ETV Bharat / bharat

ಸಂಭಲ್​ನಲ್ಲಿ ರಾಮ ಸೀತೆ ಕೆತ್ತನೆಯ ನಾಣ್ಯಗಳು ಪತ್ತೆ: ಇದರ ಕಾಲಮಾನ ಯಾವುದು ಗೊತ್ತಾ? - LORD RAM SITA INSCRIBED COINS

ಸಂಭಲ್​ ಐತಿಹಾಸಿಕ ನಗರದ ಯಾತ್ರಾ ಸ್ಥಳ ಎಂದೇ ಗುರುತಿಸಿಕೊಂಡಿದೆ. ಇದು ಸತ್ಯ ಯುಗ ಕಾಲದ ಯಾತ್ರಾ ಸ್ಥಳ ಎಂದು ನಂಬಲಾಗಿದೆ.

ASI Team Stumbles Upon Lord Ram, Sita-Inscribed Coins In Sambhal
ಪತ್ತೆಯಾದ ನಾಣ್ಯ (ಈಟಿವಿ ಭಾರತ್​)
author img

By ETV Bharat Karnataka Team

Published : Jan 24, 2025, 2:32 PM IST

ಸಂಭಲ್, ಉತ್ತರಪ್ರದೇಶ​: ಇಲ್ಲಿನ ಅಲಿಪುರ್​ ಗ್ರಾಮದಲ್ಲಿ ಸುಮಾರು 300 ರಿಂದ 400 ವರ್ಷ ಹಳೆಯ ನಾಣ್ಯಗಳು ದೊರೆತಿದ್ದು, ಅದರಲ್ಲಿ ರಾಮ ಮತ್ತು ಸೀತೆಯ ಚಿತ್ರಣ ಕಂಡು ಬಂದಿದೆ ಎಂದು ಸ್ಥಳೀಯರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ ವೇಳೆ ಪೃಥ್ವಿರಾಜ್ ಚೌಹಾಣ್ ಅವರ ಸಮಕಾಲೀನರು ಎಂದು ಪರಿಗಣಿಸಲಾದ ಗುರು ಅಮರ್ ಅವರ ಸಮಾಧಿ ಕೂಡ ದೊರಕಿತ್ತು. ಹಾಗೆಯೇ ಇಲ್ಲಿನ ಐತಿಹಾಸಿಕ ಸ್ಥಳದ ಸಮೀಪ ಬ್ರಿಟಿಷ್​ ಕಾಲದ ನಾಣ್ಯಗಳು ದೊರಕಿದ್ದವು. 1920 ರಿಂದ ಭಾರತೀಯ ಪುರಾತತ್ವ ಇಲಾಖೆ ಇದನ್ನು ರಕ್ಷಣೆ ಮಾಡುತ್ತಿದೆ. ಸಂಭಲ್​ ಐತಿಹಾಸಿಕ ನಗರದ ಯಾತ್ರಾ ಸ್ಥಳ ಎಂದೇ ಗುರುತಿಸಿಕೊಂಡಿದೆ. ಇದು ಸತ್ಯ ಯುಗ ಕಾಲದ ಯಾತ್ರಾ ಸ್ಥಳ ಎಂದು ನಂಬಲಾಗಿದೆ. ಸಂಭಲ್​ ​ ಜಿಲ್ಲಾಡಳಿಕ ಕೂಡ ಈ ಐತಿಹಾಸಿಕ ಪರಂಪರೆಯ ಯಾತ್ರಾ ಸ್ಥಳ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ. ಪುರಾತತ್ವ ಇಲಾಖೆ ಕೂಡ ಇದರ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ.

ಅಮರ್​ಪತಿ ಖೇಡ್​​ ಪರಿಶೀಲನೆ: ಸಂಭಲ್​​ ತೆಹಸಿಲ್​ ಪ್ರದೇಶದ ಅಲಿಪುರ್​ ಗ್ರಾಮಕ್ಕೆ ಪುರಾತತ್ವ ಸರ್ವೇಕ್ಷಣಾ ತಂಡ ಆಗಮಿಸಿದ್ದು, ಅಮರ್​ಪತಿ ಖೇಡ್​ ಪರಿಶೀಲನೆ ನಡೆಸುತ್ತಿದ್ದಾರೆ. 1920ರಿಂದಲೂ ಈ ಸ್ಥಳವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಣೆ ಮಾಡುತ್ತಿದೆ.

ಇಲ್ಲಿ ಕಾಲದಿಂದ ಕಾಲಕ್ಕೆ ನಾಣ್ಯಗಳು ಪತ್ತೆಯಾಗುತ್ತಲೇ ಇವೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ತಿಳಿಸಿದ್ದಾರೆ. ಆದರೆ, ಈ ನಾಣ್ಯಗಳನ್ನು ಒಪ್ಪಿಸಲು ಹಿಂದೇಟು ಹಾಕಿದ್ದರು. ಇದೇ ವೇಳೆ ಇಲ್ಲಿ ನೆರೆದಿದ್ದ ಗ್ರಾಮಸ್ಥರು ಎಸ್‌ಡಿಎಂ ಮುಂದೆ ಅನೇಕ ಪುರಾತನ ನಾಣ್ಯಗಳು ಮತ್ತು ಹೂಜಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ. ಎಸ್​ಡಿಎಂ ಈ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್‌ಡಿಎಂ ವಂದನಾ ಮಿಶ್ರಾ ಮಾತನಾಡಿ, ಸ್ಥಳೀಯರು 300 ರಿಂದ 400 ವರ್ಷಗಳಷ್ಟು ಹಳೆಯ ನಾಣ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಮತ್ತು ಇಲ್ಲಿ ಹಳೆಯ ಗೋರಿಗಳು ಅಸ್ತಿತ್ವದಲ್ಲಿದ್ದವು ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಹಜಹಾನ್‌ ಉರುಸ್: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ

ಇದನ್ನೂ ಓದಿ: ಬೀದರ್ ದರೋಡೆ ಪ್ರಕರಣ: ಬೀದರ್, ಅಫ್ಜಲ್‌ಗಂಜ್‌ನಲ್ಲಿ ಬಳಸಲಾದ ಬೈಕ್ ಪತ್ತೆ!; ದರೋಡೆಕೋರರು ಬಿಹಾರಕ್ಕೆ ಪರಾರಿ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.