ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ: ಆರ್​ಐಎಲ್​ ಬಂಡವಾಳ 74 ಸಾವಿರ ಕೋಟಿ ಕುಸಿತ, ಲಾಭದಲ್ಲಿ ಎಸ್​ಬಿಐ, ಟಿಸಿಎಸ್​ ಇನ್ಫೊಸಿಸ್ - INDIAN STOCK MARKET

ಭಾರತದ ಷೇರು ಮಾರುಕಟ್ಟೆಯಲ್ಲಿ ಅಗ್ರ 10 ಅತ್ಯಂತ ಮೌಲ್ಯಯುತ ಕಂಪನಿಗಳ ಮಾರುಕಟ್ಟೆ ಬಂಡವಾಳ ಇಳಿಕೆಯಾಗಿದೆ.

ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್ (IANS)

By ETV Bharat Karnataka Team

Published : Nov 10, 2024, 5:47 PM IST

ನವದೆಹಲಿ:ಕಳೆದ ಒಂದು ವಾರದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹುತೇಕ ಇಳಿಕೆಯ ಪ್ರವೃತ್ತಿ ಕಂಡು ಬಂದಿದೆ. ಇದರ ಪರಿಣಾಮದಿಂದ ಕಳೆದ ವಾರದಲ್ಲಿ, ಅಗ್ರ 10 ಅತ್ಯಂತ ಮೌಲ್ಯಯುತ ಕಂಪನಿಗಳ ಪೈಕಿ ಆರು ಕಂಪನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳ 1.55 ಲಕ್ಷ ರೂ.ಗಳಷ್ಟು ಕುಸಿದಿದೆ.

ರಿಲಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್), ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್ ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಇವು ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ನಷ್ಟ ಅನುಭವಿಸಿದ ಟಾಪ್ 10 ಕಂಪನಿಗಳ ಪಟ್ಟಿಯಲ್ಲಿವೆ. ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಎಚ್ ಡಿಎಫ್​ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇವುಗಳ ಮಾರುಕಟ್ಟೆ ಬಂಡವಾಳ ಹೆಚ್ಚಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಬಂಡವಾಳೀಕರಣವು 74,563.37 ಕೋಟಿ ರೂ.ಗಳಷ್ಟು ಕಡಿಮೆಯಾಗಿ 17,37,556.68 ಕೋಟಿ ರೂ.ಗೆ ಇಳಿಕೆಯಾಗಿದೆ. ಭಾರ್ತಿ ಏರ್ ಟೆಲ್ ನ ಮಾರುಕಟ್ಟೆ ಬಂಡವಾಳ 26,274.75 ಕೋಟಿ ರೂ.ಗಳಷ್ಟು ಕಡಿಮೆಯಾಗಿ 8,94,024.60 ಕೋಟಿ ರೂ.ಗೆ ಇಳಿಕೆಯಾಗಿದೆ. ಐಸಿಐಸಿಐ ಬ್ಯಾಂಕಿನ ಮಾರುಕಟ್ಟೆ ಬಂಡವಾಳವು 22,254.79 ಕೋಟಿ ರೂ.ಗಳಷ್ಟು ಕಡಿಮೆಯಾಗಿ 8,88,432.06 ಕೋಟಿ ರೂ.ಗೆ ಮತ್ತು ಐಟಿಸಿಯ ಮಾರುಕಟ್ಟೆ ಬಂಡವಾಳವು 15,449.47 ಕೋಟಿ ರೂ.ಗಳಷ್ಟು ಇಳಿಕೆಯಾಗಿ 5,98,213.49 ಕೋಟಿ ರೂ.ಗೆ ಇಳಿದಿದೆ.

ಎಲ್ಐಸಿಯ ಮಾರುಕಟ್ಟೆ ಬಂಡವಾಳ 9,930.25 ಕೋಟಿ ರೂ.ಗಳಷ್ಟು ಕಡಿಮೆಯಾಗಿ 5,78,579.16 ಕೋಟಿ ರೂ.ಗೆ ಇಳಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ ನ ಮಾರುಕಟ್ಟೆ ಬಂಡವಾಳವು 7,248.49 ಕೋಟಿ ರೂ.ಗಳಷ್ಟು ಕಡಿಮೆಯಾಗಿ 5,89,160.01 ಕೋಟಿ ರೂ.ಗೆ ಇಳಿದಿದೆ.

ಟಿಸಿಎಸ್ ನ ಮಾರುಕಟ್ಟೆ ಬಂಡವಾಳವು 57,744.68 ಕೋಟಿ ರೂ.ಳಷ್ಟು ಹೆಚ್ಚಾಗಿ 14,99,697.28 ಕೋಟಿ ರೂ.ಗೆ ಏರಿದೆ. ಇನ್ಫೋಸಿಸ್ ನ ಮಾರುಕಟ್ಟೆ ಬಂಡವಾಳ 28,838.95 ಕೋಟಿ ರೂ.ಗಳಷ್ಟು ಹೆಚ್ಚಾಗಿ 7,60,281.13 ಕೋಟಿ ರೂ.ಗೆ ಏರಿದೆ ಮತ್ತು ಎಸ್​ಬಿಐನ ಮಾರುಕಟ್ಟೆ ಬಂಡವಾಳ 19,812.65 ಕೋಟಿ ರೂ.ಗಳಷ್ಟು ಹೆಚ್ಚಾಗಿ 7,52,568.58 ಕೋಟಿ ರೂ.ಗೆ ಏರಿದೆ. ಎಚ್ ಡಿಎಫ್​ಸಿ ಬ್ಯಾಂಕಿನ ಮಾರುಕಟ್ಟೆ ಬಂಡವಾಳವು 14,678.09 ಕೋಟಿ ರೂ.ಗಳಷ್ಟು ಹೆಚ್ಚಾಗಿ 13,40,754.74 ಕೋಟಿ ರೂ.ಗೆ ಏರಿದೆ.

ಎಫ್​ಐಐಗಳಿಂದ ನಿರಂತರ ಷೇರು ಮಾರಾಟವು ಭಾರತೀಯ ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಕ್ಟೋಬರ್ ನಲ್ಲಿ 1,13,858 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದ ಎಫ್ಐಐ ಹೂಡಿಕೆದಾರರು ನವೆಂಬರ್ ನಲ್ಲಿ ಇಲ್ಲಿಯವರೆಗೆ ನಗದು ಮಾರುಕಟ್ಟೆಯಲ್ಲಿ 19,849 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ : ಅಮೆರಿಕದಲ್ಲಿ ಹಣದುಬ್ಬರ ಇಳಿಕೆ: 25 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತಗೊಳಿಸಿದ ಫೆಡ್ ರಿಸರ್ವ್

ABOUT THE AUTHOR

...view details