ನವದೆಹಲಿ: ಭಾರತದಲ್ಲಿ ಶೇ 67ರಷ್ಟು ಆನ್ಲೈನ್ ಬಸ್ ಟಿಕೆಟ್ ಬುಕ್ಕಿಂಗ್ಗಳು 2 ಮತ್ತು 3ನೇ ಶ್ರೇಣಿಯ ನಗರಗಳಿಂದ ಆಗಿದ್ದರೆ, ಇನ್ನುಳಿದ ಶೇ 33ರಷ್ಟು ಬುಕ್ಕಿಂಗ್ಗಳು ಮೆಟ್ರೋ ನಗರಗಳಲ್ಲಿ ಆಗಿವೆ ಎಂದು ಹೊಸ ವರದಿಯೊಂದು ಬುಧವಾರ ತಿಳಿಸಿದೆ. ಆನ್ಲೈನ್ ಬಸ್ ಟಿಕೆಟಿಂಗ್ ಪ್ಲಾಟ್ ಫಾರ್ಮ್ ರೆಡ್ ಬಸ್ ಪ್ರಕಾರ, ಈ ಪ್ರವೃತ್ತಿಯು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಹೆಚ್ಚಿದ ಡಿಜಿಟಲ್ ಬಳಕೆಯನ್ನು ತೋರಿಸುತ್ತದೆ.
"ಈ ವರದಿಯು ಬಸ್ ಸಾರಿಗೆ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ನಮ್ಮ ಬದ್ಧತೆ ಸೂಚಿಸುತ್ತದೆ. ಅಲ್ಲದೇ ಈ ಹಿಂದೆ ಲಭ್ಯವಿಲ್ಲದ ನಿಖರವಾದ ಅಂಕಿ - ಅಂಶಗಳು ಮತ್ತು ಪ್ರವೃತ್ತಿಗಳನ್ನು ನಮ್ಮ ವರದಿ ಬಹಿರಂಗಪಡಿಸಿದೆ" ಎಂದು ರೆಡ್ ಬಸ್ ಸಿಇಒ ಪ್ರಕಾಶ್ ಸಂಗಮ್ ಹೇಳಿದರು.
ವರದಿಯ ಪ್ರಕಾರ, 18 ರಿಂದ 25 ವರ್ಷ ವಯಸ್ಸಿನ ಶೇ 29 ರಷ್ಟು ಮತ್ತು 26 ರಿಂದ 36 ವರ್ಷ ವಯಸ್ಸಿನ ಶೇ 39 ರಷ್ಟು ಯುವ ಪ್ರಯಾಣಿಕರು ಅತ್ಯಧಿಕ ಆನ್ಲೈನ್ ಬಸ್ ಟಿಕೆಟ್ ಬುಕ್ ಮಾಡಿದ್ದಾರೆ. ಎಲ್ಲ ಪ್ರಯಾಣಿಕರ ಪೈಕಿ ಸುಮಾರು ಶೇ 33 ರಷ್ಟು ಮಹಿಳೆಯರು ಮತ್ತು ಶೇ 52 ರಷ್ಟು ಬುಕ್ಕಿಂಗ್ ಏಕವ್ಯಕ್ತಿ ಪ್ರಯಾಣಿಕರಿಗಾಗಿ ಬುಕ್ಕಿಂಗ್ ಆಗಿವೆ.