ಕರ್ನಾಟಕ

karnataka

ETV Bharat / bharat

ವಿಪರೀತ ಸಾಲ ಬಾಧೆ: ಒಂದೇ ಕುಟುಂಬದ ಐವರು ಆತ್ಮಹತ್ಯೆ - Family Suicide

ತಮಿಳುನಾಡಿನ ತಿರುತಂಗಲ್‌ನಲ್ಲಿ ಸಾಲ ಬಾಧೆಯಿಂದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Tamil Nadu: Family of five die by suicide, huge debts cited as reason
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : May 23, 2024, 6:31 PM IST

ವಿರುಧುನಗರ (ತಮಿಳುನಾಡು):ಜಿಲ್ಲೆಯ ಶಿವಕಾಶಿ ಬಳಿಯ ತಿರುತಂಗಲ್‌ನಲ್ಲಿ ಗುರುವಾರ ಸಾಲ ಬಾಧೆಯಿಂದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಬಹಳ ಹೊತ್ತಾದರೂ ಮನೆಯ ಒಳಗಿಂದ ಯಾರೂ ಬಾಗಿಲು ತೆರೆದಿರಲಿಲ್ಲ. ಅನುಮಾನ ಬಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಪ್ರಕರಣ ಗೊತ್ತಾಗಿದೆ.

ಲಿಂಗಮ್ ಮತ್ತು ಅವರ ಪತ್ನಿ ಪಝನಿಯಮ್ಮಾಳ್ ಹಾಗೂ ಅವರ ಮಕ್ಕಳಾದ ಆನಂದವಲ್ಲಿ, ಆದಿತ್ಯ ಮತ್ತು ಸಸಿಕಾ (2 ತಿಂಗಳು) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೀಡಾದ ದಂಪತಿ ಇಲ್ಲಿನ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರು ಐದು ಶವಗಳನ್ನು ಮನೆಯಿಂದ ಹೊರತೆಗೆದು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಶಿಕ್ಷಕ ಲಿಂಗಮ್ ಸಾಕಷ್ಟು ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಸಾಲಗಾರರು ಒತ್ತಡ ಹೇರುತ್ತಿದ್ದರು. ಈ ಸಾಲಬಾಧೆಯಿಂದ ಕುಟುಂಬ ವಿಷ ಸೇವಿಸಿರುವ ಅನಮಾನ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಿರುತಂಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿ: ಸಾಲ ತೀರಿಸದ್ದಕ್ಕೆ ಪತ್ನಿ, ಮಗನಿಗೆ ಗೃಹ ಬಂಧನ ಆರೋಪ; ಮನನೊಂದು ರೈತ ಆತ್ಮಹತ್ಯೆ: SP ಹೇಳಿದ್ದಿಷ್ಟು! - Belagavi farmer suicide

ABOUT THE AUTHOR

...view details