ಕರ್ನಾಟಕ

karnataka

ETV Bharat / bharat

ಭದ್ರತಾ ಪಡೆಗಳು, ನಕ್ಸಲರ ನಡುವೆ ಗುಂಡಿನ ಚಕಮಕಿ: ನಾಲ್ವರು ಮಾವೋಯಿಸ್ಟ್​​ಗಳ ಹತ್ಯೆ, ಇಬ್ಬರಿಗೆ ಗಾಯ, ಓರ್ವ ಮಹಿಳಾ ನಕ್ಸಲೈಟ್ ಅರೆಸ್ಟ್ - Police Naxalite encounter - POLICE NAXALITE ENCOUNTER

Police Naxalite encounter: ಚೈಬಾಸಾದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಹಲವು ನಕ್ಸಲೀಯರು ಗಾಯಗೊಂಡಿದ್ದಾರೆ.

NAXALITES WERE KILLED IN ENCOUNTER  CHAIBASA  FOUR NAXALITES KILLED IN CHAIBASA  Police Naxalite encounter
ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿ ಚಕಮಕಿ: ನಾಲ್ವರು ನಕ್ಸಲೀಯರು ಹತ್ಯೆ (ETV Bharat)

By ETV Bharat Karnataka Team

Published : Jun 17, 2024, 10:20 AM IST

Updated : Jun 17, 2024, 10:36 AM IST

ಚೈಬಾಸಾ (ಜಾರ್ಖಂಡ್‌):ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗುವಾ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಸೋಮವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಿಗೆ ಭಾರೀ ಆಘಾತ ಉಂಟಾಗಿದೆ. ಈ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಹತ್ಯೆ ಮಾಡಿವೆ. ಘಟನಾ ಸ್ಥಳದಿಂದ ನಕ್ಸಲರ ಶವಗಳ ಜೊತೆಗೆ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಹಿತಿ ಪ್ರಕಾರ, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಅಷ್ಟರಲ್ಲಿ ಹೊಂಚು ಹಾಕಿ ಕುಳಿತಿದ್ದ ನಕ್ಸಲರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾರೆ. ಪ್ರತಿದಾಳಿ ನಡೆಸಿದ ಸೈನಿಕರು ನಾಲ್ವರು ನಕ್ಸಲರನ್ನು ಕೊಂದು ಹಾಕಿದ್ದಾರೆ. ಸದ್ಯ ಈ ಘಟನಾ ಸ್ಥಳದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ನಕ್ಸಲರು ಗುಂಡು ಹಾರಿಸಿದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?: ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಈ ಎನ್‌ಕೌಂಟರ್ ಅನ್ನು ಖಚಿತಪಡಿಸಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ.

ನಾಲ್ವರು ನಕ್ಸಲರ ಹತ್ಯೆ, ಇಬ್ಬರಿಗೆ ಗಾಯ: ಹತರಾದ ನಕ್ಸಲರಲ್ಲಿ ಝೋನಲ್ ಕಮಾಂಡರ್, ಸಬ್ ಝೋನಲ್ ಕಮಾಂಡರ್, ಏರಿಯಾ ಕಮಾಂಡರ್, ಓರ್ವ ಮಹಿಳೆ ನಕ್ಸಲೈಟ್ ಸೇರಿದ್ದಾರೆ. ಪ್ರದೇಶದ ಕಮಾಂಡರ್ ಮತ್ತು ಹಾರ್ಡ್‌ಕೋರ್ ಮಹಿಳಾ ನಕ್ಸಲೈಟ್ ಸೇರಿದಂತೆ ಇಬ್ಬರು ನಕ್ಸಲರು ಗಾಯಗೊಂಡಿದ್ದಾರೆ ಎಂಬುದು ತಿಳಿದಿದೆ. ಜೊತೆಗೆ ಓರ್ವ ಮಹಿಳಾ ನಕ್ಸಲೈಟ್ ಅನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಗುಂಡಿನ ಸದ್ದು: ಉಗ್ರರಿಗಾಗಿ ಭದ್ರತಾ ಪಡೆಗಳಿಂದ ತೀವ್ರ ಶೋಧ - search operation by security forces

Last Updated : Jun 17, 2024, 10:36 AM IST

ABOUT THE AUTHOR

...view details