ETV Bharat / state

2 ಲಕ್ಷ ಹೂವುಗಳಲ್ಲಿ ಐಫೆಲ್​ ಟವರ್​, ಎಲೆಗಳಿಂದ ಕಂಬಳ ಕೋಣ: ಗಮನ ಸೆಳೆದ ಮಂಗಳೂರು ಫಲಪುಷ್ಪ ಪ್ರದರ್ಶನ - FRUIT AND FLOWER EXHIBITION

ಮಂಗಳೂರಿನಲ್ಲಿ ಗುರುವಾರದಿಂದ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು, ಜನವರಿ 26ರವರೆಗೆ ಇರಲಿದೆ. ಹೂವು ಎಲೆಗಳಲ್ಲಿ ರೂಪಗೊಂಡ ವಿವಿಧ ಕಲಾಕೃತಿಗಳು ಫಲಪುಷ್ಪ ಪ್ರರ್ದಶನದಲ್ಲಿ ಜನರನ್ನು ಆಕರ್ಷಿಸುತ್ತಿವೆ.

MANGALURU FLOWER EXHIBITION  DAKSHINA KANNADA  ಫಲಪುಷ್ಪ ಪ್ರದರ್ಶನ  THE EIFFEL TOWER OF FLOWERS
ಮಂಗಳೂರಿನಲ್ಲಿ 2 ಲಕ್ಷ ಹೂವುಗಳಿಂದ ಐಫೆಲ್​ ಟವರ್​, ಎಲೆಗಳಿಂದ ಕಂಬಳ ಕೋಣ: ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ (ETV Bharat)
author img

By ETV Bharat Karnataka Team

Published : Jan 24, 2025, 2:16 PM IST

ಮಂಗಳೂರು: ಅಲಂಕಾರಕ್ಕೆ ಬಳಸುವ ಎಲೆಗಳಿಂದ ತಯಾರಾಗಿರುವ ಕಂಬಳ ಕೋಣಗಳು. ಹೂವುಗಳ ರಾಶಿಯಲ್ಲಿ ತಲೆ ಎತ್ತಿದ ಫ್ರಾನ್ಸ್​​​ ದೇಶದ ಐಫೆಲ್​​ ಟವರ್. ತರಕಾರಿ, ಹಣ್ಣು ಹಂಪಲು, ಸಿರಿಧಾನ್ಯಗಳಿಂದ ಕಳೆಗಟ್ಟಿರುವ ಶಿವಲಿಂಗ, ನಾನಾ ರೀತಿಯ ಪ್ರಾಣಿ, ಪಕ್ಷಿಗಳು... ಇವೆಲ್ಲವೂ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ‌ಗಮನ ಸೆಳೆದಿವೆ.

ಜಿಲ್ಲಾಡಳಿತ, ಜಿ.ಪಂ, ತೋಟಗಾರಿಕೆ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಗುರುವಾರ ಕದ್ರಿಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು, ಭಾನುವಾರದವರೆಗೆ ಈ ಆಕರ್ಷಣೆ ಇರಲಿದೆ.

ಮಂಗಳೂರು ಫಲಪುಷ್ಪ ಪ್ರದರ್ಶನ (ETV Bharat)

2 ಲಕ್ಷ ಹೂಗಳಿಂದ ತಯಾರಿಸಲಾದ 22 ಅಡಿ ಎತ್ತರ ಹಾಗೂ 12 ಅಡಿ ಅಗಲದ ಐಫೆಲ್ ಟವರ್, ವಿವಿಧ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ. ಸಾಲ್ವಿಯ, ಸೇವಂತಿಗೆ, ಚೆಂಡುಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೂನಿಯಾ, ಟೊರಿನೋ ಮುಂತಾದ ಹೂವುಗಳನ್ನು ಬಳಸಿಕೊಂಡು ಅಲ್ಲಲ್ಲಿ ಪ್ರತ್ಯೇಕವಾಗಿ ಜೋಡಿಸಿರುವುದು, ಸಣ್ಣಪುಟ್ಟ ಕೈತೋಟ ನೋಡುಗರನ್ನು ಸೆಳೆಯುತ್ತಿವೆ.

ಕೇವಲ 1ರೂ.ಗೆ ತರಕಾರಿ ಗಿಡ: ತೋಟಗಾರಿಕೆ ಇಲಾಖೆ ಒಂದು ಗಿಡವನ್ನು ಕೇವಲ ಒಂದು ರೂ.ಗೆ ಮಾರಾಟ ಮಾಡುತ್ತಿದೆ. ಅಲಸಂದಿ, ಬೆಂಡೆ, ಹೀರೆ, ಸೋರೆ, ಕುಂಬಳ, ಹಾಗಲಕಾಯಿ ಇತ್ಯಾದಿ ತರಕಾರಿಗಳ ಗಿಡಗಳು ಲಭ್ಯ ಇವೆ.

MANGALURU FLOWER EXHIBITION  DAKSHINA KANNADA  ಫಲಪುಷ್ಪ ಪ್ರದರ್ಶನ  THE EIFFEL TOWER OF FLOWERS
ಫಲಪುಷ್ಪ ಪ್ರದರ್ಶನ (ETV Bharat)

ಜ. 26ರ ವರೆಗೆ ಪ್ರದರ್ಶನ: ಗುರುವಾರ ಆರಂಭಗೊಂಡ ಫಲಪುಷ್ಪ ಪ್ರದರ್ಶನ ಜ. 26ರವರೆಗೆ ಇರಲಿದೆ. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೆ ಫಲಪುಷ್ಪ ಪ್ರದರ್ಶನವಿರಲಿದೆ.

ಕೈಮಗ್ಗದ ಉಡುಪು, ಹೂವಿನ ಬೀಜ: ದೇಸಿ ಕೈಮಗ್ಗದಿಂದ ತಯಾರಿಸಲಾಗಿರುವ ಉಡುಪುಗಳು, ವಿವಿಧ ತರಕಾರಿ, ಹೂವಿನ ಗಿಡಗಳ ಬೀಜಗಳು, ಗೆರಟೆಯಿಂದ ತಯಾರಿಸಿದ ಅಲಂಕಾರಿಕೆಗಳು, ತಿಂಡಿ ತಿನಸುಗಳು, ಗೃಹಿಣಿಯರು ತಯಾರಿಸಿದ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಗಡ್ಡೆ ಗೆಣಸು, ಮನೆಗಳಲ್ಲಿ ಬಳಸುವ ನಿತ್ಯ ಪರಿಕರಗಳು ಗಮನ ಸೆಳೆಯುತ್ತಿವೆ. ಪ್ರದರ್ಶನದಲ್ಲಿ ಜೇನು ಕೃಷಿಯಲ್ಲಿ ಪಳಗಿದವರು ಸ್ಟಾಲ್‌ಗಳನ್ನು ಇರಿಸಿದ್ದು, ಕೆಲವೊಂದು ಪ್ರಾತ್ಯಕ್ಷಿಕೆಗಳೊಂದಿಗೆ ಮಾಹಿತಿ ನೀಡುತ್ತಿದ್ದಾರೆ.

ಅಲಂಕಾರಿಕಾ ಹೂ ಜೋಡಣೆ: ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಸುಮಾರು 20,000 ಸಂಖ್ಯೆಯ 30ಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳಾದ ಸಾಕ್ಷ್ಯ ಹೂವು, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್​, ಆಸ್ಟರ್​​, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೂನಿಯಾ, ಟೊರಿನೋ, ಜರೇನಿಯಂ, ಪಾಯಿನ್ ಸಿಟಿಯ, ಆಮೇರಿಕನ್ ಡೈಸಿ ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು, ವಿವಿಧ ಆಕಾರಗಳಲ್ಲಿ ಪ್ರದರ್ಶನದಲ್ಲಿ ಜೋಡಿಸಲಾಗಿದೆ.

ಜೇನು ಉತ್ಪಾದನೆ ಮತ್ತು ಮಾದರಿ ಹಾಗೂ ಉತ್ಪನ್ನಗಳ ಪ್ರದರ್ಶನ: ಝೇಂಕಾರ ಬ್ರಾಂಡಿನಡಿ ಜೇನು ಮಾರಾಟ, ಸಂಸ್ಕರಣೆ ಹಾಗೂ ಗುಣಮಟ್ಟ ಸುಧಾರಿಸುವ ಬಗ್ಗೆ ಮಾಹಿತಿ/ಪ್ರಚಾರ ಕೈಗೊಳ್ಳಲಾಗಿದೆ. ಜೊತೆಗೆ ವಿವಿಧ ಜೇನು ಸಹಕಾರ ಸಂಘ, ರೈತ ಉತ್ಪಾದಕರ ಸಂಸ್ಥೆಗಳಿಂದ ಜೇನಿನ ವಿವಿಧ ತಳಿಗಳ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಜೇನು ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಪ್ರವೇಶ ಶುಲ್ಕ: ಫಲಪುಷ್ಪ ಪ್ರದರ್ಶನದಲ್ಲಿ ವಯಸ್ಕರಿಗೆ 30 ರೂ. ಮತ್ತು ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿರುತ್ತದೆ. ಉಳಿದಂತೆ ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ವೀಕ್ಷಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್​, ಈ ಫಲಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆ ಒಳಗೊಂಡಿದೆ. 2 ಲಕ್ಷ ಹೂವುಗಳಿಂದ ಮಾಡಿದ ಐಫೆಲ್​ ಟವರ್ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಹೂವು, ತರಕಾರಿಗಳನ್ನು ಬಳಸಿ ಕಲಾಕೃತಿ ರಚಿಸಲಾಗಿದೆ. ಪ್ರದರ್ಶನ ಮತ್ತು ಮಾರಾಟವನ್ನು ಈ ಮೇಳದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: 108 ತರಕಾರಿಗಳಿಂದ ಬನಶಂಕರಿ ದೇವಿಗೆ ಅಲಂಕಾರ: ಪಲ್ಲೇದ ಹಬ್ಬ ಕಣ್ತುಂಬಿಕೊಂಡ ಭಕ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.