ETV Bharat / international

ಅಮೆರಿಕದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಮೇಲೆ ಹರಿದ ವಾಹನ: 15 ಸಾವು, ಉಗ್ರರ ದಾಳಿ ಶಂಕೆ - NEW ORLEANS NEW YEAR TRAGEDY

ಜನರ ಮೇಲೆ ನುಗ್ಗಿದ ವಾಹನದ ಮೇಲೆ ಇಸ್ಲಾಮಿಕ್​ ಸ್ಟೇಟ್​(IS) ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು, ಎಫ್​ಬಿಐ ತನಿಖೆ ಕೈಗೊಂಡಿದೆ.

vehicle-drives-into-crowd-during-new-orleans-new-years-eve-celebration
ಘಟನಾ ಸ್ಥಳ (AP)
author img

By ANI

Published : Jan 2, 2025, 10:11 AM IST

Updated : Jan 2, 2025, 10:45 AM IST

ನ್ಯೂ ಆರ್ಲಿನ್ಸ್​(ಅಮೆರಿಕ): ಇಲ್ಲಿನ ಬೌರ್ಬನ್​​​ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದು 15 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿವಾಹಿನಿ ಸಿಎನ್​ಎನ್​ ವರದಿ ಮಾಡಿದೆ.

ಜನರ ಮೇಲೆ ನುಗ್ಗಿದ ವಾಹನದ ಮೇಲೆ ಇಸ್ಲಾಮಿಕ್​ ಸ್ಟೇಟ್(ಐಎಸ್)​ ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು, ಎಫ್​ಬಿಐ ತನಿಖೆ ಚುರುಕುಗೊಳಿಸಿದೆ. ಘಟನೆಯ ಹಿಂದೆ ಯಾವುದಾದರೂ ಭಯೋತ್ಪಾದಕ ಗುಂಪಿನ ಕೈವಾಡವಿದೆಯೇ ಎಂಬ ಕುರಿತು ತನಿಖೆ ತೀವ್ರಗೊಳಿಸಿದೆ.

US: 10 killed, 30 injured after vehicle drives into crowd in New Orleans
ಜನರ ಮೇಲೆ ನುಗ್ಗಿದ ಟ್ರಕ್​ (AP)

ಇದುವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಸುಧಾರಿತ ಸಾಧನ, ಕಂಟ್ರಿ ಬಾಂಬ್‌ಗಳು ವಾಹನದಲ್ಲಿ ಪತ್ತೆಯಾಗಿವೆ. ವಾಹನದಲ್ಲಿ ಚಾಲಕ ಮಾತ್ರ ಇದ್ದ ಎಂದು ಎಫ್​ಬಿಐ ಮಾಹಿತಿ ನೀಡಿದೆ.

ಫ್ರೆಂಚ್ ಕ್ವಾರ್ಟನ್​ನ ಆರ್ಲಿನ್ಸ್​​ನ ಐತಿಹಾಸಿಕ ಕೇಂದ್ರದ ಸಮೀಪ ಹೊಸ ವರ್ಷ 2025ರ ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಗೆ ಘಟನೆ ನಡೆದಿದೆ. ಓಪನ್​ ಏರ್​ ಕನ್ಸರ್ಟ್​ನಲ್ಲಿ ಸೇರಿದ್ದ ಜನರ ಮೇಲೆ ವಾಹನ ಹರಿದಿದೆ. 'ಆಲ್‌ಸ್ಟೇಟ್ ಶುಗರ್ ಬೌಲ್‌'ಗಾಗಿ ನಗರಕ್ಕೆ ಬರುತ್ತಿದ್ದ ಕಾಲೇಜು ಫುಟ್‌ಬಾಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಶುಗರ್​ ಬೌಲ್​ ಅಮೆರಿಕದೆಲ್ಲೆಡೆ ನಡೆಯುವ ವಾರ್ಷಿಕ ಕಾಲೇಜು​ ಫುಟ್ಬಾಲ್​ ಆಟವಾಗಿದೆ.

vehicle-drives-into-crowd-during-new-orleans-new-years-eve-celebration
ನಜ್ಜುಗುಜ್ಜಾದ ಟ್ರಕ್​ (AP)

ಆರ್ಲೆನ್ಸ್​ ಪೊಲೀಸ್​ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, "ಸಂಭ್ರಮಾಚಾರಣೆಗಾಗಿ ನಾವು ಶೇ 100ರಷ್ಟು ಸಿಬ್ಬಂದಿಗಳನ್ನು ನಿಯೋಜಿಸಿದ್ದೆವು. ಇನ್ನೂ ಹೆಚ್ಚುವರಿಯಾಗಿ 300ಕ್ಕೂ ಹೆಚ್ಚು ಅಧಿಕಾರಿಗಳನ್ನು ಕಾನೂನು ಜಾರಿ ಸಂಸ್ಥೆಯಿಂದ ಎರವಲು ಪಡೆದಿದ್ದೆವು" ಎಂದು ತಿಳಿಸಿರುವುದಾಗಿ ಸಿಎನ್​ಎನ್​ ವರದಿ ಮಾಡಿದೆ.

ನಗರದೆಲ್ಲೆಡೆ ಸ್ಥಳೀಯ, ರಾಜ್ಯ ಮತ್ತು ಫೆಡರಲ್​ ಸಹಭಾಗಿತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪೊಲೀಸ್​ ವಾಹನಗಳ ಜೊತೆಗೆ ಕಾಲ್ನಡಿಗೆ, ಬೈಕ್​ ಹಾಗೂ ಕುದುರೆಗಳ ಮೇಲೆಯೂ ಕೂಡ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ನಡುವೆಯೂ ಘಟನೆ ಸಂಭವಿಸಿದೆ.

ಸ್ಥಳದಲ್ಲಿ ಪೊಲೀಸರಿಂದ ಕಟ್ಟೆಚ್ಚರ (AP​)

'ಎಕ್ಸ್'​ ಜಾಲತಾಣದ ಮೂಲಕ ಸಾರ್ವಜನಿಕರಿಗೆ ನ್ಯೂ ಆರ್ಲಿನ್​​ ತುರ್ತು ಸಿದ್ಧತಾ ಪ್ರಚಾರ(ಎನ್​ಒಎಲ್​ಎ) ಸಂದೇಶ ರವಾನಿಸಿ, "ಕ್ಯಾನೆಲ್​ ಮತ್ತು ಬೌರ್ಬನ್​ ಸ್ಟ್ರೀಟ್​ನಲ್ಲಿ ಸಾಮೂಹಿಕ ಅಪಾಯದ ಘಟನೆ ಸಂಭವಿಸಿದೆ. ಈ ಪ್ರದೇಶದಿಂದ ದೂರವಿರಿ" ಎಂದು ಎಚ್ಚರಿಸಿದೆ.(ಐಎಎನ್​ಎಸ್​/ ಎಎನ್​ಐ)

ಇದನ್ನೂ ಓದಿ: 26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ ಸನ್ನಿಹಿತ

Last Updated : Jan 2, 2025, 10:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.