ETV Bharat / state

ಗನ್ ತೋರಿಸಿ ಉದ್ಯಮಿಗೆ ಬೆದರಿಕೆ ಆರೋಪ: ಫೈಟರ್ ರವಿ ಬಂಧನ - FIGHTER RAVI

ಗನ್ ತೋರಿಸಿ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದಡಿ ಫೈಟರ್ ರವಿಯನ್ನು ಬಂಧಿಸಲಾಗಿದೆ.

FIGHTER RAVI ARRESTED
ಫೈಟರ್ ರವಿ (ETV Bharat)
author img

By ETV Bharat Karnataka Team

Published : Jan 24, 2025, 1:34 PM IST

Updated : Jan 24, 2025, 1:40 PM IST

ಬೆಂಗಳೂರು : ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಮಾಜಿ ರೌಡಿಶೀಟರ್‌ ಬಿ.ಎಂ.ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಹಾಗೂ ಅವರ ಗನ್ ಮ್ಯಾನ್‌ನನ್ನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮಶೇಖರ್ ಎಂಬ ಉದ್ಯಮಿಗೆ ಗನ್ ತೋರಿಸಿ ಹಲ್ಲೆಗೈದು, ಬೆದರಿಕೆ ಹಾಕಿದ ಆರೋಪದಡಿ ರವಿಯನ್ನ ಬಂಧಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಉದ್ಯಮಿ ಸೋಮಶೇಖರ್ ಅವರು ಶ್ರೀಕಾಂತ್ ಎಂಬಾತನಿಗೆ ಸಾಲದ ರೂಪದಲ್ಲಿ 75 ಲಕ್ಷ ಹಣ ಕೊಟ್ಟಿದ್ದರು. ಹಣ ಮರಳಿ ಪಡೆಯುವ ಸಲುವಾಗಿ ಆಗಾಗ ಶ್ರೀಕಾಂತ್‌ನನ್ನ ಸೋಮಶೇಖರ್ ಭೇಟಿಯಾಗುತ್ತಿದ್ದರು. ಆದರೆ, ಈ ನಡುವೆ ಮಧ್ಯಪ್ರವೇಶಿಸಿದ್ದ ರವಿ, ಶ್ರೀಕಾಂತ್ ಬಳಿ ಹಣ ಕೇಳದಂತೆ ಹಲ್ಲೆಗೈದು, ತಮ್ಮ ಗನ್ ಮ್ಯಾನ್ ಬಳಿಯಿದ್ದ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸದಾಶಿವನಗರ ಠಾಣೆಗೆ ಸೋಮಶೇಖರ್ ದೂರು ನೀಡಿದ್ದರು. ಅದರನ್ವಯ ರವಿ ಅವರನ್ನ ಬಂಧಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಜಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಫೈಟರ್ ರವಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಟಿಕೆಟ್ ಕೈತಪ್ಪಿದ ಬಳಿಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿ, ಪರಾಭವಗೊಂಡಿದ್ದರು.

ಇದನ್ನೂ ಓದಿ: ರೌಡಿಶೀಟರ್ಸ್ ಹೆಸರಿನ ಫ್ಯಾನ್ ಪೇಜ್​ಗಳಿಗೆ ಸಿಸಿಬಿ ಪೊಲೀಸರ ಕೊಕ್ಕೆ - Fan Pages Of Rowdy Sheeters - FAN PAGES OF ROWDY SHEETERS

Last Updated : Jan 24, 2025, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.