ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ: ಭಾಗಶಃ ಪ್ರತಿಭಟನೆ ನಿಲ್ಲಿಸಿದ ಕಿರಿಯ ವೈದ್ಯರು, ನಾಳೆಯಿಂದ ತುರ್ತು ಸೇವೆಗಳಿಗೆ ಹಾಜರು - Kolkata Rape Murder Case - KOLKATA RAPE MURDER CASE

ಪಶ್ಚಿಮ ಬಂಗಾಳದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ತರಬೇತಿ ನಿರತ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಭೀಕರ ಕೊಲೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ಕಳೆದ 41 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ವೈದ್ಯರು ಪ್ರತಿಭಟನೆಯನ್ನು ಭಾಗಶಃ ನಿಲ್ಲಿಸಲು ತೀರ್ಮಾನಿಸಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯರಿಂದ ಪ್ರತಿಭಟನೆ
ಕೋಲ್ಕತ್ತಾದಲ್ಲಿ ವೈದ್ಯರಿಂದ ಪ್ರತಿಭಟನೆ (IANS)

By ETV Bharat Karnataka Team

Published : Sep 20, 2024, 7:26 AM IST

ಕೋಲ್ಕತ್ತಾ: ಇಲ್ಲಿನ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ತರಬೇತಿನಿರತ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗಿಳಿದಿದ್ದ ಕಿರಿಯ ವೈದ್ಯರು 41 ದಿನಗಳ ಬಳಿಕ ಪ್ರತಿಭಟನೆಯನ್ನು ಭಾಗಶಃ ನಿಲ್ಲಿಸಿದ್ದಾರೆ. ಶುಕ್ರವಾರ ಸ್ವಾಸ್ಥ್ಯ ಭವನದಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಿದ ಅವರು, ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗಲು ತೀರ್ಮಾನಿಸಿದರು. ಹೀಗಾಗಿ ಶನಿವಾರದಿಂದ (ನಾಳೆ) ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳ ವಿಭಾಗಗಳಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಭೀಕರವಾಗಿ ಕೊಲೆಗೀಡಾದ ವೈದ್ಯೆಯ ಸ್ಮರಣಾರ್ಥ ಶುಕ್ರವಾರದಿಂದ ರಾಜ್ಯದ ಪ್ರಹಾಹಪೀಡಿತ ಪ್ರದೇಶಗಳಲ್ಲಿ 'ಅಭಯ ಮೆಡಿಕಲ್ ಶಿಬಿರ'ಗಳನ್ನು ನಿರ್ಮಿಸಲಾಗುವುದು ಎಂದು ವೈದ್ಯರು ಈ ಸಂದರ್ಭದಲ್ಲಿ ಪ್ರಕಟಿಸಿದರು.

ಸ್ವಾಸ್ಥ್ಯ ಭವನದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಮುನ್ನ, ಇಂದು ಸಂಜೆ (ಶುಕ್ರವಾರ) 3 ಗಂಟೆಗೆ ನಗರದಲ್ಲಿರುವ ಸಿಬಿಐ ಕಚೇರಿಗೆ ಜಾಥಾ ಮೂಲಕ ತೆರಳಿ, ಪ್ರಕರಣದ ತನಿಖೆಯ ವೇಗ ಹೆಚ್ಚಿಸಿ ಶೀಘ್ರ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ನೀಡಲಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಕುರಿತಾಗಿಯೂ ಕಿರಿಯ ವೈದ್ಯರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಶನಿವಾರದಿಂದ ತುರ್ತು ಮತ್ತು ಅವಶ್ಯಕ ವೈದ್ಯಕೀಯ ಸೇವೆಗಳಿಗೆ ಹಾಜರಾಗುತ್ತೇವೆ ಎಂದು ಪ್ರತಿಭಟನಾನಿರ ವೈದ್ಯರು ಗುರುವಾರ ತಮ್ಮ ಸಭೆಯ ಬಳಿಕ ತಿಳಿಸಿದರು.

"ನಾವು ಹೊರರೋಗಿಗಳ ವಿಭಾಗದಲ್ಲಿ (OPD) ಮಾತ್ರ ಕೆಲಸ ಮಾಡುತ್ತೇವೆ. ತುರ್ತು ಮತ್ತು ಅವಶ್ಯಕ ಸೇವೆಗಳ ವಿಭಾಗಗಳಲ್ಲಿ ಭಾಗಶ: ಕೆಲಸ ಮಾಡುತ್ತೇವೆ" ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, "ಸರ್ಕಾರ ನಮಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಒಂದು ವಾರ ಕಾಯುತ್ತೇವೆ. ಅದರ ನಂತರವೇ ಪೂರ್ಣ ಪ್ರಮಾಣದಲ್ಲಿ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗುತ್ತೇವೆ" ಎಂದು ಹೇಳಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೇಜ್ ಪಂತ್ ಅವರು ಬುಧವಾರ ಕಿರಿಯ ವೈದ್ಯರು ಹಾಗು ಟಾಸ್ಕ್‌ ಫೋರ್ಸ್‌ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವೈದ್ಯರ ರಕ್ಷಣೆ, ಭದ್ರತೆ ಹಾಗು ವೈದ್ಯಕೀಯ ಸಿಬ್ಬಂದಿ ಯಾವುದೇ ಅಡ್ಡಿಯಿಲ್ಲದೆ ಕಾರ್ಯನಿರ್ವಹಿಸಲು ಸೂಕ್ತ ವಾತಾವರಣ ಕಲ್ಪಿಸಲು ಕ್ರಮ ಕೈಗೊಳ್ಳುವ ಕುರಿತ ನಿರ್ದೇಶನಗಳ ಪಟ್ಟಿ ಬಿಡುಗಡೆಗೊಳಿಸಿದ್ದರು. ಅಷ್ಟೇ ಅಲ್ಲದೇ, ಇವುಗಳನ್ನು ತಕ್ಷಣವೇ ಜಾರಿಗೆ ತರುವುದಾಗಿಯೂ ತಿಳಿಸಿದ್ದರು. ಇದಾದ ನಂತರ ಪ್ರತಿಭಟನಾನಿರತ ವೈದ್ಯರು ಮನಸ್ಸು ಬದಲಾಯಿಸಿ ಪ್ರತಿಭಟನೆಯನ್ನು ಭಾಗಶಃ ನಿಲ್ಲಿಸಲು ಮುಂದಾಗಿದ್ದಾರೆ ಎಂಬುದು ಗಮನಾರ್ಹ.

"ಆರ್.ಜಿ.ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಅಧಿಕಾರಿಯ ಬಂಧನ ನಮ್ಮ ಚಳುವಳಿಗೆ ಸಿಕ್ಕ ಪ್ರತಿಫಲ. ಹೀಗಾಗಿ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಅವಶ್ಯಕ ಸೇವೆಗಳಲ್ಲಿ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದ್ದೇವೆ. ಆದರೆ ನಮ್ಮ ಹೋರಾಟ ಮುಂದುವರೆಯುವುದು" ಎಂದು ಪ್ರತಿಭಟನಾನಿರತ ವೈದ್ಯೆ ಅಂಕಿತಾ ಮಹತೋ ಹೇಳಿದರು.

ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿರುವುದು ಎನ್‌ಡಿಡಿಬಿ ವರದಿಯಿಂದ ದೃಢ: ಟಿಡಿಪಿ ಆರೋಪ - Animal Fat In Tirupati Laddu

ABOUT THE AUTHOR

...view details