ETV Bharat / bharat

ಮಹಾ ಕುಂಭಮೇಳ ಕಾಲ್ತುಳಿತ: ಕ್ರಮಕ್ಕೆ ಆಗ್ರಹಿಸಿದ ಪಿಐಎಲ್​ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ - MAHA KUMBH STAMPEDE

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿತು.

Supreme Court refused to entertain PIL seeking legal action against Maha Kumbh stampede officials
ಮಹಾ ಕುಂಭಮೇಳದಲ್ಲಿ ಜನಸ್ತೋಮ (ANI)
author img

By ETV Bharat Karnataka Team

Published : Feb 3, 2025, 4:05 PM IST

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್​)ಯನ್ನು ಇಂದು ಸುಪ್ರೀಂ ಕೋರ್ಟ್​ ವಜಾ ಮಾಡಿತು.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್​ ಖನ್ನಾ ಮತ್ತು ನ್ಯಾ.ಸಂಜಯ್​ ಕುಮಾರ್​ ಅವರಿದ್ದ ಪೀಠ ಅರ್ಜಿ ವಜಾಗೊಳಿಸಿದೆ. ಅರ್ಜಿದಾರರ ಪರ ವಕೀಲ ವಿಶಾಲ್​ ತಿವಾರಿ ಅರ್ಜಿ ಸಲ್ಲಿಸಿದ್ದರು.

ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್​​ ರೋಹಟಗಿ, "ಈಗಾಗಲೇ ಉತ್ತರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಪ್ರಯಾಗ್‌ರಾಜ್‌​ ಕೋರ್ಟ್‌ನಲ್ಲೂ ಕೂಡ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಲಾಗಿದೆ" ಎಂದು ತಿಳಿಸಿದರು.

"ಇದೊಂದು ದುರದೃಷ್ಟಕರ ಘಟನೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಮುಂದೆ ಹೋಗಬಹುದು" ಎಂದು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತು.

ಸುಪ್ರೀಂ ಕೋರ್ಟ್​​ಗೆ ಸಲ್ಲಿಸಲಾದ ಅರ್ಜಿಯಲ್ಲಿ, "ಪ್ರಯಾಗ್​ರಾಜ್‌ನಲ್ಲಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಇದು ಕಳವಳಕಾರಿ. ಸರ್ಕಾರದ ಅಧಿಕಾರಿಗಳಿಂದ ಉದ್ದೇಶಪೂರ್ವಕ ವೈಫಲ್ಯವಾಗಿದೆ. ಕಾಲ್ತುಳಿತದಲ್ಲಿ 30 ಜೀವಗಳು ಹೋಗಿವೆ. ಅನೇಕರು ಗಾಯಗೊಂಡಿದ್ದಾರೆ. ಈ ರೀತಿಯ ಘಟನಾವಳಿಗಳನ್ನು ತಪ್ಪಿಸಬಹುದಿತ್ತು" ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಮೂರನೇ ಅಮೃತ ಸ್ನಾನಕ್ಕೆ ಸಾಕ್ಷಿಯಾದ ಮಹಾಕುಂಭಮೇಳ: ವಸಂತ ಪಂಚಮಿಗೆ UP ಸರ್ಕಾರದಿಂದ ಮತ್ತಷ್ಟು ಭದ್ರತೆ

ಇದನ್ನೂ ಓದಿ: ಮೇ 4 ರಂದು ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿರುವ ಬದರಿನಾಥ ಧಾಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.