ಹೈದರಾಬಾದ್: ರಾತ್ರಿ ಸಮಯದಲ್ಲಿ ಎಲ್ಲಾ ಪ್ರಶಾಂತವಾಗಿದ್ದರೂ ನಾಯಿಗಳು ಯಾಕೆ ಬೊಗಳುತ್ತವೆ ತಿಳಿದಿದೆಯೇ?.. ಕೆಲವೊಮ್ಮೆ ಬೊಗಳುವುದಕ್ಕಿಂತ ನರಿಗಳಂತೆ ಮಧ್ಯರಾತ್ರಿ ಊಳಿಡುತ್ತವೆ. ಇದರ ಹಿಂದಿನ ಕಾರಣಕ್ಕಾಗಿ ಒಂದು ಅಧ್ಯಯನ ಕೂಡ ನಡೆದಿದೆ. ಅದರಲ್ಲಿ ಕಂಡು ಬಂದ ಸತ್ಯ ಹೀಗಿದೆ.
ಶ್ವಾನಗಳ ಮೇಲೆ ಸಂಶೋಧನೆ : ಜನರನ್ನು ಅಥವಾ ಅನುಮಾನಾಸ್ಪದ ಚಲನವಲನಗಳನ್ನು ಕಂಡಾಗ ನಾಯಿಗಳು ಬೊಗಳುತ್ತವೆ. ಸಾಮಾನ್ಯವಾಗಿ ಶ್ವಾನಗಳು ಬೊಗಳುವಾಗ ಯಾರು ತಲೆ ಕೆಡಿಸುಕೊಳ್ಳುವುದಿಲ್ಲ. ಆದರೆ ನಿರಂತರ ಊಳಿಡಲು ಶುರು ಮಾಡಿದರೆ ಇದು ಕೆಟ್ಟ ಸಂದೇಶ. ನಾಯಿಯ ಮಾಲೀಕನಿಗೆ ಅಪಾಯವಿದೆ, ಇಲ್ಲ ಯಾರಾದರು ಸಾಯುತ್ತಾರೆ ಎಂಬ ನಂಬಿಕೆ ಇದೆ. ನಾಯಿಗಳು ನಮ್ಮ ಸುತ್ತಲಿನ ಆತ್ಮಗಳನ್ನು ನೋಡುತ್ತವೆ ಎಂದು ಪೂರ್ವಜರು ಹೇಳುತ್ತಾರೆ. ಅವು ನಿಜವಾಗಿಯೂ ಆತ್ಮಗಳನ್ನು ನೋಡಬಹುದೇ? ಈ ವೇಳೆ ಅವುಗಳು ಭಯಗೊಂಡು ಕೂಗುತ್ತವೆಯೇ? ಇದು ಇನ್ನೂ ಸಾಬೀತಾಗದ ಪ್ರಶ್ನೆಯಾಗಿದೆ.
ಶ್ರವಣ ಶಕ್ತಿಯಲ್ಲಿ ಮನುಷ್ಯರನ್ನು ಮೀರಿಸುವ ನಾಯಿಗಳು : ನಾಯಿಗಳಿಗೆ ಮನುಷ್ಯರಿಗಿಂತ ಉತ್ತಮ ಶ್ರವಣ ಶಕ್ತಿ ಇದೆ. ಎಷ್ಟರ ಮಟ್ಟಿಗೆ ಅಂದರೆ ನಾಯಿಗಳಿಗೆ ಬಾಹ್ಯಾಕಾಶದಲ್ಲಿನ ಇನ್ಫ್ರಾಸಾನಿಕ್ ಶಬ್ಧಗಳು ಸಹ ಕೇಳಬಹುದು. ನಾಯಿಗಳು 20 Hz ಗಿಂತ ಕಡಿಮೆ ಇರುವ ಶಬ್ಧಗಳನ್ನು ಸಹ ಗ್ರಹಿಸಬಲ್ಲವು ಎಂದು ಹೇಳಲಾಗುತ್ತದೆ. ಅದು ಮನುಷ್ಯರಿಗೆ ಕೇಳಿಸುವುದಿಲ್ಲ. ಹೀಗಾಗಿ ಅವು ನಮಗೆ ಕೇಳದ ಶಬ್ಧಗಳಿಗೆ ಪ್ರತಿಕ್ರಿಯಿಸುತ್ತವೆ. ಭೂಕಂಪವಾದಾಗಲೂ ನಾಯಿಗಳು ಮೊದಲೇ ಬೊಬ್ಬೆ ಹೊಡೆಯಲು ಇದೇ ಕಾರಣ. 20 Hz ಗಿಂತ ಕಡಿಮೆ ಇರುವ ಶಬ್ಧಕ್ಕೆ ಅವುಗಳು ಪ್ರತಿಕ್ರಿಯಿಸುತ್ತವೆ.
ಶ್ವಾನಗಳು ಬೊಗಳುವಿಕೆಯ ಗುಣಲಕ್ಷಣವನ್ನು ಆನುವಂಶಿಕವಾಗಿ ಪಡೆದಿವೆ. ಅವು ಮನುಷ್ಯರಿಗಿಂತ ಉತ್ತಮವಾದ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವರು ತಮ್ಮ ಸುತ್ತಲಿನ ವಾಸನೆಯನ್ನು ಪತ್ತೆಹಚ್ಚುವುದಲ್ಲದೆ ಮತ್ತು ಅದಕ್ಕೆ ಅನುಗುಣವಾಗಿ ವರ್ತಿಸುತ್ತವೆ. ವಾಸನೆ ಗ್ರಹಿಸುವ ಶಕ್ತಿಯಿಂದ ಪೊಲೀಸ್ ಇಲಾಖೆ ಇತಿಹಾಸದಲ್ಲಿ ಅನೇಕ ಕೇಸ್ಗಳನ್ನು ನಾಯಿಗಳು ಪತ್ತೆ ಹಚ್ಚಿವೆ. ನಾಯಿಗಳು ಬೊಗಳುವ ಮೂಲಕ ತೋಳಗಳಂತೆ ತಮ್ಮ ಗುಂಪಿನೊಂದಿಗೆ ಸಂಪರ್ಕವನ್ನು ನಿರ್ವಹಿಸುತ್ತವೆ. ಸಂಶೋಧನೆಯ ಪ್ರಕಾರ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅಥವಾ ಇತರ ನಾಯಿಗಳೊಂದಿಗೆ ಸಂವಹನ ನಡೆಸಲು ತಮ್ಮದೇ ಆದ ರೀತಿಯಲ್ಲಿ ಕೂಗುತ್ತವೆ.
ವಿಜ್ಞಾನ ಹೇಳುವುದೇನು : HUFT(Heads up for tail) ಸಂಪಾದಕೀಯವು ರಾತ್ರಿಯಲ್ಲಿ ನಾಯಿಗಳು ಏಕೆ ಊಳಿಡುತ್ತವೆ ಎಂಬುದರ ಕುರಿತು ಲೇಖನವನ್ನು ಪ್ರಕಟಿಸಿದೆ. ಮನುಷ್ಯರಂತೆ, ನಾಯಿಗಳು ಸಾಮಾಜಿಕ ಜೀವಿಗಳು. ನಾಯಿಗಳು ಒಂಟಿಯಾಗಿರುವುದಕ್ಕಿಂತ ಹೆಚ್ಚಾಗಿ ಇತರ ನಾಯಿಗಳು ಅಥವಾ ಅವುಗಳ ಮಾಲೀಕರೊಂದಿಗೆ ಇರಲು ಬಯಸುತ್ತವೆ. ಅವು ಅನಾರೋಗ್ಯದಿಂದ ಬಳಲುತ್ತಿರುವಾಗ, ಅವರ ದೇಹದಲ್ಲಿ ಸಮಸ್ಯೆಗಳಿರುವಾಗ, ನೋವು ಉಂಟಾದಾಗಲೂ ಬೊಗಳುವ ಸಾಧ್ಯತೆಯಿದೆ.
ನಾಯಿಗಳು ತಮ್ಮ ಸುತ್ತಲಿನ ಪರಿಸರದ ಬದಲಾವಣೆಗಳಿಗೆ ಸೂಕ್ಷ್ಮವಾಗಿರುತ್ತವೆ. ವಾತಾವರಣದಲ್ಲಿನ ಬದಲಾವಣೆಗಳು ಮತ್ತು ಮನೆಯಲ್ಲಿನ ಬದಲಾವಣೆಗಳು ನಾಯಿಗಳು ಬೊಗಳಲು ಕಾರಣವೆಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಇನ್ನು ನಿಮ್ಮ ಮನೆಯ ಸಾಕು ನಾಯಿ ಹೀಗೆ ರಾತ್ರಿಯಲ್ಲಿ ಕೂಗುತ್ತಿದ್ದರೆ ಮೊದಲು ಅದರ ನಡವಳಿಕೆಯನ್ನು ಗಮನಿಸಿ. ನಾಯಿಯು ಹಸಿದಿದೆಯೇ ಅಥವಾ ಅನಾರೋಗ್ಯದಿಂದ ಬಳಲುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಸರಿಯಾದ ಆಹಾರದ ಜೊತೆಗೆ ನಾಯಿಗಳಿಗೂ ಸಾಕಷ್ಟು ವ್ಯಾಯಾಮ ಬೇಕು. ಪೋಷಕರು ತಮ್ಮ ನಾಯಿಗಳನ್ನು ನಿಯಮಿತವಾಗಿ ತಪಾಸಣೆಗಾಗಿ ಪಶುವೈದ್ಯರ ಬಳಿಗೆ ಕರೆದೊಯ್ಯಬೇಕು.
ಇದನ್ನೂ ಓದಿ: ಅಂತರಿಕ್ಷದಲ್ಲಿ ಗಂಡು ಹೆಣ್ಣು ಸೇರಬಹುದೇ?; ಅಲ್ಲಿ ಜನಿಸಿದ ಮಕ್ಕಳು ಹೇಗಿರುತ್ತವೇ?: ಸಂಶೋಧಕರು ಹೇಳುವುದೇನು?