ETV Bharat / state

ಮಂಡ್ಯ: ಬ್ಯಾಂಕ್​ ದರೋಡೆಗೆ ವಿಫಲ ಯತ್ನ - BANK ROBBERY ATTEMPT

ದುಷ್ಕರ್ಮಿಗಳು ತಡರಾತ್ರಿ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್​​ಗೆ ನುಗ್ಗಿ ದರೋಡೆಗೆ ಯತ್ನಿಸಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.

ATTEMPT TO BANK ROBBERY
ಬ್ಯಾಂಕ್​ ದರೋಡೆಗೆ ವಿಫಲ ಯತ್ನ (ETV Bharat)
author img

By ETV Bharat Karnataka Team

Published : Feb 25, 2025, 6:25 PM IST

ಮಂಡ್ಯ: ದುಷ್ಕರ್ಮಿಗಳು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್​ನಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.

ದುಷ್ಕರ್ಮಿಗಳು ತಡರಾತ್ರಿ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ನ ಕಿಟಕಿ ಕತ್ತರಿಸಿ ಒಳಗೆ ನುಗ್ಗಿ ಲಾಕರ್​ ಒಡೆಯಲು ಯತ್ನ ಮಾಡಿದ್ದಾರೆ. ಆದರೆ ಲಾಕರ್‌ ಒಡೆಯಲು ಸಾಧ್ಯವಾಗದೇ ದುಷ್ಕರ್ಮಿಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ.

ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಡಹಗಲೇ ವೈದ್ಯನ ಮನೆಗೆ ನುಗ್ಗಿ ಕಳ್ಳತನ : ಸಿಸಿಟಿವಿ ಕ್ಯಾಮರಾದ ಡಿವಿಆರ್, ಬೆಲೆಬಾಳುವ ವಸ್ತುಗಳ ಸಹಿತ ಪರಾರಿ

ಇ.ಡಿ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಪ್ರಕರಣ, ನಾಲ್ವರ ಬಂಧನ (ದಕ್ಷಿಣ ಕನ್ನಡ) : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಡಂಗಲ್ಲೂರು ಪೊಲೀಸ್‌ ಠಾಣೆಯ ಎಎಸ್​ಐ ಸೇರಿದಂತೆ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸ್​ ಠಾಣೆ ವಿಶೇಷ ತನಿಖಾ ತಂಡ ಬಂಧಿಸಿದೆ ಎಂದು ಎಸ್​ಪಿ ಯತೀಶ್​ ಎನ್.​ ತಿಳಿಸಿದ್ದರು.

ಕೊಡಂಗಲ್ಲೂರು ಪೊಲೀಸ್‌ ಠಾಣೆ ಎಎಸ್​ಐ ಶಫೀರ್​ ಬಾಬು (48), ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜಿದ್ದೀನ್​ (37), ಬಂಟ್ವಾಳ ನಿವಾಸಿ ಮೊಹಮ್ಮದ್​ ಇಕ್ಬಾಲ್​ (38) ಹಾಗೂ ಮಂಗಳೂರು ಪಡೀಲ್​ ನಿವಾಸಿ ಮೊಹಮ್ಮದ್​ ಅನ್ಸಾರ್ (27)​ ಬಂಧಿತ ನಾಲ್ವರು ಆರೋಪಿಗಳಾಗಿದ್ದಾರೆ.

ತನಿಖಾ ತಂಡವು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಅನಿಲ್​ ಫರ್ನಾಂಡೀಸ್ (49), ಸಚ್ಚಿನ್​ ಟಿ.ಎಸ್. (29), ಹಾಗೂ ಶಬಿನ್​ ಎಸ್​. (27) ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದೆ.​ ಪ್ರಕರಣ ಸಂಬಂಧ ಈವರೆಗೆ ಎಲ್ಲ 7 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.