ETV Bharat / entertainment

ಡಿಜಿಟಲ್‌ ಮನರಂಜನಾ ಕ್ಷೇತ್ರಕ್ಕೆ ಹೊಸ OTT 'Glopixs': ಏಕಕಾಲಕ್ಕೆ 3 ರಾಜ್ಯಗಳಲ್ಲಿ ಗಣ್ಯರಿಂದ ಲೋಗೋ ಅನಾವರಣ - GLOPIXS

ಡಿಜಿಟಲ್‌ ಒಟಿಟಿ ಲೋಕಕ್ಕೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ನವ ಒಟಿಟಿ ಪ್ಲಾಟ್​​ಫಾರ್ಮ್​​​​ Glopixsನ ಲೋಗೋ ಇತ್ತೀಚೆಗೆ ಅನಾವರಣಗೊಂಡಿದೆ.

New OTT Platform 'Glopixs'
ಡಿಜಿಟಲ್‌ ಮನರಂಜನಾ ಕ್ಷೇತ್ರಕ್ಕೆ ಹೊಸ OTT 'Glopixs' (Photo: ETV Bharat)
author img

By ETV Bharat Entertainment Team

Published : Jan 3, 2025, 5:11 PM IST

ಮನರಂಜನಾ ಕ್ಷೇತ್ರದ ಡಿಜಿಟಲ್‌ ಒಟಿಟಿ ಲೋಕಕ್ಕೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ಅದುವೇ Global Pix Incನ ಗ್ಲೋಪಿಕ್ಸ್‌ (Glopixs). ಈ ನವ ಒಟಿಟಿ ಪ್ಲಾಟ್​​ಫಾರ್ಮ್​​ನ ಲೋಗೋ ಇತ್ತೀಚೆಗೆ ಅನಾವರಣಗೊಂಡಿದೆ.

ಕರ್ನಾಟಕ, ಕೇರಳ ಹಾಗೂ ಹೈದರಾಬಾದ್​​ನಲ್ಲಿ ಏಕಕಾಲಕ್ಕೆ ಲೋಗೋ ಬಿಡುಗಡೆಯಾಗಿರುವುದು ವಿಶೇಷ. ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಹಿರಿಯ ಛಾಯಾಗ್ರಾಹಕ, ಸೆನ್ಸಾರ್ ಬೋರ್ಡ್ ಸದಸ್ಯರಾದ ಶ್ರೀವತ್ಸ ಶಾಂಡಿಲ್ಯ ಲೋಗೋ ಅನಾವರಣಗೊಳಿಸಿ ನೂತನ ಓಟಿಟಿಗೆ ಶುಭ ಕೋರಿದರು. ಕನ್ನಡ ವಿಭಾದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್ ಹಾಗೂ ಫೈನಾನ್ಸ್ ಚೀಫ್ ಅಡ್ವೈಸರ್ ಮಂಜುನಾಥ್ ಪಟವರ್ಧನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

New OTT Platform 'Glopixs'
ಡಿಜಿಟಲ್‌ ಮನರಂಜನಾ ಕ್ಷೇತ್ರಕ್ಕೆ ಹೊಸ OTT 'Glopixs' (Photo: ETV Bharat)

ಮೇ ತಿಂಗಳಲ್ಲಿ ಅಧಿಕೃತವಾಗಿ ಲಾಂಚ್‌: ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವಿಭಾಗದ ಕ್ರಿಯೇಟಿವ್ ಹೆಡ್ ಪ್ರತಿಭಾ ಪಟವರ್ಧನ್, ಫೌಂಡರ್ ವಿನ್ಸಿ ಹಾಗೂ ಕೋ ಫೌಂಡರ್ ಅನಿತಾ ಅವರ ಮಾರ್ಗದರ್ಶನದಲ್ಲಿ ಹೊಸದೊಂದು ಪಯಣ ಇಂದಿನಿಂದ ಆರಂಭವಾಗಿದೆ. ಸದ್ಯ ಲೋಗೋ ಬಿಡುಗಡೆ ಆಗಿದ್ದು, ಇದೇ ವರ್ಷದ ಮೇ ತಿಂಗಳಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. Glopixs ಒಟಿಟಿಯಲ್ಲಿ 360-ಡಿಗ್ರಿ ಮನರಂಜನೆ ನೀಡಲು ಉದ್ದೇಶಿಸಲಾಗಿದೆ. ಸಿನಿಮಾ, ವೆಬ್‌ಸಿರೀಸ್‌ಗಳು, ಸುದ್ದಿಗಳು, ರಿಯಾಲಿಟಿ ಶೋಗಳು ಹೀಗೆ ಇನ್ನೂ ಹಲವು ಆಯಾಮಗಳಲ್ಲಿ ನೋಡುಗರಿಗೆ ಮನರಂಜನೆಯನ್ನು ನೀಡಲಿದೆ.

ಇದನ್ನೂ ಓದಿ: ಟಾಕ್ಸಿಕ್​​​, ಕಾಂತಾರ 2, ಸಂಜು ವೆಡ್ಸ್ ಗೀತಾ 2..​​: 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಯೂಸರ್​​​ಫ್ರೆಂಡ್ಲಿ ವೇದಿಕೆ: ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಭಾರತದ ಬಹುಮುಖ್ಯ ಒಟಿಟಿ ವೇದಿಕೆಯಾಗಲು ಗ್ಲೋಪಿಕ್ಸ್ ಸಜ್ಜಾಗಿದೆ. ವೈವಿಧ್ಯಮಯ ಕಂಟೆಂಟ್‌ಗಳನ್ನೂ ಇದು ನೀಡಲಿದೆ. ಪ್ರಾದೇಶಿಕತೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಭೋಜ್‌ಪುರಿ, ತಮಿಳು, ಇಂಗ್ಲಿಷ್, ಕನ್ನಡ, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಕಂಟೆಂಟ್‌ಗಳು ವೀಕ್ಷಣೆಗೆ ಸಿಗಲಿವೆ. ವೆಬ್, ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಇದು ಯೂಸರ್‌ ಫ್ರೆಂಡ್ಲಿ ವೇದಿಕೆ ಆಗಿರಲಿದೆ.

ಇದನ್ನೂ ಓದಿ: ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್​: ಈವರೆಗೆ ಸುದೀಪ್​ 'ಮ್ಯಾಕ್ಸ್​'​, ಉಪೇಂದ್ರ 'ಯುಐ' ಗಳಿಸಿದ್ದೆಷ್ಟು?

ಜನವರಿ 23ರಂದು ದೆಹಲಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಛಾಯಾಗ್ರಾಹಕ ಶ್ರೀವತ್ಸ ಲೋಗೋ ಬಿಡುಗಡೆ ಮಾಡಿ "ಗ್ಲೋಪಿಕ್ಸ್" ಓಟಿಟಿಯ ಉದ್ದೇಶ ಚೆನ್ನಾಗಿದೆ. ಈ ಓಟಿಟಿ ದೊಡ್ಡಮಟ್ಟದಲ್ಲಿ ಹೆಸರು ಮಾಡಲಿ. ನಿರ್ಮಾಪಕರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.