ETV Bharat / bharat

ಸ್ಪಾಟ್​​ ಬುಕ್ಕಿಂಗ್​ ರದ್ದು, ದಿನಕ್ಕೆ 80 ಸಾವಿರ ಭಕ್ತರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ: ಕೇರಳ ಸರ್ಕಾರ - SPOT BOOKING CLOSED IN SABARIMALA - SPOT BOOKING CLOSED IN SABARIMALA

ಶಬರಿಮಲೆಯಲ್ಲಿ ಭಕ್ತರ ದಟ್ಟಣೆಯನ್ನು ತಪ್ಪಿಸಲು ಕೇರಳ ಸರ್ಕಾರ ದರ್ಶನಕ್ಕಾಗಿ ಮುಂಗಡ ಆನ್​​ಲೈನ್​ ಬುಕ್ಕಿಂಗ್​ ಕಡ್ಡಾಯ ಮಾಡಿದೆ. ಸ್ಟಾಟ್​ ಬುಕ್ಕಿಂಗ್​​ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ (ETV Bharat)
author img

By ETV Bharat Karnataka Team

Published : Oct 6, 2024, 6:52 PM IST

ಕೊಟ್ಟಾಯಂ (ಕೇರಳ): ಶಬರಿಮಲೆಯಲ್ಲಿ ಭಕ್ತರ ದಟ್ಟಣೆಯನ್ನು ತಗ್ಗಿಸಲು ಈ ಬಾರಿ ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ವಾಮಿಯ ದರ್ಶನಕ್ಕಾಗಿ ಸ್ಥಳದಲ್ಲೇ ಬುಕ್ಕಿಂಗ್​ (ಸ್ಟಾಟ್​​ ಬುಕ್ಕಿಂಗ್​) ರದ್ದು, ದಿನಕ್ಕೆ 80 ಸಾವಿರ ಜನರಿಗೆ ದರ್ಶನ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ವಿ.ಎನ್​. ವಾಸವನ್​​, ಈ ವರ್ಷ ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂಗಡವಾಗಿಯೇ ಬುಕ್ಕಿಂಗ್​ ಮಾಡಿಕೊಳ್ಳಬೇಕು. ಕಾಯ್ದಿರಿಸದೆ ಬಂದ ಭಕ್ತರನ್ನು ತಪಾಸಣೆ ಮಾಡಲಾಗುವುದು. ಸ್ಪಾಟ್ ಬುಕ್ಕಿಂಗ್​ನಿಂದಾಗಿ ಭಕ್ತರ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚುತ್ತದೆ. ಇದರಿಂದ ದಟ್ಟಣೆ ಉಂಟಾಗಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಸ್ಪಾಟ್ ಬುಕ್ಕಿಂಗ್ ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದರು.

ಪಾರ್ಕಿಂಗ್​ ವ್ಯವಸ್ಥೆ ಹೆಚ್ಚಳ: ಶಬರಿಮಲೆಗೆ ಬರುವ ಭಕ್ತರಿಗೆ ಹೆಚ್ಚುವರಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗುವುದು. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಪಾರ್ಕಿಂಗ್​​ ನಿಗದಿ ಮಾಡಲಾಗಿದೆ. ದಿನಕ್ಕೆ ಗರಿಷ್ಠ 80 ಸಾವಿರ ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ನ್ಯಾಯಾಲಯದ ಆದೇಶದಂತೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಶಬರಿಮಲೆಯಲ್ಲಿ ವರದಿ ಮಾಡಲು ಅವಕಾಶ. ದೇವಸ್ವಂ ಮಂಡಳಿ ನೀಡುವ ವಿಶೇಷ ಪಾಸ್ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ಎಲ್ಲ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಶಬರಿಮಲೆ ಮಂಡಲ ಮಕರವಿಳಕ್ಕು ಮಹೋತ್ಸವದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ಬುಕ್ಕಿಂಗ್ ಸಮಯದಲ್ಲಿ ತಮ್ಮ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ಜನಸಂದಣಿ ಇರುವ ಮಾರ್ಗಗಳನ್ನು ಆಯ್ಕೆ ಮಾಡಲು ಅವರಿಗೆ ಸಹಾಯ ಮಾಡಲಾಗುತ್ತದೆ. ವನಮಾರ್ಗದಲ್ಲಿ ಬರುವ ಭಕ್ತರಿಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಆನ್​​ಲೈನ್​ ಬುಕ್ಕಿಂಗ್​ ಕಡ್ಡಾಯ: ಭಕ್ತರ ದಟ್ಟಣೆ ಅವಧಿಯಲ್ಲಿ ನಿಗದಿತ ಕೇಂದ್ರಗಳನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ಇಡಲಾಗುವುದು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಬರಿಮಲೆಗೆ ಹೋಗುವ ರಸ್ತೆಗಳು ಮತ್ತು ಪಾರ್ಕಿಂಗ್ ಪ್ರದೇಶಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕಳೆದ ಬಾರಿ ಮುಂಗಡ ಕಾಯ್ದಿರಿಸಿಕೊಳ್ಳದ ಭಕ್ತರು ಸ್ಪಾಟ್​​ ಬುಕ್ಕಿಂಗ್​ ಮಾಡಿಕೊಂಡಿದ್ದರಿಂದ ಭಾರೀ ದಟ್ಟಣೆ ಉಂಟಾಗಿತ್ತು. ಕೆಲವೆಡೆ ಲಕ್ಷಾಂತರ ಭಕ್ತರು ಒಟ್ಟುಗೂಡಿದ್ದರು. ಇದರಿಂದ ಸೌಕರ್ಯಗಳ ಕೊರತೆ ಉಂಟಾಗಿತ್ತು. ಇದನ್ನು ತಪ್ಪಿಸಲು ಈ ಬಾರಿ ಮುಂಚಿತ ಆನ್​​ಲೈನ್​ ಬುಕ್ಕಿಂಗ್​ ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ ಮಾಡುವುದರಲ್ಲಿ ಮುಸ್ಲಿಮರೇ ಅತ್ಯಧಿಕ: ಎಡಪಕ್ಷದ ಶಾಸಕ ಜಲೀಲ್ ಆರೋಪ - GOLD SMUGGLING

ETV Bharat Logo

Copyright © 2025 Ushodaya Enterprises Pvt. Ltd., All Rights Reserved.