ETV Bharat / state

ಡ್ರಗ್ಸ್​ ಚಟಕ್ಕೆ ಒಳಗಾಗಿದ್ದ ಪುತ್ರನಿಗೆ ಬೈದು ಬುದ್ಧಿ ಹೇಳಿದ್ದಕ್ಕೆ ತಂದೆ ಎದೆಗೆ ಇರಿದು ಕೊಂದ! - SON KILLS FATHER

ಮಾದಕ ವ್ಯಸನದಿಂದ ಹೊರ ಬಾ ಎಂದು ಬೈದು ಬುದ್ಧಿ ಹೇಳಿದ ತಂದೆಗೆ ಇರಿದು ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ.

MAN STABBED TO DEATH
ಆರೋಪಿ ಅಮಿತ್ (ETV Bharat)
author img

By ETV Bharat Karnataka Team

Published : Feb 17, 2025, 10:58 PM IST

ಬೆಂಗಳೂರು: ಮಾದಕ ವ್ಯಸನಕ್ಕೆ ದಾಸನಾಗಿದ್ದರಿಂದ ಬೈದು ಬುದ್ಧಿ ಹೇಳಿದ ತಂದೆಯ ಎದೆಗೆ ಮಗನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.

ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಚನ್ನಬಸವಯ್ಯ (61) ಹತ್ಯೆಯಾದ ತಂದೆ. ಅಮಿತ್ (21) ತಂದೆಯನ್ನು ಹತ್ಯೆ ಮಾಡಿದ ಮಗ.

ಪ್ರತಿ ದಿನ ಇದೇ ವಿಚಾರಕ್ಕೆ ಅಪ್ಪ - ಮಗನ ನಡುವೆ ಗಲಾಟೆ ನಡೆಯುತ್ತಿತ್ತು.‌ ಸೋಮವಾರ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಅಪ್ಪ ಚನ್ನಬಸವಯ್ಯ ಮಗನಿಗೆ ಈ ಚಟದಿಂದ ಮುಕ್ತಿಹೊಂದಿ ಒಳ್ಳೆ ಬಟ್ಟೆ ಹಾಕೊಂಡು ಕೆಲಸ ಮಾಡು ಎಂದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಮಗ ಅಮಿತ್ ತಂದೆ ಚನ್ನಬಸವಯ್ಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ‌. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಚನ್ನಬಸವಯ್ಯ ಸಾವನ್ನಪ್ಪಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಅಮಿತ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: 20 ನಿಮಿಷ ಅಂತರದಲ್ಲಿ ನಾಲ್ವರಿಗೆ ಚಾಕು ಇರಿದಿದ್ದ ರೌಡಿಶೀಟರ್ ಸೆರೆ

ಇದನ್ನೂ ಓದಿ: ಬೆಂಗಳೂರು: 5 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.