ಕರ್ನಾಟಕ

karnataka

ETV Bharat / bharat

ಸರ್ದಾರ್ ವಲ್ಲಭಭಾಯಿ ಪಟೇಲ್​ ಜನ್ಮದಿನ; ಏಕತಾ ದಿವಸ್​ನಲ್ಲಿ ಭಾಗಿಯಾದ ಪ್ರಧಾನಿ ಮೋದಿ - RASHTRIYA EKTA DIWAS PARADE

ಪಟೇಲರಿಗೆ ಗೌರವ ನಮನ ಸಲ್ಲಿಕೆಗೆ ಮುನ್ನ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಪ್ರಧಾನಿ, ದೇಶದ ಏಕತೆ ಮತ್ತು ಸರ್ವಭೌಮತೆ ಅವರ ಪ್ರಮುಖ ಆದ್ಯತೆ ಆಗಿತ್ತು ಎಂದು ತಿಳಿಸಿದ್ದಾರೆ.

PM Narendra Modi witnessed the Rashtriya Ekta Diwas parade
ಸರ್ದರ್​ ವಲ್ಲಭಬಾಯಿ ಪಟೇಲ್​ (ಐಎಎನ್​ಎಸ್​​)

By ETV Bharat Karnataka Team

Published : Oct 31, 2024, 10:16 AM IST

ಕೆವಡಿಯಾ, ಗುಜರಾತ್​: ಸರ್ದಾರ್​ ​​ ವಲ್ಲಭಾಭಾಯಿ ಪಟೇಲ್​ ಜನ್ಮದಿನದ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗುಜರಾತ್​ನ ಕೆವಡಿಯಾದಲ್ಲಿರುವ ಅವರ ಬೃಹತ್​ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು, ಹಾಗೇ ಏಕತಾ ದಿವಸ್​ ಕಾರ್ಯಕ್ರಮದಲ್ಲಿ ಭಾಗಿಯಾದರು.

ಪಟೇಲರಿಗೆ ಗೌರವ ನಮನ ಸಲ್ಲಿಕೆಗೆ ಮುನ್ನ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ದೇಶದ ಏಕತೆ ಮತ್ತು ಸಾರ್ವಭೌಮತೆ ಅವರ ಪ್ರಮುಖ ಆದ್ಯತೆ ಆಗಿತ್ತು ಎಂದು ತಿಳಿಸಿದರು.

ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ನನ್ನ ನಮನಗಳು. ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ರಕ್ಷಣೆ ಮಾಡುವುದು ಅವರ ಜೀವನದ ಪ್ರಮುಖ ಆದ್ಯತೆಯಾಗಿತ್ತು. ಅವರ ವ್ಯಕ್ತಿತ್ವ ಮತ್ತು ಕೆಲಸವು ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅವರು ಏಕತಾ ಪ್ರಮಾಣ ವಚನ ಬೋಧಿಸಿದರು. ಸರ್ದಾರ್​ ಪಟೇಲರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇನ್ನು ಈ ವೇಳೆ ನಡೆದ ಪರೇಡ್​ ಕಾರ್ಯಕ್ರಮದಲ್ಲಿ 9 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಕೇಂದ್ರ ಶಸಸ್ತ್ರ ಪೊಲೀಸ್​ ಪಡೆ, ಎನ್​ಸಿಸಿ ಭಾಗಿಯಾಗಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಇತರ ಗಣ್ಯರು ಕೂಡ ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಿದರು. ನವದೆಹಲಿಯ ಪಟೇಲ್ ಚೌಕ್‌ನಲ್ಲಿರುವ ಭಾರತದ ಮೊದಲ ಉಪ ಪ್ರಧಾನಿ ಮತ್ತು ಗೃಹ ಸಚಿವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಸರ್ದಾರ್​ ಪಟೇಲರು 1875ರಂದು ಗುಜರಾತ್​ನ ನಾಡಿಯಾಡ್​ನಲ್ಲಿ ಜನಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಭಾರತದ ಸ್ವಾತಂತ್ರ್ಯದ ಬಳಿಕ ರಾಷ್ಟ್ರೀಯ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಪ್ರಭುತ್ವದ ಆಡಳಿತದ ರಾಜ್ಯಗಳನ್ನು ದೇಶದೊಳಗೆ ವಿಲೀನ ಮಾಡುವಲ್ಲಿ ಇವರ ಕಾರ್ಯ ಪ್ರಮುಖವಾಗಿದೆ. ಇವರು ಭಾರತದ ಉಕ್ಕಿನ ಮನುಷ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಈ ಸೇವೆಗೆ ಗೌರವಾರ್ಥವಾಗಿ ಸರ್ದಾರ್​ ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಟಾಟಾ - ಏರ್‌ಬಸ್ ಸೌಲಭ್ಯ ಭಾರತದ ರಕ್ಷಣಾ ಪಯಣಕ್ಕೆ ಅದ್ಭುತದ ಕ್ಷಣವಾಗಿದೆ ಪ್ರಧಾನಿ ಮೋದಿ

ABOUT THE AUTHOR

...view details