ETV Bharat / bharat

ಮೋದಿ - ಕೇಜ್ರಿವಾಲ್​ ಒಂದೇ ನಾಣ್ಯದ ಎರಡು ಮುಖ: ಓವೈಸಿ ವಾಗ್ದಾಳಿ - MODI AND KEJRIWAL ARE LIKE BROTHERS

ಮೋದಿ ಮತ್ತು ಕೇಜ್ರಿವಾಲ್​ ಸಹೋದರರಿದ್ದಂತೆ, ಒಂದೇ ನಾಣ್ಯದ ಎರಡು ಮುಖ. ಇಬ್ಬರು ಆರ್​ಎಸ್​ಎಸ್​ ತತ್ವ ಹೊಂದಿರುವವರು ಎಂದು ಐಎಂಐಎಂ ಅಧ್ಯಕ್ಷ ಅಸಾಸುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

Modi and Kejriwal are like brothers two sides of the same coin Owaisi Slams
ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್​ ಓವೈಸಿ (ಐಎಎನ್​ಎಸ್​​)
author img

By ETV Bharat Karnataka Team

Published : Jan 24, 2025, 11:21 AM IST

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅವರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್​ ಓವೈಸಿ ತಿಳಿಸಿದ್ದಾರೆ.

ಮೋದಿ ಮತ್ತು ಕೇಜ್ರಿವಾಲ್​ ಸಹೋದರರಿದ್ದಂತೆ, ಒಂದೇ ನಾಣ್ಯದ ಎರಡು ಮುಖ. ಇಬ್ಬರು ಆರ್​ಎಸ್​ಎಸ್​ ತತ್ವ ಹೊಂದಿರುವವರು. ಒಬ್ಬರು ಶಾಖೆಯಿಂದ ಬಂದರೆ, ಮತ್ತೊಬ್ಬರು ಅದರ ಸಂಸ್ಥೆಯಿಂದ ಹೊರ ಬಂದಿರುವವರು ಎಂದು ಚುನಾವಣಾ ಪ್ರಚಾರದಲ್ಲಿ ಓವೈಸಿ ವಾಗ್ದಾಳಿ ನಡೆಸಿದರು.

ಓಕ್ಲಾದ ತಮ್ಮ ಪಕ್ಷದ ಅಭ್ಯರ್ಥಿ ಶಿಫ-ಉರ್​- ರೆಹಮಾನ್​ ಪರ ಪ್ರಚಾರ ನಡೆಸಿದ ಬಳಿಕ ಶಹೀನ್​ ಬಾಗ್​ನಲ್ಲಿ ಪಾದಯಾತ್ರೆ ನಡೆಸಿದರು. ಚುನಾವಣೆಯಲ್ಲಿ ಜನರು ಗಾಳಿಪಟದ ಗುರುತಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ದೆಹಲಿ ಚುನಾವಣೆಗೆ ಎಐಎಂಐಎಂ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಮುಸ್ತಾಫಾಬಾದ್​ನಿಂದ ತಹೀರ್​ ಹುಸೇನ್​ ಮತ್ತು ಓಕ್ಲಾದಿಂದ ಶಿಫ-ಉರ್​-ರೆಹಮಾನ್​ ಕಣದಲ್ಲಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಪ್ರಸ್ತುತ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ತಹೀರ್​ ಹುಸೇನ್​ ಎಎಪಿ ಕೌನ್ಸಿಲರ್​ ಆದ ಸಂದರ್ಭದಲ್ಲಿ ಜೈಲು ಸೇರಿದ್ದರು. ಇವರು ಕಳೆದ ಡಿಸೆಂಬರ್​ನಲ್ಲಿ ಎಐಎಂಐಎಂ ಸೇರಿದ್ದರು.

ತಹೀರ್​ ಹುಸೇನ್​ ಮತ್ತು ಶಿಫ-ಉರ್​-ರೆಹಮಾನ್​ ಕಳೆದ ಐದು ವರ್ಷದಿಂದ ಇಲ್ಲಿಯವರೆಗೂ ಜೈಲಿನಲ್ಲೇ ಇದ್ದಾರೆ. ಆದರೆ, ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಸಂಜಯ್​ ಸಿಂಗ್​​ ಅವರಿಗೆ ಹೇಗೆ ಜಾಮೀನು ದೊರಕಿತು ಎಂದು ಪ್ರಶ್ನಿಸಿದರು. ಇನ್ನು ಜೈಲಿನಲ್ಲೇ ಇರುವ ಅವರ ತಪ್ಪಾದರೂ ಏನು ಎಂದರು.

ಓಕ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆ ವಿರುದ್ಧ ಟೀಕಿಸಿದ ಅವರು, ಇತರೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದು, ಓಕ್ಲಾವನ್ನು ಕಸದ ರಾಶಿಯಾಗಿ ಎಎಪಿ ಸರ್ಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿರು. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಸಾಧ್ಯ ಎಂದರು. (ಪಿಟಿಐ)

ಇದನ್ನೂ ಓದಿ: ಶಹಜಹಾನ್‌ ಉರುಸ್: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.