Walking Mistakes to Avoid: ಪ್ರತಿದಿನ ತಪ್ಪದೇ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಹಲವು ಆರೋಗ್ಯಕ್ಕೆ ಪ್ರಯೋಜನಗಳು ದೊರೆಯುತ್ತವೆ ಎಂದು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಸ್ನಾಯುಗಳು ಬಲಗೊಳ್ಳುವುದರ ಜೊತೆಗೆ ಕ್ಯಾಲೊರಿಗಳನ್ನು ಹಾಗೂ ಕೊಲೆಸ್ಟ್ರಾಲ್ ಬರ್ನ್ ಮಾಡಲು ಸಾಧ್ಯವಾಗುತ್ತದೆ. ಇದು ತೂಕ ನಷ್ಟಕ್ಕೂ ಮುಖ್ಯ ಕಾರಣವಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ನಡೆಯಲು ಪ್ರಾರಂಭಿಸಬಹುದು. ವಾಕಿಂಗ್ ಯಾರಾದರೂ ಮಾಡಬಹುದಾದ ಸುಲಭವಾದ ವ್ಯಾಯಾಮ ಆಗಿದೆ ಎಂದು ತಜ್ಞರು ತಿಳಿಸುತ್ತಾರೆ. ಅನೇಕ ಜನರು ಬೆಳಗ್ಗೆ ಸಮಯದಲ್ಲಿ ವಾಕಿಂಗ್ ಮಾಡುತ್ತಾರೆ. ಇವರಿಗಾಗಿ ತಜ್ಞರು, ಬೆಳಗಿನ ವಾಕಿಂಗ್ ಮಾಡುವಾಗ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡುತ್ತಾರೆ.
ವಾಕಿಂಗ್ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?:
- ಬೆಳಗ್ಗೆ ತುಂಬಾ ವೇಗವಾಗಿ ವಾಕಿಂಗ್ ಮಾಡುವುದರಿಂದ ಸ್ನಾಯು ಸೆಳೆತ ಹಾಗೂ ಕೀಲು ನೋವು ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗಬಹುದು.
- ಇದರಿಂದಲೇ ತಜ್ಞರು, ನಿಧಾನವಾಗಿ ನಡೆಯಲು ಸಲಹೆ ನೀಡುತ್ತಾರೆ. ವಿಶೇಷವಾಗಿ ಮೊದಲ 5 ನಿಮಿಷಗಳ ಕಾಲ ನಿಧಾನವಾಗಿ ಮಾಡುವುದರಿಂದ ಶಕ್ತಿಯನ್ನು ಉತ್ಪಾದಿಸುವ ರಾಸಾಯನಿಕಗಳು ಪ್ರಚೋದಿಸಿ, ವಾಕಿಂಗ್ ಮಾಡಲು ಬೇಕಾದಂತಹ ಶಕ್ತಿಯನ್ನು ಲಭಿಸಲು ಸಾಧ್ಯವಾಗುತ್ತದೆ.
- ವಾರಕ್ಕೊಮ್ಮೆಯಾದರೂ ನಿಮ್ಮ ವೇಗವಾದ ವಾಕಿಂಗ್ ಸಮಯವನ್ನು 5 ನಿಮಿಷಗಳಷ್ಟು ಹೆಚ್ಚಳ ಮಾಡಬೇಕು. ವಯಸ್ಕರು 40 ರಿಂದ 60 ನಿಮಿಷಗಳವರೆಗೆ ವಾಕಿಂಗ್ ಮಾಡಬಹುದು. ಹೀಗೆ ನಡೆಯುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಹಾಗೂ ಆತಂಕ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
- ತಜ್ಞರು 5 ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕಾಗುತ್ತದೆ. ಬಳಿಕ 30 ನಿಮಿಷಗಳವರೆಗೆ ವೇಗವಾಗಿ ವಾಕಿಂಗ್ ಮಾಡಬೇಕು. ನಡೆಯುವಾಗ ವೇಗ ಹೆಚ್ಚಾದಂತೆ ಕ್ಯಾಲೊರಿಗಳು ಬರ್ನ್ ಆಗುತ್ತವೆ. ಇದರ ಪರಿಣಾಮವಾಗಿ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ನಾಯುಗಳಿಗೆ ರಕ್ತ ಹಾಗೂ ಆಮ್ಲಜನಕದ ಪೂರೈಕೆಯ ಪ್ರಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ.
- ನಿತ್ಯ 30 ನಿಮಿಷಗಳವರೆಗೆ ವಾಕಿಂಗ್ ಮಾಡುವುದರಿಂದ ದೈಹಿಕ ಸದೃಢತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಬೆವರಿನ ಮೂಲಕ ರಕ್ತದಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಜೊತೆಗೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
- ಬೆಳಗ್ಗೆ ಸಮಯದಲ್ಲಿ ವಾಕಿಂಗ್ ಮಾಡಲು ಸಾಧ್ಯವಾಗದವರು, ವಾರದಲ್ಲಿ ಕನಿಷ್ಠ 3 ರಿಂದ 4 ದಿನ ವ್ಯಾಯಾಮ ಇಲ್ಲವೇ ವಾಕಿಂಗ್ ಮಾಡಬೇಕು. ಅರ್ಧ ಗಂಟೆ ವಾಕಿಂಗ್ ಮಾಡಲು ಸಾಧ್ಯವಾಗದವರು ತಲಾ 15 ನಿಮಿಷಗಳವರೆಗೆ ಎರಡು ಸ್ಲಾಟ್ ಮಾಡಿಕೊಂಡು ವಾಕಿಂಗ್ ಮಾಡುವುದು ಒಳ್ಳೆಯದು ಎಂದು ತಜ್ಞರು ಸೂಚನೆ ನೀಡುತ್ತಾರೆ.
- ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಹೃದಯ ಸಮಸ್ಯೆಗಳು ಹಾಗೂ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.
- 2017ರಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಜರ್ನಲ್‌ನಲ್ಲಿ (Journal of the American Heart Association) ಪ್ರಕಟವಾದ 'ವಾಕಿಂಗ್ & ಪ್ರಾಥಮಿಕ ತಡೆಗಟ್ಟುವಿಕೆ: ನಿರೀಕ್ಷಿತ ಸಮಕಾಲೀನ ಅಧ್ಯಯನಗಳ ಮೆಟಾ-ವಿಶ್ಲೇಷಣೆ' (Walking and Primary Prevention: A Meta-Analysis of Prospective Cohort Studies) ಎಂಬ ಅಧ್ಯಯನದಲ್ಲಿ ಸ್ಪಷ್ಟವಾಗಿ ತಿಳಿದಿದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.