ಕರ್ನಾಟಕ

karnataka

ETV Bharat / bharat

ಮೂರನೇ ಅವಧಿಗೂ ಮೋದಿ ಪ್ರಧಾನಿ ಆಗಲಿದ್ದಾರೆ: ರಾಜನಾಥ್ ಸಿಂಗ್ - PM Modi

ಜನತೆ ಪ್ರಧಾನಿ ಮೋದಿಯವರ ಬಗ್ಗೆ ಎಷ್ಟೊಂದು ವಿಶ್ವಾಸವನ್ನು ತೋರಿಸಿದ್ದಾರೆಂದರೆ, ಅವರೇ ಕೇಂದ್ರ ಸರ್ಕಾರದಲ್ಲಿ ಮೂರನೇ ಅವಧಿಗೆ ಆಡಳಿತ ನಡೆಸಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Rajnath Singh
ರಾಜನಾಥ್ ಸಿಂಗ್

By ANI

Published : Feb 22, 2024, 6:14 PM IST

ನಬರಂಗಪುರ (ಒಡಿಶಾ): ಪ್ರಧಾನಿ ಮೋದಿಯವರ ಬಗ್ಗೆ ಜನರು ಸಾಕಷ್ಟು ವಿಶ್ವಾಸ ಹೊಂದಿದ್ದಾರೆ. ಮೋದಿ ಅವರೇ ದೇಶದ ಪ್ರಧಾನಿಯಾಗಿ ಕೇಂದ್ರ ಸರ್ಕಾರದಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಒಡಿಶಾದ ನಬರಂಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್, ಜನತೆ ಪ್ರಧಾನಿ ಮೋದಿಯವರ ಬಗ್ಗೆ ಎಷ್ಟೊಂದು ವಿಶ್ವಾಸವನ್ನು ತೋರಿಸಿದ್ದಾರೆಂದರೆ, ಅವರು ಕೇಂದ್ರ ಸರ್ಕಾರದಲ್ಲಿ ಮೂರನೇ ಮತ್ತು ನಾಲ್ಕನೇ ಅವಧಿಯನ್ನೂ ಹೊಂದಿರುತ್ತಾರೆ ಎಂದು ತಿಳಿಸಿದರು. ರಕ್ಷಣಾ ಸಚಿವರು ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಎರಡು ದಿನಗಳ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆ ಮತ್ತು ಒಡಿಶಾ ವಿಧಾನಸಭಾ ಚುನಾವಣೆಯ ತಯಾರಿಗಾಗಿ ರಾಜನಾಥ್ ಒಡಿಶಾಗೆ ಭೇಟಿ ನೀಡಿದ್ದಾರೆ. ಇಂದು ಒಡಿಶಾದಲ್ಲಿ ಪಕ್ಷದ ಸದಸ್ಯರೊಂದಿಗೆ ಸಭೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜನಾಥ್ ಪಾಲ್ಗೊಂಡರು. ನಬರಂಗಪುರ ಮತ್ತು ಬೆರ್ಹಾಂಪುರ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರೆ, ಮಯೂರ್‌ಭಂಜ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು.

ನಬರಂಗಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್, ಬಿಜೆಪಿಯು ಏನು ಹೇಳುತ್ತದೋ ಅದನ್ನು ಮಾಡುವಂತಹ ಪಕ್ಷ. ಮೊದಲ ಬಾರಿಗೆ ಭಾರತದ ರಾಜಕೀಯದಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಈ ಸವಾಲನ್ನು ಸ್ವೀಕರಿಸಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿಯ ರಾಜಕೀಯ ಜಾತಿ, ಮತ ಮತ್ತು ಧರ್ಮದ ಮೇಲಲ್ಲ. ನಮ್ಮ ರಾಜಕೀಯದ ಅಡಿಪಾಯ ನ್ಯಾಯ ಮತ್ತು ಮಾನವೀಯತೆಯಾಗಿದೆ ಎಂದು ತಿಳಿಸಿದರು.

ಅಲ್ಲದೇ, 2014ರ ಮೊದಲು 70 ವರ್ಷಗಳಲ್ಲಿ ಕೇವಲ 18,000 ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗಿತ್ತು. ಆದರೆ, 2014ರ ನಂತರ ಕೇವಲ 10 ವರ್ಷಗಳಲ್ಲಿ ನಾವು 30,000 ಕಿ.ಮೀ. ರಸ್ತೆಗಳನ್ನು ನಿರ್ಮಿಸಿದ್ದೇವೆ. ವಿಮಾನ ನಿಲ್ದಾಣಗಳ ಸಂಖ್ಯೆಯೂ ದ್ವಿಗುಣಗೊಂಡಿದೆ. ಬಿಜೆಪಿ ಅಧಿಕಾರವಿಲ್ಲದೆ ರಾಜ್ಯಗಳಿಗೆ ನಾವು ಎಂದಿಗೂ ತಾರತಮ್ಯ ಮಾಡಿಲ್ಲ. ಬಿಜೆಪಿಗೆ ಸಾಮಾನ್ಯ ಜನರು ದೇವರೇ ಎಂದು ರಾಜನಾಥ್ ಸಿಂಗ್ ಹೇಳಿದರು.

ಬುಧವಾರ, ಆಂಧ್ರದ ವಿಶಾಖಪಟ್ಟಣಂನಲ್ಲಿ ನಡೆದ ಮಿಲನ್-2024 ಅಂತಾರಾಷ್ಟ್ರೀಯ ಸೆಮಿನಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಭಾಗವಹಿಸಿದ್ದರು. ಈ ಸಭೆಯನ್ನುದ್ದೇಶಿಸಿ ಮಾತನಾಡಿ, ಮಿಲನ್-2024 ಭಾರತೀಯ ನೌಕಾಪಡೆಯ ಅತಿದೊಡ್ಡ ಬಹುಪಕ್ಷೀಯ ನೌಕಾ ಅಭ್ಯಾಸವಾಗಿದೆ. ಹಾರ್ಬರ್ ಹಂತದಲ್ಲಿ ಭಾಗವಹಿಸುವ ಭಾರತೀಯ ಮತ್ತು ವಿದೇಶಿ ನೌಕಾಪಡೆಗಳ ಪ್ರಭಾವಶಾಲಿ ಯುದ್ಧನೌಕೆಯೊಂದಿಗೆ ವಿಶಾಖಪಟ್ಟಣಂನಲ್ಲಿ ಈ ಅಭ್ಯಾಸ ಪ್ರಾರಂಭವಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ಭ್ರಷ್ಟಾಚಾರ ಆರೋಪ: ಜಮ್ಮು- ಕಾಶ್ಮೀರ ಮಾಜಿ ಗವರ್ನರ್​ ಸತ್ಯಪಾಲ್​ ಮಲಿಕ್​ ಮನೆ ಮೇಲೆ ಸಿಬಿಐ ದಾಳಿ

ABOUT THE AUTHOR

...view details