಟುಂಬ ಸದಸ್ಯರು ಮಾತನಾಡಿ, ಏಪ್ರಿಲ್ 26ರಂದು ಸಹೋದರಿ ವೀಣಾ ಅವರ ಮದುವೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಆದ್ರೆ ಹೀಗೇಕಾಯಿತು? ಅದಕ್ಕೆ ಕಾರಣ ಏನಿರಬಹುದು? ಎಂಬುದನ್ನು ಊಹಿಸೋದೇ ಕಷ್ಟ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿ 1 ಗಂಟೆಗೆ 100 ಕೆ.ಜಿ ವೇಟ್​​ ಲಿಫ್ಟಿಂಗ್​ ಮಾಡಿದ ರಶ್ಮಿಕಾ: 'ಕುಬೇರ' ಶೂಟಿಂಗ್​ನಲ್ಲಿ ಬ್ಯುಸಿ - Rashmika Mandanna

ಇತ್ತೀಚೆಗೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಸಹೋದರಿಗೆ ಶುಭಹಾರೈಸಿದ್ದರು. "ನಿಮ್ಮಿಬ್ಬರಿಗೂ ಅಭಿನಂದನೆಗಳು. ಸಂತೋಷಕರ ದಾಂಪತ್ಯ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಐದು ದಿನಗಳ ಹಿಂದೆ ಮದುವೆಗೆ ರೆಡಿಯಾಗಿರುವ ತಮ್ಮ ಫೋಟೋವನ್ನೂ ಶೇರ್ ಮಾಡಿದ್ದರು. ನಟಿಯ ಅಭಿಮಾನಿಗಳು ಅವರ ಕೊನೆ ಪೋಸ್ಟ್‌ಗೆ ಕಾಮೆಂಟ್‌ ಮೂಲಕ ಸಾವಿನ ಬಗ್ಗೆ ತಮ್ಮ ಆಘಾತ, ಸಂತಾಪ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details