ETV Bharat / bharat

24 ವರ್ಷಗಳ ಬಳಿಕ ಚಪ್ಪಲಿ ತೊಟ್ಟ ವ್ಯಕ್ತಿ... ಕಾರಣ? - ASSAM MAN TAKEN VOW

ಕಳೆದೆರಡು ದಶಕಗಳಿಂದ ಎಂತಹ ಸಂದರ್ಭದಲ್ಲಿಯೂ ಈ ವ್ಯಕ್ತಿ ಚಪ್ಪಲಿ ಧರಿಸಿರಲಿಲ್ಲ. ಆದರೆ 24 ವರ್ಷಗಳ ಬಳಿಕ ಇದೀಗ ಚಪ್ಪಲಿ ಹಾಕಿದ್ದಾರೆ.

assam-man-taken-vow-to-walk-barefoot-for-this-reason
ಅತುಲ್​ ದೆಬಾನಾಥ್​ (ಈಟಿವಿ ಭಾರತ್​​)
author img

By ETV Bharat Karnataka Team

Published : Jan 24, 2025, 12:58 PM IST

ನಾಗಾನ್​: ತಾವೇ ಮಾಡಿದ ಪ್ರತಿಜ್ಞೆಯಿಂದಾಗಿ ಬರಿಗಾಲಲ್ಲೇ ಸಂಚರಿಸಿದ್ದ ವ್ಯಕ್ತಿ 24 ವರ್ಷಗಳ ಬಳಿಕ ಚಪ್ಪಲಿ ತೊಟ್ಟಿದ್ದಾರೆ. ಇವರ ಹೆಸರು ಅತುಲ್​ ದೆಬಾನಾಥ್. 60 ವರ್ಷದ ಇವರು 24 ವರ್ಷಗಳ ಬಳಿಕ ಚಪ್ಪಲಿ ಧರಿಸಿದ್ದಾರೆ.

ಕಳೆದೆರಡು ದಶಕಗಳಿಂದ ಎಂತಹ ಸಂದರ್ಭದಲ್ಲಿ ಚಪ್ಪಲಿ ತೊಡದಿರಲು ಕಾರಣ ಇವರು ಮಾಡಿದ ಆ ಒಂದು ಪ್ರತಿಜ್ಞೆ. ಇದೀಗ ಆ ಪ್ರತಿಜ್ಞೆ ಎರಡು ದಶಕಗಳ ಬಳಿಕ ಪೂರೈಕೆಯಾಗಿದೆ.

ಪಕ್ಷ ಸೋತಿದ್ದಕ್ಕೆ ಪ್ರತಿಜ್ಞೆ: ದೆಬಾನಾಥ್​, ಅಸ್ಸೋಂನ ನಾಗಾನ್​ ಜಿಲ್ಲೆಯ ಸಮಗುರಿ ಕ್ಷೇತ್ರದ ಮತದಾರ. ಅಸ್ಸೋಂ ಗಣ ಪರಿಷದ್​ನ (ಎಜಿಪಿ) ತಳಮಟ್ಟದ ಕಾರ್ಯಕರ್ತನಾಗಿದ್ದ ಇವರು 2001ರಲ್ಲಿ ತಮ್ಮ ಕ್ಷೇತ್ರದಲ್ಲಿ ಎಜಿಪಿ ಗೆದ್ದಲ್ಲಿ ಮಾತ್ರ ಚಪ್ಪಲಿ ತೊಡುವ ಪ್ರತಿಜ್ಞೆ ಮಾಡಿದ್ದರು. ಆದರೆ ಸಮಗುರಿ ಚುನಾವಣಾ ಕಣದಲ್ಲಿ ಎಜಿಪಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ಎಜಿಪಿ ಅಭ್ಯರ್ಥಿ ಅತುಲ್​ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿ ರಕಿಬುಲ್​ ಹುಸೇನ್​ ವಿರುದ್ಧ ಸೋಲು ಕಂಡರು. ಪ್ರಾದೇಶಿಕ ಪಕ್ಷಗಳ ಭದ್ರಕೋಟೆಯಾದ ಸಮಗುರಿಯಲ್ಲಿ ಬೇರೆ ಪಕ್ಷ ಗೆದ್ದಿದ್ದರಿಂದ ಬೇಸರಗೊಂಡ ದೆಬಾನಾಥ್,​ ಮತ್ತೊಮ್ಮೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡಿದ್ದರು.

ಕಳೆದ ವರ್ಷ ಅಕ್ಟೋಬರ್​ನಲ್ಲಿ ನಡೆದ ಚುನಾವಣೆಯಲ್ಲಿ 24 ವರ್ಷದ ಬಳಿಕ ಕಾಂಗ್ರೆಸ್​​ ಸೋಲುವ ಮೂಲಕ ಆಡಳಿತರೂಢ ಬಿಜೆಪಿ ಗೆಲುವು ಕಂಡಿತು. ಬಿಜೆಪಿಯ ದಿಪ್ಲುರಂಜನ್​ ಶರ್ಮಾ ಅವರು ಕಾಂಗ್ರೆಸ್​ ಅಭ್ಯರ್ಥಿ ತಂಜಿಲ್​ ಹುಸೇನ್​ ವಿರುದ್ಧ ಜಯ ಸಾಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಸಮಗುರಿಯಲ್ಲಿ ಬಿಜೆಪಿ ಗೆದ್ದಿದೆ.

ದಿಸ್ಪುರದಲ್ಲಿ ಬಿಜೆಪಿ ಜೊತೆ ಎಜಿಪಿ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಎನ್​ಡಿಎ ಒಕ್ಕೂಟದಲ್ಲೂ ಎಜಿಪಿ ಸದಸ್ಯರಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಎಜಿಪಿ ನಾಯಕ ಮತ್ತು ಅಸ್ಸೋಂ ಸಚಿವ ಕೆಶಬ್​ ಮಹಂತಾ ಅವರು ಜನವರಿ 22ರಂದು ದೇಬಾನಾಥ್​ ಮನೆಗೆ ಭೇಟಿ ನೀಡಿ ಎರಡು ಜೊತೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ದೆಬಾನಾಥ್​ ತಮ್ಮ 24 ವರ್ಷದ ಪ್ರತಿಜ್ಞೆಯನ್ನು ಅಂತ್ಯಗೊಳಿಸಿದರು.

2001ರಿಂದಲೂ ಸಮಗುರಿಯಲ್ಲಿ ಕಾಂಗ್ರೆಸ್​ ಆಡಳಿತವಿದ್ದು, ನಮಗೆಲ್ಲಾ ಇದೊಂದು ಕೆಟ್ಟ ಕನಸಾಗಿತ್ತು. ನಮ್ಮ ಕುಟುಂಬವನ್ನು ಸ್ಥಳೀಯ ಕಾಂಗ್ರೆಸ್​ ನಾಯಕರು ಅವಮಾನ ಮಾಡಿ, ಕುಹುಕವಾಡುತ್ತಿದ್ದರು. ಕೆಲವು ಕಾಂಗ್ರೆಸ್​ ಬೆಂಬಲಿಗರಿಂದಲೂ ನಾನು ಕಿರುಕುಳಕ್ಕೆ ಒಳಗಾದೆ ಎಂದು ದೆಬಾನಾಥ್ ಭಾವುಕರಾದರು.

ಕಳೆದ 24 ವರ್ಷ ದೆಬಾನಾಥ್​ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಧರಿಸಿರಲಿಲ್ಲ. ಯಾವಾಗಲೂ ಬರಿಗಾಲಲ್ಲೇ ನಡೆಯುತ್ತಿದ್ದರು.

ಇದನ್ನೂ ಓದಿ: ಕಾಶ್ಮೀರಕ್ಕೆ ನೇರ ರೈಲು ಸೇವೆ: ಫೆಬ್ರವರಿಯಲ್ಲಿ ಮೊದಲ ರೈಲು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನ 50ನೇ ವರ್ಷಾಚರಣೆ: 14,505 ಲೆದರ್ ಬಾಲ್​ಗಳಿಂದ​ 'ವಾಕ್ಯ' ರಚಿಸಿ ಗಿನ್ನೆಸ್ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.