ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಮುಂದುವರಿದ ಮಾಲಿನ್ಯ: ಶೇ 50ರಷ್ಟು ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್​

ದೆಹಲಿಯ ಶೇ 50ರಷ್ಟು ಸರ್ಕಾರಿ ನೌಕರರು ವರ್ಕ್ ಫ್ರಂ ಹೋಮ್ ಮಾದರಿಯಲ್ಲಿ ಕೆಲಸ ಮಾಡಲಿದ್ದಾರೆ.

ದೆಹಲಿಯಲ್ಲಿ ಮುಂದುವರಿದ ಮಾಲಿನ್ಯ
ದೆಹಲಿಯಲ್ಲಿ ಮುಂದುವರಿದ ಮಾಲಿನ್ಯ (IANS)

By ANI

Published : 4 hours ago

ನವದೆಹಲಿ: ದೆಹಲಿಯ ಸರ್ಕಾರಿ ಕಚೇರಿಗಳ ಶೇ 50ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಮ್ (ಮನೆಯಿಂದ ಕೆಲಸ) ಮಾದರಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ದೆಹಲಿ ಪರಿಸರ ಸಚಿವ ಮತ್ತು ಎಎಪಿ ಮುಖಂಡ ಗೋಪಾಲ್ ರಾಯ್ ಬುಧವಾರ ಪ್ರಕಟಿಸಿದ್ದಾರೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಗೋಪಾಲ್ ರಾಯ್, "ಮಾಲಿನ್ಯವನ್ನು ಕಡಿಮೆ ಮಾಡಲು, ದೆಹಲಿ ಸರ್ಕಾರವು ಸರ್ಕಾರಿ ಕಚೇರಿಗಳ ನೌಕರರಿಗೆ ವರ್ಕ್ ಫ್ರಂ ಹೋಮ್ ನೀಡಲು ನಿರ್ಧರಿಸಿದೆ. ಶೇ 50 ರಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲಿದ್ದಾರೆ. ಈ ಕ್ರಮದ ಅನುಷ್ಠಾನಕ್ಕಾಗಿ ಇಂದು ಸಚಿವಾಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು" ಎಂದು ಬರೆದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಬುಧವಾರ ಬೆಳಿಗ್ಗೆ 'ತೀವ್ರ ಕಳಪೆ' ಹಂತಕ್ಕೆ ತಲುಪಿದೆ. ನಗರದ ಕೆಲ ಭಾಗಗಳನ್ನು ತೆಳುವಾದ ಹೊಗೆ ಆವರಿಸಿದ್ದು, ಗೋಚರತೆ ಕಡಿಮೆಯಾಗಿದೆ.

ದೆಹಲಿ ವಾಯು ಗುಣಮಟ್ಟ ಕಳಪೆಯಲ್ಲಿ ಕಳಪೆ, ಎಕ್ಯೂಐ 424: ಗಾಳಿಯ ಗುಣಮಟ್ಟ ಸೂಚ್ಯಂಕ ಮಾಪನವು (ಎಕ್ಯೂಐ) ತೀವ್ರ ಕಳಪೆ ಹಂತಕ್ಕೆ ತಲುಪಿದೆ. ಕಳೆದ ಎರಡು ದಿನಗಳಿಂದ ವಾಯು ಗುಣಮಟ್ಟ ಸೂಚ್ಯಂಕವು 'ತೀವ್ರ ಕಳಪೆ ಪ್ಲಸ್' ವಿಭಾಗದಲ್ಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ 9 ಗಂಟೆಯ ವೇಳೆಗೆ 424 ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದಾಖಲಾಗಿದೆ.

ಇದಕ್ಕೂ ಮುನ್ನ ಮಂಗಳವಾರ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದ ಗೋಪಾಲ್ ರಾಯ್, ಮಾಲಿನ್ಯ ತಡೆಯ ತುರ್ತು ಕ್ರಮವಾಗಿ ದೆಹಲಿಯಲ್ಲಿ ಮೋಡ ಬಿತ್ತನೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಇದಕ್ಕಾಗಿ ದೆಹಲಿ ಸರ್ಕಾರ, ಐಐಟಿ ಕಾನ್ಪುರ ಮತ್ತು ಡಿಜಿಸಿಎ, ಗೃಹ ಸಚಿವಾಲಯ (ಎಂಎಚ್ಎ), ರಕ್ಷಣಾ ಸಚಿವಾಲಯ ಮುಂತಾದ ಇತರ ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳೊಂದಿಗೆ ತಕ್ಷಣ ತುರ್ತು ಸಭೆ ಕರೆಯುವಂತೆ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಕಳೆದ ಹಲವಾರು ದಿನಗಳಿಂದ "ತೀವ್ರ ಕಳಪೆ" ವಿಭಾಗದಲ್ಲಿಯೇ ಮುಂದುವರೆದಿದೆ. ಪಿಎಂ 2.5 ಸಾಂದ್ರತೆಯು 400 ಮಿಗ್ರಾಂ/ಮೀ 3 ದಾಟಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಸುರಕ್ಷಿತ ಮಿತಿಯಾದ 15 ಮಿಗ್ರಾಂ/ಮೀ 3 ಅನ್ನು ಮೀರಿದೆ.

ಇದನ್ನೂ ಓದಿ:ರಾಜಸ್ಥಾನದ 26 ಜಿಲ್ಲೆಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ: ಕೆಲವೆಡೆ ಶಾಲೆಗಳಿಗೆ ರಜೆ

ABOUT THE AUTHOR

...view details