ಅಬುಧಾಬಿಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 (ILT20)ಯಲ್ಲಿ RCBಯ ನೂತನ ಆಲ್‌ರೌಂಡರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಮಂಗಳವಾರ ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ILT20 ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಎಮಿರೇಟ್ಸ್ 28 ರನ್‌ಗಳಿಂದ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಮಿರೇಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.
As explosive as it gets! 💥#OneFamily #MIEmirates #ADKRvMIE
— MI Emirates (@MIEmirates) January 21, 2025
pic.twitter.com/8gbRPQPrq1
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ನಿಕೊಲಸ್ ಪೂರನ್ ಮತ್ತು ರೊಮಾರಿಯೊ ಶೆಫರ್ಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು. ನಾಯಕ ಪೂರನ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 49 ರನ್ ಚಚ್ಚಿದರು. ಮೊತ್ತೊಂದೆಡ ಸತತ 7 ಬೌಂಡರಿ ಬಾರಿಸುವ ಮೂಲಕ ಶೆಫರ್ಡ್ ಸ್ಫೋಟಕ ಪ್ರದರ್ಶನ ನೀಡಿದರು. ಕೇವಲ 13 ಎಸೆತಗಳಲ್ಲಿ 38 ರನ್ ಬಾರಿಸಿದರು. ಇದರಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿವೆ.
ಸತತ 7 ಬೌಂಡರಿ: 19ನೇ ಓವರ್ನ ಕೊನೆಯಲ್ಲಿ ಸ್ಟ್ರೈಕ್ ಪಡೆದಿದ್ದ ಶೆಫರ್ಡ್ ಅಂತಿಮ ಎರಡು ಬೌಲ್ಗಳಲ್ಲಿ 2 ಬೌಂಡರಿ ಬಾರಿಸಿದರು. ಬಳಿಕ 20ನೇ ಓವರ್ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಪಡೆದ ಶೆಫರ್ಡ್ 3 ಸಿಕ್ಸರ್ ಮತ್ತು 2 ಬೌಂಡರಿ (6,4,4,6,6) ಕಲೆಹಾಕಿದರು. ಇದರೊಂದಿಗೆ ಕೊನೆಯ 7 ಎಸೆತಗಳಲ್ಲಿ 34 ರನ್ ಚಚ್ಚಿದರು.
ಅವರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ತಂಡದ ಸ್ಕೋರ್ 180ರ ಗಡಿ ದಾಟಲು ಸಾಧ್ಯವಾಯ್ತು. ಉಳಿದಂತೆ ಕಳೆದ ಪಂದ್ಯದ ಶತಕದ ಹೀರೋ ಟಾಮ್ ಬ್ಯಾಂಟನ್ (9), ಕೀರನ್ ಪೊಲಾರ್ಡ್ (5), ಮತ್ತು ಮೊಸ್ಲಿ (6) ಕಡಿಮೆ ಮೊತ್ತಕ್ಕೆ ಔಟಾದರು. ನೈಟ್ ರೈಡರ್ಸ್ ಪರ ಅಲಿ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರೆ, ಇಬ್ರಾರ್ ಅಹ್ಮದ್ ಒಂದು ವಿಕೆಟ್ ಕಿತ್ತರು.
ಎಡವಿದ ನೈಟ್ ರೈಡರ್ಸ್ : 187 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಬುಧಾಬಿ ನೈಟ್ ರೈಡರ್ಸ್ ತಂಡ ಸಾಧಾರಣ ಆರಂಭವನ್ನು ಪಡೆಯಿತು. ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ (22), ಆಂಡ್ರಿಯಾಸ್ ಗೌಸ್ (34) ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಆದರೆ, ಇನ್ನಿಂಗ್ಸ್ ಮಧ್ಯದಲ್ಲಿ ತಂಡ ಕುಸಿತು ಕಂಡಿತು. ಜೋ ಕ್ಲಾರ್ಕ್ (3), ಕೈಲ್ ಪೆಪ್ಪರ್ (5), ಅಲಿಶಾನ್ ಶರಫ್ (4) ಮತ್ತು ಲ್ಯಾರಿ ಇವಾನ್ಸ್ (7) ಬೇಗನೆ ಔಟಾದರು.
ಈ ವೇಳೆ ಬ್ಯಾಟಿಂಗ್ಗೆ ಬಂದ ಆಂಡ್ರೆ ರಸೆಲ್ 23 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಮೇತ 37 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 158 ರನ್‌ಗಳಿಗೆ ಸೀಮಿತವಾಯಿತು. ಎಮಿರೇಟ್ಸ್ ಪರ ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಎರಡು ವಿಕೆಟ್ ಪಡೆದರು.
ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೂ 1.50 ಕೋಟಿಗೆ ಖರೀದಿಸಿದೆ.
ಇದನ್ನೂ ಓದಿ: ಐಪಿಎಲ್ಗೂ ಮುನ್ನವೇ RCBಗೆ ಬಿಗ್ ಶಾಕ್; ಸ್ಟಾರ್ ಆಟಗಾರರ ಕಳಪೆ ಪ್ರದರ್ಶನದಿಂದ ಹೆಚ್ಚಿದ ಆತಂಕ