ಹೈದರಾಬಾದ್: ತೆಲಂಗಾಣ ಮತ್ತು ಹೈದರಾಬಾದ್ ಅನ್ನು ಕೃತಕ ಬುದ್ಧಿಮತ್ತೆಯ (ಎಐ) ಅಭಿವೃದ್ಧಿ ಮತ್ತು ಅವಿಷ್ಕಾರದ ಜಾಗತಿಕ ಹಬ್ ಮಾಡುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ 3ಎಐ ಒಡಂಬಡಿಕೆಗೆ ತೆಲಂಗಾಣ ಸರ್ಕಾರ ಸಹಿ ಹಾಕಿದೆ.
ಐಟಿಇಅಂಡ್ಸಿ (ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ) ಇಲಾಖೆ ಮತ್ತು 3ಎಐ ಒಟ್ಟಾಗಿ ಎಐ ಸಮುದಾಯ ಮತ್ತು ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಬರುತ್ತಿದೆ. ಈ ಒಡಂಬಡಿಕೆಯಲ್ಲಿ ಎಐ ಸಮುದಾಯ ನಿರ್ಮಾಣ ಮತ್ತು ವಿವಿಧ ಉದ್ಯಮಗಳ ಮತ್ತು ಟೆಕ್ ಸೇವಾ ಸಂಸ್ಥೆಗಳ ಅನಾಲಿಟಿಕ್ಸ್ ನಾಯಕರ ಸಮುದಾಯವನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ.
ಇದು ಕೇವಲ ಎಐ ಹೊಸತನ ಮತ್ತು ಅದರ ಸುತ್ತಲಿನ ಕಾರ್ಯಕ್ರಮ ಮತ್ತು ನಾಯಕತ್ವವನ್ನು ಅಭಿವೃದ್ಧಿ ಮಾಡುವುದಿಲ್ಲ. ಬದಲಾಗಿ 3 ಎಐ ವೇದಿಕೆಯು ನಾಯಕತ್ವ ಮತ್ತು ಚಿಂತನೆ ಹಂಚಿಕೆಯ ನಿರ್ಮಾಣ ಮಾಡಲಿದೆ.
ದೇಶದಲ್ಲಿಯೇ ಮೊದಲು ತೆಲಂಗಾಣದ ಆಡಳಿತದಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ನಾವು ಹೊಸ ನಾಯಕರ ಸಮುದಾಯದ ಮತ್ತು ರಾಜ್ಯದಲ್ಲಿ ಎಐ ತಂತ್ರಜ್ಞಾನವನ್ನು ಸಕ್ರಿಯಗೊಳಿಸುತ್ತಿದ್ದೇವೆ ಎಂದು ಐಟಿ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ತಿಳಿಸಿದ್ದಾರೆ.