ಪ್ರಯಾಗ್ರಾಜ್(ಉತ್ತರ ಪ್ರದೇಶ): ಇಂದು ಮಾಘಿ ಪೂರ್ಣಿಮೆ ಹಿನ್ನೆಲೆ ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ ಸ್ನಾನ ನಡೆಯಲಿದ್ದು ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಲಕ್ಷಾಂತರ ಭಕ್ತರು ಇಂದು ಪ್ರಯಾಗ್ರಾಜ್ನಲ್ಲಿ ಸೇರುವ ನಿರೀಕ್ಷೆಯಿದೆ. ಭಕ್ತರ ಸುರಕ್ಷತೆಗಾಗಿ ಒಟ್ಟು 133 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಮಹಾಕುಂಭನಗರದ 40ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಎಲ್ಲ ಹೈಟೆಕ್ ವ್ಯವಸ್ಥೆಗಳನ್ನು ಮಾಡಿದೆ. ಮಹಾಕುಂಭನಗರದಲ್ಲಿ 2,000 ವೈದ್ಯಕೀಯ ಪಡೆಗಳು ಮತ್ತು ಸ್ವರೂಪರಾಣಿ ನೆಹರು ಆಸ್ಪತ್ರೆಯಲ್ಲಿ 700 ವೈದ್ಯಕೀಯ ತಂಡ ಹೈ ಅಲರ್ಟ್ ಮೋಡ್‌ನಲ್ಲಿವೆ. ಭಾರೀ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ವಾಹನ ನಿಲುಗಡೆ ವಲಯವನ್ನು ಘೋಷಿಸಿದ್ದು, ತುರ್ತು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ.
ಸಹಾಯಕ್ಕೆ ಇಲ್ಲಿಗೆ ಭೇಟಿ ನೀಡಿ: ಹಾಗೇ ಇಂದು ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ಭಕ್ತರು ಮಾರ್ಗ ತಪ್ಪಿ ಅಡ್ಡಾ -ದಿಡ್ಡಿ ಹೋಗುವುದನ್ನು ತಪ್ಪಿಸಲು ವಿಶೇಷ ಕಾಳಜಿ ವಹಿಸಲಾಗುವುದು. ಹಾಗೂ ಈ ಸಮಯದಲ್ಲಿ ಯಾವುದೇ ರಸ್ತೆಗಳಲ್ಲಿ ವಾಹನ ದಟ್ಟಣೆ ಇರುವುದಿಲ್ಲ. ಅಧಿಕೃತ ಮಾಹಿತಿಯನ್ನು ಪಡೆಯಲು ಜನರು ಯುಪಿ ಪೊಲೀಸರ ಅಧಿಕೃತ ಖಾತೆಯನ್ನು Twitter ಮತ್ತು Facebook ನಲ್ಲಿ ಅನುಸರಿಸಬೇಕು.
#WATCH | Lakhs of devotees attend Mahakumbh in Prayagraj on Maghi Purnima pic.twitter.com/2umXTSEDFR
— ANI (@ANI) February 12, 2025
ಸುರಕ್ಷತೆಗೆ ಮೊದಲ ಆದ್ಯತೆ ಎಂದ ಸರ್ಕಾರ: AI-ಚಾಲಿತ CCTV ಕ್ಯಾಮೆರಾಗಳು, ಡ್ರೋನ್ ಕಣ್ಗಾವಲು ಇದ್ದು ಯಾತ್ರಾರ್ಥಿಗಳ ಸುರಕ್ಷಿತ ಚಲನೆಯನ್ನು ಖಾತ್ರಿಪಡಿಸಲಾಗುತ್ತದೆ. ಆಡಳಿತವು ಸ್ನಾನದ ಘಾಟ್‌ಗಳಿಗೆ ಪ್ರವೇಶವನ್ನು ಸುವ್ಯವಸ್ಥಿತಗೊಳಿಸಲು, ಜನಸಂದಣಿಯನ್ನು ಕಡಿಮೆ ಮಾಡಲು ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲ ಭಕ್ತರಿಗಾಗಿ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ.
#WATCH | #MahaKumbh2025 | Prayagraj, UP: Massive crowd throng Triveni Sangam, to take holy dip, on the occasion of #MaghPurnima
— ANI (@ANI) February 12, 2025
More than 46.25 crore devotees have taken dip so far
(Drone visuals) pic.twitter.com/jWxAp30JI2
50 ಕೋಟಿ ಭಕ್ತರಿಂದ ಪುಣ್ಯ ಸ್ನಾನದ ನಿರೀಕ್ಷೆ: ಇನ್ನು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವವರ ಸಂಖ್ಯೆ 500 ಮಿಲಿಯನ್‌ಗಿಂತಲೂ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ಜನವರಿ 13ರಂದು ಆರಂಭವಾದ ಮಹಾಕುಂಭ ಫೆಬ್ರವರಿ 26ರವರೆಗೆ ನಡೆಯಲಿದೆ. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಕೊನೆಯ ಮಹತ್ವದ ಸ್ನಾನ ನಡೆಯಲಿದೆ. 45 ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ 45 ಕೋಟಿಗೆ ತಲುಪುತ್ತದೆ ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿತ್ತು. ಆದರೆ ಸಂಖ್ಯೆ ಒಂದು ತಿಂಗಳಲ್ಲೇ ಸಾಧಿಸಿದೆ. ಮಹಾಕುಂಭ ಮುಕ್ತಾಯಕ್ಕೆ ಇನ್ನೂ 14 ದಿನಗಳು ಉಳಿದಿವೆ.
#WATCH | 'Pushp varsha' or showering of flower petals being done on devotees and ascetics as they take holy dip in Sangam waters on the auspicious occasion of Maghi Purnima during the ongoing #MahaKumbh2025 in Prayagraj. #KumbhOfTogetherness pic.twitter.com/FC1C2uetnb
— ANI (@ANI) February 12, 2025
ಫೆಬ್ರವರಿ 26 ರಂದು ಕುಂಭ ಮೇಳಕ್ಕೆ ತೆರೆ ಬೀಳಲಿದೆ. ಹೀಗಾಗಿ ಮಹಾಕುಂಭವನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಪ್ರಯಾಗರಾಜ್ ಗೆ ದಾಂಗುಡಿ ಇಡುತ್ತಿದ್ದಾರೆ. ಹೀಗಾಗಿ ಪ್ರಯಾಗರಾಜ್ ನಲ್ಲಿ ಕಿಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಜಾಮ್ ನಿರ್ವಹಣೆ ಮಾಡಲು ಯುಪಿ ಪೊಲೀಸರು ಸಾಕುಬೇಕಾಗಿ ಹೋಗ್ತಿದ್ದಾರೆ.
#WATCH | Prayagraj | Sea of pilgrims continues to converge at #MahaKumbh2025, the meeting point of spirituality and culture pic.twitter.com/E7nRnldwwv
— ANI (@ANI) February 12, 2025
ಇದನ್ನೂ ಓದಿ: ಮಹಾ ಕುಂಭಮೇಳ: 30 ದಿನದಲ್ಲಿ ದಾಖಲೆಯ 45 ಕೋಟಿಗೂ ಹೆಚ್ಚು ಜನರಿಂದ ಪುಣ್ಯ ಸ್ನಾನ