ETV Bharat / entertainment

ಚಾಕು ಇರಿತದ ನಂತರ ಮೊದಲ ಬಾರಿಗೆ ಸಮಾರಂಭದಲ್ಲಿ ಕಾಣಿಸಿಕೊಂಡ ನಟ ಸೈಫ್ - SAIF ALI KHAN

ಸೈಫ್ ಅಲಿ ಖಾನ್ ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಕಾಣಿಸಿಕೊಂಡರು.

ಬಾಲಿವುಡ್ ನಟ ಸೈಫ್ ಅಲಿ ಖಾನ್
ಬಾಲಿವುಡ್ ನಟ ಸೈಫ್ ಅಲಿ ಖಾನ್ (IANS)
author img

By ETV Bharat Karnataka Team

Published : Feb 3, 2025, 7:00 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮ್ಮ ಮೇಲೆ ಚಾಕು ಇರಿತ ನಡೆದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸೋಮವಾರ ಮುಂಬೈನ ಜುಹು ಪ್ರದೇಶದ ಪಂಚತಾರಾ ಹೋಟೆಲ್​ನಲ್ಲಿ ಕಾಣಿಸಿಕೊಂಡರು. ಡೆನಿಮ್ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿರುವಂತೆ ಕಾಣಿಸಿದರು.

ನಟ ತನ್ನ ಮುಂಬರುವ ಸ್ಟ್ರೀಮಿಂಗ್ ಶೀರ್ಷಿಕೆ 'ಜ್ಯುವೆಲ್ ಥೀಫ್ - ದಿ ಹೀಸ್ಟ್ ಬಿಗಿನ್ಸ್'ನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅವರು ಜೈದೀಪ್ ಅಹ್ಲಾವತ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದು, ಈ ಸ್ಟ್ರೀಮಿಂಗ್​ನಲ್ಲಿ ಅವರು ಸಣ್ಣ ಪಾತ್ರ ಹೊಂದಿದ್ದಾರೆ ಎನ್ನಲಾಗಿದೆ. ಸೈಫ್ ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದು ನೇರವಾಗಿ ನೆಟ್‌ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಪಠಾಣ್ ಖ್ಯಾತಿಯ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್ ಆನಂದ್ ತಮ್ಮ ಪತ್ನಿ ಮಮತಾ ಆನಂದ್ ಅವರೊಂದಿಗೆ ಮಾರ್ ಫ್ಲಿಕ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜ್ಯುವೆಲ್ ಥೀಫ್-ದಿ ಹೀಸ್ಟ್ ಬಿಗಿನ್ಸ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸೈಫ್, "ಇಲ್ಲಿ ನಿಮ್ಮೆಲ್ಲರ ಮುಂದೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಈ ಚಿತ್ರದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಸಿದ್ಧಾರ್ಥ್ ಮತ್ತು ನಾನು ಈ ಚಿತ್ರದ ಬಗ್ಗೆ ಬಹಳ ಸಮಯದಿಂದ ಚರ್ಚಿಸುತ್ತಿದ್ದೇವೆ. ಹೀಸ್ಟ್ ಚಿತ್ರ ಮತ್ತು ಈ ರೀತಿಯ ಚಲನಚಿತ್ರದಲ್ಲಿ ನಟಿಸುವುದು ನನ್ನ ಬಯಕೆಯಾಗಿದೆ. ನಾನು ಇಷ್ಟೊಂದು ಉತ್ತಮ ಸಹನಟನೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ಸಂಗತಿ. ಇಂಥದೊಂದು ಒಳ್ಳೆಯ ಚಲನಚಿತ್ರದಲ್ಲಿ ನಟಿಸುತ್ತಿರುವುದು ಸಂತೋಷದ ಸಂಗತಿ" ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಸೈಫ್ ಅವರ ಬಾಂದ್ರಾದಲ್ಲಿನ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಮಧ್ಯರಾತ್ರಿ ನಡೆದ ಈ ಘಟನೆಯ ನಂತರ ಸೈಫ್ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ವೈದ್ಯರು ಸೈಫ್ ಅವರ ದೇಹದಲ್ಲಿ ಹೊಕ್ಕಿದ್ದ 2.5 ಇಂಚು ಉದ್ದದ ಚಾಕುವನ್ನು ಹೊರತೆಗೆದಿದ್ದರು. ದುಷ್ಕರ್ಮಿಯ ದಾಳಿಯಿಂದ ಸೈಫ್​ಗೆ ಆರು ಇರಿತದ ಗಾಯಗಳಾಗಿದ್ದು, ಅವುಗಳಲ್ಲಿ ಎರಡು ಬೆನ್ನುಮೂಳೆಗೆ ಹತ್ತಿರವಾಗಿರುವುದರಿಂದ ಗಂಭೀರವಾಗಿದ್ದವು ಎಂದು ಹೇಳಲಾಗಿದೆ.

ಇದನ್ನೂ ಓದಿ: ನಟ ಸೈಫ್ ಚಾಕು ಇರಿತ: ಆರೋಪಿ ಮುಖ - ಸಿಸಿಟಿವಿ ದೃಶ್ಯ ಮ್ಯಾಚ್​

ಇದನ್ನೂ ಓದಿ: ಆದಿಮಾನವನಂತೆ ಮುಂಬೈ ರಸ್ತೆಗಳಲ್ಲಿ ಓಡಾಡಿದ್ದು ನಟ ಅಮೀರ್ ಖಾನ್​ ಅಲ್ಲ! ವೈರಲ್​ ವಿಡಿಯೋ ನೋಡಿದ್ರಾ - AAMIR KHAN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.