ETV Bharat / technology

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಆ್ಯಪಲ್​ ಐಫೋನ್​ 16ಇ; ಬೆಲೆ, ವೈಶಿಷ್ಟ್ಯತೆಗಳು ಹೀಗಿವೆ - APPLE IPHONE 16E

ಆ್ಯಪಲ್​ 16ಇ ಎಂಟ್ರಿಲೆವೆಲ್​ ಮಾಡೆಲ್​ ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಕಡಿಮೆ ದರದಲ್ಲಿ ಬಿಡುಗಡೆ ಮಾಡಿದೆ.

apple-iphone-16e-with-a18-chip-48mp-camera-launched-in-india-prices-specifications-more
ಐಫೋನ್​ 16ಇ (Apple)
author img

By ETV Bharat Karnataka Team

Published : Feb 20, 2025, 2:11 PM IST

ಹೈದರಾಬಾದ್​ : ಆ್ಯಪಲ್​ ಕಂಪನಿಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಐಫೋನ್​ 16ಇ ಮೊಬೈಲ್ ಅನ್ನು ಪರಿಚಯಿಸಿದೆ. ಪ್ರವೇಶ ಹಂತದ ಮಾದರಿಯ ಆ್ಯಪಲ್​ ಈ ಮೊಬೈಲ್​ ಐಫೋನ್​ 16 ಸರಣಿಯದ್ದಾಗಿದ್ದು, ಬೇಸ್​ ಮಾಡೆಲ್​ 59,999ಕ್ಕೆ ಲಭ್ಯವಾಗಲಿದೆ. ಐಫೋನ್​ 16ರ ಸೀರಿಸ್​ನಂತೆ 6.1 ಇಂಚ್​ನ ಒಎಲ್​ಇಡಿ ಡಿಸ್​ಪ್ಲೇ ಹಾಗೂ ಎ18 ಚಿಪ್​ಸೆಟ್​ ಇದರಲ್ಲಿದೆ. ಆ್ಯಪಲ್​ ಇಂಟಲಿಜೆನ್ಸಿ ಸಪೋರ್ಟ್​​ ಹೊಂದಿರುವ ಈ ಐಫೋನ್​ 16ಇ ಸಿಂಗಲ್​ 48ಎಂಪಿ ರೇರ್​ ಕ್ಯಾಮರಾ ಹಾಗೂ ಪ್ರೋಗ್ರಾಮೇಬಲ್​ ಆಕ್ಷನ್​ ಬಟನ್​ ಹೊಂದಿದೆ.

ದರ ಮತ್ತು ಲಭ್ಯತೆಯ ಮಾಹಿತಿ :

ಐಫೋನ್​ 16ಇ 128ಜಿಬಿ, 256ಜಿಬಿ ಮತ್ತು 512ಜಿಬಿ ಮೂರು ಸ್ಟೋರೇಜ್​ನಲ್ಲಿ ಲಭ್ಯವಿದೆ. 12ಜಿಬಿ ಸ್ಟೋರೆಜ್​ ಮಾಡೆಲ್​ ₹59,999 ಆದರೆ, 256 ಜಿಬಿ ಮಾಡೆಲ್​ ₹68,999 ಹಾಗೂ 512ಜಿಬಿ 89,000 ರೂಪಾಯಿ ಇದೆ.

ಈ ಮೊಬೈಲ್​ ಕೊಳ್ಳಲು ಗ್ರಾಹಕರು ಫೆ. 21ರಿಂದ ಪ್ರಿ ಆರ್ಡರ್​ ಮಾಡಬೇಕಿದ್ದು, ಫೆ. 28ರಿಂದ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಇದು ಕಪ್ಪು ಮತ್ತು ಬಿಳಿ ಎರಡೇ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಮೊಬೈಲ್​ ವೈಶಿಷ್ಟ್ಯಗಳು : ಈ ಹೊಸ ಐಫೋನ್​ 16ಇ, 6.1 ಇಂಚು ಒಎಲ್​ಇಡಿ ಡಿಸ್​ಪ್ಲೇ ಜೊತೆಗೆ 60 ಹರ್ಟ್​​ ರಿಫ್ರೆಶ್​ ರೇಟ್​ ಹಾಗೂ 800ನಿಟ್ಸ್​​ ಬ್ರೈಟ್​ನೆಸ್​ ಹೊಂದಿದೆ. ಸೆರಮಿಕ್​ ಶೀಲ್ಡ್​​ ಮಟಿರಿಯಲ್​ ಬಳಕೆಯನ್ನು ಹೊಂದಿದ್ದು, ಐಫೋನ್​ 16 ಸರಣಿಯ 3ಎನ್​ಎಂ ಎ18 ಚಿಪ್​ಸೆಟ್​ ಹೊಂದಿದೆ. ಐಫೋನ್​ 15 ಪ್ರೊ ಹಾಗೂ ಐಫೋನ್​ 16 ಸರಣಿಯ ಆ್ಯಪಲ್​ ಇಂಟಲಿಜೆನ್ಸ್​​ ವೈಶಿಷ್ಟ್ಯವನ್ನು ಹೊಂದಿದೆ.

ಐಫೋನ್​ 16ಇ ಸಿಂಗಲ್​ 48ಎಂಪಿ ರೇರ್​ ಕ್ಯಾಮರಾದ ಜೊತೆಗೆ ಹಿಂಬದಿಯಲ್ಲಿ ಒಐಎಸ್ ಹಿಂದಿದ್ದು, ಮುಂದೆ 12ಎಂಪಿ ಟ್ರೂಡೆಪ್ತ್​​ ಕ್ಯಾಮರಾ ಇದರಲ್ಲಿದೆ. ಇದಕ್ಕಿಂತ ಹೆಚ್ಚಾಗಿ ಇದು ಫೇಸ್​ಐಡಿ ಹಾಗೂ ಟಚ್​ ಐಡಿ ಫೀಚರ್​ ಹೊಂದಿದೆ. ಇನ್ನು ಬ್ಯಾಟರಿ ವಿಶೇಷತೆ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ. ಆದರೆ ಅತ್ಯುತ್ತಮ ಬ್ಯಾಟರಿ ಲೈಫ್​ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಯುಎಸ್​ಬಿ ಟೈಪ್​- ಸಿ ಪೋರ್ಟ್​ ಚಾರ್ಜಿಂಗ್​, 18ಡಬ್ಲ್ಯೂ ವೈರ್ಡ್​ ಮತ್ತು 7.5 ವೈರ್​ಲೆಸ್​ ಚಾರ್ಜಿಂಗ್​ ಇದೆ. 5ಜಿ, 4ಜಿ ಎಲ್​ಟಿಇ, ವೈಫೈ6. ಬ್ಲೂಟೂತ್​​ 5.3, ಎನ್​ಎಫ್​ಸಿ​ ಹಾಗೂ ಜಿಪಿಎಸ್​ ಸಂಪರ್ಕವನ್ನು ಹೊಂದಿದೆ. ಹೆಚ್ಚುವರಿಯಾಗಿ ಆಯ್ಕೆ ಮಾಡಿದ ಪ್ರದೇಶದ ಸ್ಯಾಟಲೈಟ್​ ಮೂಲಕ ಎಸ್​ಒಎಸ್​ ತುರ್ತು ಬೆಂಬಲವನ್ನು ಬಳಕೆದಾರರು ಆಪತ್ತಿನ ಕಾಲದಲ್ಲಿ ಪಡೆಯಬಹುದು.

ಇದನ್ನೂ ಓದಿ: ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಟೆಸ್ಲಾ ಕಾರು: ಬೆಲೆ ಎಷ್ಟು ಗೊತ್ತಾ?

ಇದನ್ನೂ ಓದಿ: ಬೆಂಗಳೂರಿನಲ್ಲಿ ಗೂಗಲ್‌ 'ಅನಂತ' ಲೋಕ ಸೃಷ್ಟಿಸಿದ್ದೇಕೆ? ಇಲ್ಲಿ ಏನೇನಿದೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.